ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜೀ ವಹಿಸಬೇಕು: ಸಿ.ಎಚ್.ಓ ಬಸವರಾಜ ಚೋಕಾವಿ
ಕುಷ್ಟಗಿ.ನ.30: ಆರೋಗ್ಯವೇ ಭಾಗ್ಯ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜೀವಹಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿ.ಎಚ್.ಓ ಬಸವರಾಜ ಚೋಕಾವಿ ಹೇಳಿದರು.
ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ ಕೊಪ್ಪಳ, ಲಾಯನ್ಸ್ ಕಣ್ಣಿನ ಆಸ್ಪತ್ರೆ ಕೊಪ್ಪಳ, ವಿನಾಯಕ ಆಪ್ಟಿಕಲ್ಸ್
ಮತ್ತು ಕಣ್ಣಿನ ತಪಾಸಣಾ ಕೇಂದ್ರ ಕುಷ್ಟಗಿ ಹಾಗೂ ಗ್ರಾಮ ಪಂಚಾಯತ್ ಕಾರ್ಯಾಲಯ ಶಿರಗುಂಪಿ, ವಿನಾಯಕ ನೇತ್ರ ಸೇವಾ ಸಂಸ್ಥೆ (ರಿ) ಕೊಪ್ಪಳ ಅವರುಗಳು ಸಂಯುಕ್ತ ಆಶ್ರಯದಲ್ಲಿ ಶಿರಗುಂಪಿ ಗ್ರಾಮ ಪಂಚಾಯತಿಯಲ್ಲಿ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು
ಪಂಚೇಯೇಂದ್ರಿಗಳಲ್ಲಿ ಕಣ್ಣು ಬಹು ಮುಖ್ಯ ಅಂಗ ಸಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು.
ಸರಕಾರ ಬಡ ಜನರ ಆರೋಗ್ಯ ಸುಧಾರಣೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ ಅವುಗಳನ್ನು ಸದುಪಯೋಗಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಕಾಳಪ್ಪ ಬಡಿಗೇರ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿದರು.
ವಿನಾಯಕ ನೇತ್ರ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಪಲ್ಲೇದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಂಬರೇಶ ಪೋಲಿಸ್ ಪಾಟೀಲ್, ಶೇಖರಗೌಡ ಪೋಲಿಸ್ ಪಾಟೀಲ್, ಮೌಲಾಬೀ ಮದ್ನಾಳ, ದೊಡ್ಡಬಸಪ್ಪ ಹಿರೇಗೌಡರ, ನೇತ್ರಾಧಿಕಾರಿ ಸಚಿನ್ ಮಳಿಮಠ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ ದಾಸರ, ದೋಟಿಹಾಳ ಪತ್ರಕರ್ತರಾದ ತಿರುಪತಿ ಎಲಿಗಾರ, ಚಂದ್ರಶೇಖರ ಕುಂಬಾರ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶರಣಮ್ಮ ಹೂಗಾರ, ತಾವರಗೇರಿ ಉಪ ವಲಯ ಅರಣ್ಯಾಧಿಕಾರಿ ಆದೇಶ ಕೆರಿಯೊಡ್ಡಿ, ಕುಷ್ಟಗಿ ಉಪ ವಲಯ ಅರಣ್ಯಾಧಿಕಾರಿ ಗುರುರಾಜ ಬಾಳಿ, ಪ್ರಭು ಜಾಗೀರದಾರ, ಹನುಮಂತಪ್ಪ ಹೊಟ್ಟಿ, ಗ್ಯಾನಪ್ಪ, ಬಾಲಪ್ಪ, ಎಂ.ಬಿ.ಕೆ ಶಾರದಾ ತಳವಗೇರಿ, ಎಲ್.ಸಿ.ಆರ್.ಪಿಗಳು ಆಶಾ ಕಾರ್ಯಕರ್ತರು ಮತ್ತು ಶಿರಗುಂಪಿ ಗ್ರಾಮದ ಸುತ್ತ ಮುತ್ತಲಿನ ಗ್ರಾಮದ ಜನರು ಶಿಬಿರದಲ್ಲಿ ಭಾಗವಹಿಸಿದ್ದರು.
ಸುಮಾರು 120ಕ್ಕು ಹೆಚ್ಚು ಜನರ ಕಣ್ಣಿನ ತಪಾಸಣೆ ಮಾಡಿಸಿಕೊಂಡರು.
ಅವರುಗಳ ಪೈಕಿ ಪೊರೆ ಹೊಂದಿದೆ ಸುಮಾರು 38 ಜನರು ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು.