ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ

0

Get real time updates directly on you device, subscribe now.

Koppal   ಸಂಪೂರ್ಣ ಸರ್ಕಾರ ಮತ್ತು ಸಂಪೂರ್ಣ ಸಮಾಜವನ್ನು ಒಳಗೊಂಡಂತೆ ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಒಂದು ಅಭಿಯಾನವು Just Rights Children Alliance, India ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಜೊತೆಗಿನ ಸತತ ಪ್ರಯತ್ನದಿಂದ ಜಾರಿಗೊಳಿಸಿದ್ದು  ನವದೆಹಲಿಯ ವಿಜ್ಞಾನಭವನದಲ್ಲಿ ಚಾಲನೆಗೊಳಿಸಲು ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವಾಲಯದಿ೦ದ ಉದ್ಘಾಟಿಸಿದ್ದು .ಇವತ್ತಿನ ದಿನ ಕೊಪ್ಜಿಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಗ್ರಾಮಗಳಾದ,ಟಣಕನ ಕಲ್ ಮತ್ತು ಕುಕನೂರು ತಾಲ್ಲೂಕಿನ ನಿಟ್ಟಾಲಿಯಲ್ಲಿ  ,ಸಮುದಾಯದ ಜನರಿಗೆ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ   ಕೂಡಾ ಈ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಬಾಲ್ಯವಿವಾಹದ ಮತ್ತು ಅದರಿ೦ದಾಗುವ ಪರಿಣಾಮಗಳು,ಹಾಗೂ ಬಾಲ್ಯವಿವಾಹವು ಕೇವಲ ಹಳೆಯ ಸಾಮಾಜಿಕ ಅನಿಷ್ಟವಲ್ಲ, ಆದರೆ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವ ಘೋರ ಅಪರಾಧವಾಗಿದೆ. ಬಾಲ್ಯವಿವಾಹವು ಮೂಲಭೂತ ಮಾನವ ಹಕ್ಕುಗಳನ್ನು ಉಲ್ಲಂಘಿಸುವ “ಮಕ್ಕಳ ವಿರುದ್ಧದ ಅಪರಾಧ” ಆಗಿದೆ, ಅಪ್ರಾಪ್ತ ಬಾಲಕಿಯರನ್ನು ಮದುವೆಯಾಗಲು ಮತ್ತು ಮಾನಸಿಕ ಆಘಾತ, ದೈಹಿಕ ಮತ್ತು ಜೈವಿಕ ಒತ್ತಡ, ಕೌಟುಂಬಿಕ ಹಿಂಸಾಚಾರ ಸೇರಿದಂತೆ ಶಿಕ್ಷಣಕ್ಕೆ ಸೀಮಿತ ಪ್ರವೇಶ ಮತ್ತು ಕೌಟುಂಬಿಕ ಹಿಂಸಾಚಾರಕ್ಕೆ ಹೆಚ್ಚಿನ ದುರ್ಬಲತೆಯ ಜೀವನವನ್ನು ಬಲವಂತಪಡಿಸಲಾಗುತ್ತದೆ. ಬಾಲ್ಯ ವಿವಾಹದ ಪರಿಣಾಮಗಳು ತೀವ್ರ ಮತ್ತು ವ್ಯಾಪಕವಾಗಿವೆ.ಕಾನೂನು ಚೌಕಟ್ಟಿನಲ್ಲಿ ವಿವಾಹಕ್ಕೆ ನಿಗದಿಯಾದ ವಯಸ್ಸಿನ ಮಿತಿಯ ಬಳಿಕವೇ ಮಕ್ಕಳ ಮದುವೆ ಮಾಡಿಸುವುದು ಸರಿಯಾದದು. ಇಲ್ಲದಿದ್ದರೆ, ಓದಿಗೆ ಸಮಸ್ಯೆಯಾಗುತ್ತದೆ. ಮಕ್ಕಳ ಭವಿಷ್ಯದ ಮೇಲೂ ಪರಿಣಾಮ ಬೀರುತ್ತದೆ, ಅರಿವೂ ಮೂಡಿಸುತ್ತಾ. ಬಾಲ್ಯ ವಿವಾಹ ನಿಷೇದ ಕುರಿತು ಕರಪತ್ರಗಳನ್ನು ಹ೦ಚಲಾಯಿತು, ಬಾಲ್ಯ ವಿವಾಹ ನಿಷೇದ ಕುರಿತು ಪ್ರತಿಜ್ಞಾ ವಿಧಿಯನ್ನು ಸ್ವಿಕರಿಸಲಾಯಿತು, ಕಾರ್ಯಕ್ರಮವು ಎಲ್ಲ ಗ್ರಾಮಗಳಲ್ಲಿ ಚುನಾಯಿತ ,ಪ್ರತಿನಿಧಿಗಳು,ಗ್ರಾ೦,ಪ೦,ಸಿಬ್ಬ೦ದಿಗಳು, ಶಿಕ್ಷಣ ಇಲಾಖೆ ಸಿಬ್ಬ೦ದಿಗಳು, ಆಶಾ ಕಾರ್ಯಕರ್ತೆಯರು,ಅ೦ಗನವಾಡಿ ಕಾರ್ಯಕರ್ತೆಯರು,ಆರೋಗ್ಯ ಇಲಾಖೆ ಸಿಬ್ಬ೦ದಿಗಳು, ಹಾಗೂ ಎಲ್ಲಾ ಗ್ರಾಮದ ಸಾರ್ವಜನಿಕರು ಭಾಗಿಯಾಗಿ ಕಾರ್ಯಕ್ರಮವನ್ನು ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು, ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನವನ್ನು ಸ್ಪಂದನ ಸಂಸ್ಥೆ, ಕಾರ್ಯದರ್ಶಿಗಳಾದ ಶ್ರೀಮತಿ ವಿ.ಸುಶೀಲ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಸಂಯೋಜಕರಾದ ಶಂಕರ್.ಡಿ.ಸುರಳ್  ,ಕೃಷ್ಣ, ಶಾಂತಾ,ಗವಿಸಿದ್ದಪ್ಪ ಹಲಗಿ , ,  ,  ಭಾಗಿಯಾಗಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!