ಕನಕಗಿರಿ ತರಬೇತಿ ಕೇಂದ್ರಕ್ಕೆ ಸೈನ್ಯಾಧಿಕಾರಿ, ಮಾಜಿ ಸೈನಿಕರ ನಿಯೋಜನೆಗೆ ಆಹ್ವಾನ

Get real time updates directly on you device, subscribe now.

: ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿರುವ ತರಬೇತಿ ಕೇಂದ್ರಕ್ಕೆ ಹೊರಸಂಪನ್ಮೂಲದ ಒಬ್ಬರು ಸೈನ್ಯಾಧಿಕಾರಿ ಹಾಗೂ ಒಬ್ಬರು ಮಾಜಿ ಸೈನಿಕರ ನಿಯೋಜನೆ ಮಾಡಲಾಗುತ್ತಿದೆ ಎಂದು ಬಾಗಲಕೋಟೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಕನಕಗಿರಿ ಪಟ್ಟಣದಲ್ಲಿ ಸರ್ಕಾರದ ಆದೇಶದಂತೆ ಹೊಸದಾಗಿ ಆರಂಭಗೊಂಡ ತರಬೇತಿ ಕೇಂದ್ರದಲ್ಲಿ ಬಾರತೀಯ ಸೇನೆ, ಇತರೆ ಯೂನಿಪಾರ್ಮ ಸೇವೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಓರ್ವ ಸೈನ್ಯಾಧಿಕಾರಿ ಹಾಗೂ ಓರ್ವ ಮಾಜಿ ಸೈನಿಕ(ದೈಹಿಕ ತರಬೇತಿದಾರ)ರನ್ನು ಬಾಗಲಕೋಟ ಹಾಗೂ ಕೊಪ್ಪಳದಿಂದ ಹೊರಸಂಪನ್ಮೂಲದ ಆಧಾರದ ಮೇಲೆ ನಿಯೋಜಿಸಿಕೊಳ್ಳಲಾಗುವುದು. ಸೈನ್ಯಾಧಿಕಾರಿಗಳಿಗೆ ರೂ. 70,000 ಹಾಗೂ ಮಾಜಿ ನಿವೃತ್ತ ಸೈನಿಕರಿಗೆ ರೂ. 40,000 ಕಾಲೋಚಿತ ಗೌರವಧನ ನೀಡಲಾಗುವುದು. ಕೊಪ್ಪಳ ಹಾಗೂ ಸೈನ್ಯದಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.
ಆಸಕ್ತ ಮಾಜಿ ಸೈನಿಕರು ಡಿಸೆಂಬರ್ 7ರೊಳಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟೆ ಇವರಿಗೆ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08354-235434 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!