ಕಟ್ಟಡ ಕಾರ್ಮಿಕರ ಸಮಸ್ಯೆಗಳ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲು ಆಗ್ರಹ

0

Get real time updates directly on you device, subscribe now.

ಗಂಗಾವತಿ: ರಾಜ್ಯದ ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರುಗಳ ಕ್ಷೇಮಾಭಿವೃದ್ಧಿಗಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಯಾಗಿ, ಸರ್ಕಾರವು ಜಾರಿಗೊಳಿಸಿ ವಿವಿಧ ಯೋಜನೆಗಳ ಸೌಲಭ್ಯಗಳು ಕಾರ್ಮಿಕರುಗಳಿಗೆ ಮರಿಚಿಕೆಯಾಗಿವೆ ಎಂದು ಹೈದ್ರಾಬಾದ್ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘದ ಹೈದ್ರಾಬಾದ್-ಕರ್ನಾಟಕ ವಿಭಾಗದ ಅಧ್ಯಕ್ಷರಾದ ಹನುಮಂತಪ್ಪ ಐಹೊಳೆ ಕಳವಳ ವ್ಯಕ್ತಪಡಿಸಿದ್ದಾರೆ.
ಅವರು ಶುಕ್ರವಾರ ಶಾಸಕರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಕಾರ್ಮಿಕ ಇಲಾಖೆಯು ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣದ ಕುಟುಂಬಗಳ ಕ್ಷೇಮಾಭಿವೃದ್ಧಿಗಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವದಕ್ಕಾಕೀ ಹಿಂದೆ ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಸಲಾಗಿತ್ತು, ಸದರಿ ತಂತ್ರಾಂಶವನ್ನು ರದ್ದುಗೊಳಿಸಿ, ಇಲಾಖೆಯ ಸಾಪ್ಟವೇರ ಅಳವಡಿಸಿದ್ದು, ಹಿಂದಿನ ತಂತ್ರಾಂಶದಲ್ಲಿ ಕಾರ್ಮಿಕರುಗಳು ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸದೇ ನಿರ್ಲಕ್ಷಿಸಿದ್ದು ಹಿಂದಿನ ತಂತ್ರಾಂಶಗಳನ್ನು ಮಾನ್ಯ ಮಾಡಬೇಕು, ಕಾರ್ಮಿಕರುಗಳಿಗೆ ಸಂಬಂದಿಸಿದಂತೆ ಸರ್ಕಾರದ ಯೋಜನೆಗಳಾದ ಮದುವೆ, ವೈಧ್ಯಕೀಯ ವೆಚ್ಚ, ಮರಣದ ಧನಸಹಾಯಗಳು ಸ್ಥಗಿತವಾಗಿ ೬-೮ ತಿಂಗಳುಗಳೇ ಗತಿಸಿದೆ. ಕಾರ್ಮಿಕರ ಮಕ್ಕಳ ವಿಧ್ಯಾಭ್ಯಾಸ ಶೈಕ್ಷಣಿಕ ಧನ ಸಹಾಯವು ಕಳೆದ ೦೩ ವ?ಗಳಿಂದಲೂ ಸ್ಥಗಿತವಾಗಿದ್ದು, ಈ ಕುರಿತಂತೆ ಕಟ್ಟಡ ಕಾರ್ಮಿಕರು ಎದುರಿಸುತ್ತಿರುವ ನ್ಯೂನತೆಗಳನ್ನು ಮುಂಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪಿಸಬೇಕೆಂದು ಶಾಸಕರಿಗೆ ಒತ್ತಾಯಿಸಲಾಗಿದೆ. ಶಾಸಕರು ನಮ್ಮ ಮನವಿಗೆ ಸ್ಪಂದಿಸಿ, ಅಧಿವೇಶನದಲ್ಲಿ ಪ್ರಸ್ತಾಪಿಸಿ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘದ ವಿಭಾಗ ಕಾರ್ಯದರ್ಶಿಯಾದ ಮರಿಸ್ವಾಮಿ ದೇವರಮನಿ, ವೆಂಕಟಗಿರಿ ಹೋಬಳಿ ಘಟಕ ಅಧ್ಯಕ್ಷರಾದ ಬೆಟ್ಟಪ್ಪ ಹಿರೇಕುರುಬರು, ಮರಳಿ ಗ್ರಾಮದ ಘಟಕದ ಅಧ್ಯಕ್ಷರಾದ ರಾಜುನಾಯಕ, ಪ್ರಧಾನ ಕಾರ್ಯದರ್ಶಿಯಾದ ಮೌಲಾಹುಸೇನ್, ಹಿರಿಯರಾದ ಹೆಚ್. ಶ್ರೀನಿವಾಸ ಕುಲಕರ್ಣಿ, ಹನುಮಂತಪ್ಪ ಹೊಸಪೇಠೆ, ಅಕ್ಬರ ಅಲಿ ಚನ್ನಪಟ್ಟಣ, ಮುಖಂಡರಾದ ಸೈಯ್ಯದ್ ಮಾಬುಸಾಬ ಹುಲಿಹೈದರ್, ರಾಜು ಗುಂಡೂರು, ಗೂಡಸಾಬ ಮರಳಿ, ಶರಣಪ್ಪ ಮರಳಿ, ಶರಣಪ್ಪ ತಳವಾರ, ಶಿವಮೂರ್ತಿ ಡಂಬರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!