ಸೇನಾ ಆಯ್ಕೆಯ ಪೂರ್ವ ಸಿದ್ದತೆ ತರಬೇತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಸೇನಾ ಆಯ್ಕೆಯ ಪೂರ್ವ ಸಿದ್ದತೆ ತರಬೇತಿಯು ಬಾಲಕರಿಗೆ ಮಾತ್ರವಿದ್ದು, ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ಗರಿಷ್ಠ ವಾರ್ಷಿಕ ಆದಾಯ ಮಿತಿ ಪ್ರವರ್ಗ-1 ರೂ.2.50 ಲಕ್ಷಗಳು ಹಾಗೂ ಪ್ರವರ್ಗ-2(ಎ), 3(ಎ) ಹಾಗೂ 3(ಬಿ) ಗಳಿಗೆ ರೂ.1 ಲಕ್ಷಕ್ಕೆ ಮೀರಿರಬಾರದು. ಕನಿಷ್ಟ ವಿದ್ಯಾರ್ಹತೆ ಅಭ್ಯರ್ಥಿಯು 10ನೇ ತರಗತಿಯನ್ನು ಉತ್ತಿರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳನ್ನು ಮತ್ತು ಸರಾಸರಿ ಶೇ.45ರಷ್ಟು ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಂ ಇದ್ದಲ್ಲಿ ಮೇಲ್ಕಂಡಂತೆ ಸಮಾನವಾದ ಗ್ರೇಡ್ ಪಡೆದಿರಬೇಕು.
ಜನ್ಮ ದಿನಾಂಕ ಮತ್ತು ವಯಸ್ಸು 10ನೇ ತರಗತಿಯ ಅಂಕ ಪಟ್ಟಿಯಲ್ಲಿರುವಂತೆ 2024ರ ಅಕ್ಟೋಬರ್ 30ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯು ವಯಸ್ಸನ್ನು ಪರಿಗಣಿಸಲಾಗುವುದು. ಅಭ್ಯರ್ಥಿಯು 2004ರ ಅಕ್ಟೋಬರ್ 30 ರಿಂದ 2007ರ ಅಕ್ಟೋಬರ್ 30ರ ನಡುವಿನ ಅವಧಿಯಲ್ಲಿ ಜನಸಿರಬೇಕು. ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳ ತರಬೇತಿಯನ್ನು ಜಿಲ್ಲೆಯ ಕನಕಗಿರಿಯಲ್ಲಿರುವ ಸೇನಾ ಆಯ್ಕೆ ಪೂರ್ವ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಅರ್ಜಿ ಸಲ್ಲಸುವ ಡಿ.20 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ ಜಿಲ್ಲಾ ಆಡಳಿತ ಭವನ ಹೊಸಪೇಟೆ ರಸ್ತೆ ಕೊಪಳ ಇಲ್ಲಿ ಪಡೆದು ಈ ಕಛೇರಿಯಲ್ಲಿಯೇ ಖುದ್ದಾಗಿ ಅರ್ಜಿಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ: 08539-221606 ಗೆ ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ 10.30 ರಿಂದ ಸಂಜೆ 5.30 ರವರಗೆ ಸಂಪರ್ಕಿಸುವAತೆ ಕೊಪ್ಪಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.