ಪೌರಕಾರ್ಮಿಕರಿಗೆ ನಿವೇಶನದ ಹಕ್ಕುಪತ್ರ ವಿತರಣೆ

Get real time updates directly on you device, subscribe now.

ಕೊಪ್ಪಳ : ಕೊಪ್ಪಳ ಜಿಲ್ಲಾ ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ  ಶಿವಕುಮಾರ್ ಕಟ್ಟಿಮನಿ, ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಉಪಾಧ್ಯಕ್ಷರಾದ ಅಶ್ವಿನ್ ಬಿ ಗದುಗಿನ ಮಠ ರವರ ಸಮ್ಮುಖದಲ್ಲಿ ಮಂಗಳವಾರದಂದು ನಗರಸಭೆ ಕಚೇರಿಯಲ್ಲಿ
ಪೌರಕಾರ್ಮಿಕರಿಗೆ ನಿವೇಶನ ಹಕ್ಕುಪತ್ರವನ್ನು ವಿತರಿಸಲಾಯಿತು.
 ಈ ಸಂದರ್ಭದಲ್ಲಿ ಪೌರ ನೌಕರರ ಸಂಘದ  ಶಾಖಾ ಅಧ್ಯಕ್ಷ ಮೈಲಪ್ಪ ಕಾರಟಗಿ, ರಾಜ್ಯ ಪರಿಷತ್ ಸದಸ್ಯ ದುರ್ಗಪ್ಪ ಕಂದಾರಿ ಹಾಗೂ ಉಪಾಧ್ಯಕ್ಷ ಮಾರುತಿ ದೊಡ್ಡಮನಿ,  ಖಜಾಂಚಿ ನಿಂಗಪ್ಪ ಡೊಳ್ಳಿನ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.
ನಿವೇಶನ ಹಕ್ಕುಪತ್ರ ವಿತರಿಸಿದ ಗಣ್ಯರಿಗೆ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದಿಂದ ಅಭಿನಂದಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!