ಕೊಪ್ಪಳ ನಗರಸಭೆಯ ಎರಡು ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನ.23ರಂದು ಮತದಾನ
*ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನೇಮಕಾತಿ:* ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಕೊಪ್ಪಳ ನಗರಸಭೆಯ 8ನೇ ಹಾಗೂ 22ನೇ ವಾರ್ಡಿನ ಸದಸ್ಯರ ಆಯ್ಕೆ ಚುನಾವಣೆಗಾಗಿ ಚುನಾವಣಾಧಿಕಾರಿಯಾಗಿ ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ (ಮೊ.ಸಂ: 8762302963) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಕೊಪ್ಪಳ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯ ಅಧೀಕ್ಷಕ ಮಂಜುನಾಥ ಎನ್ (ಮೊ.ಸಂ: 9945868366) ಇವರನ್ನು ನೇಮಕಾತಿ ಮಾಡಲಾಗಿರುತ್ತದೆ.
ಚುನಾವಣಾಧಿಕಾರಿಗಳ ಕಛೇರಿ: ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಕೊಪ್ಪಳ ನಗರಸಭೆಯ 8ನೇ ಹಾಗೂ 11ನೇ ವಾರ್ಡಿನ ಸದಸ್ಯರ ಆಯ್ಕೆ ಚುನಾವಣೆಗಾಗಿ, ಕೊಪ್ಪಳ ನಗರಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಚುನಾವಣಾಧಿಕಾರಿಗಳ ಕಛೇರಿಯನ್ನು ಸ್ಥಾಪಿಸಲಾಗಿರುತ್ತದೆ. ಚುನಾವನಾಧಿಕಾರಿಗಳ ಕಛೇರಿಯಲ್ಲಿ, ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 03 ಗಂಟೆಯವರೆಗೆ (ಸಾರ್ವತ್ರಿಕ ರಜೆ ದಿನವನ್ನು ಹೊರತುಪಡಿಸಿ) ನಾಮಪತ್ರಗಳನ್ನು ಪಡೆಯಬಹುದಾಗಿದೆ.
*ಮತದಾರರ ವಿವರ:* ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಕೊಪ್ಪಳ ನಗರಸಭೆಯ 8ನೇ ಹಾಗೂ 11ನೇ ವಾರ್ಡಿನ ಸದಸ್ಯರ ಆಯ್ಕೆ ಚುನಾವಣೆಗಾಗಿ, ಅಂತಿಮ ಮತದಾರರ ಪಟ್ಟಿಯಂತೆ, 8ನೇ ವಾರ್ಡಿನಲ್ಲಿ 706 ಪುರುಷರು, 701 ಮಹಿಳೆಯರು ಸೇರಿ ಒಟ್ಟು 1407 ಮತದಾರರಿದ್ದಾರೆ. ಅದೇ ರೀತಿ 11ನೇ ವಾರ್ಡಿನಲ್ಲಿ 534 ಪುರುಷರು, 533 ಮಹಿಳೆಯರು ಸೇರಿ ಒಟ್ಟು 1087 ಮತದಾರರಿದ್ದಾರೆ.
*ಅಭ್ಯರ್ಥಿಯ ಚುನಾವಣಾ ವೆಚ್ಚದ ಮಿತಿ:* ಕರ್ನಾಟಕ ಪೌರಸಭೆಗಳ ಅಧಿನಿಯಮ, 1964 ರ ಪ್ರಕರಣ 16ಎ, 16ಬಿ, 16ಸಿ ರಂತೆ ನಗರಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚಗಳ ಬಗ್ಗೆ ಲೆಕ್ಕಪತ್ರವನಿಟ್ಟು, ಅದನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾಗಿರುತ್ತದೆ. ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು-1977 ರ ನಿಯಮ-22ಡಿ ರಲ್ಲಿ ನಗರಸಭೆಗಳಿಗೆ ಸಂಬಂಧಿಸಿದಂತೆ ರೂಪಾಯಿ 2.00 ಲಕ್ಷಗಳ ಚುನಾವಣಾ ವೆಚ್ಚದ ಗರಿಷ್ಠ ಮಿತಿಯಾಗಿರುತ್ತದೆ.
*ಮತಗಟ್ಟೆಗಳ ವಿವರ:* ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಕೊಪ್ಪಳ ನಗರಸಭೆಯ 8ನೇ ವಾರ್ಡಿನ ಮತಗಟ್ಟೆ ಸಂಖ್ಯೆ 16-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ (ಪೂರ್ವಭಾಗದ ಕೊಠಡಿ) ಬ್ರಹ್ಮನವಾಡಿ, ಕೊಪ್ಪಳ ಹಾಗೂ 11ನೇ ವಾರ್ಡಿನ ಮತಗಟ್ಟೆ ಸಂಖ್ಯೆ 20-ಸರ್ಕಾರಿ ಕೇಂದ್ರ ಪ್ರಾಥಮಿಕ ಶಾಲೆ, (ಇಇ ಕಛೇರಿ ಪಿ.ಆರ್.ಇ.ಡಿ ವಿಭಾಗದ ಆವರಣ) ಪೂರ್ವಭಾಗ, ಕೊಪ್ಪಳ ಕಟ್ಟಡಗಳಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗಿರುತ್ತದೆ.
*ಭದ್ರತಾ ಕೊಠಡಿ ನಿರ್ಮಾಣ:* ಕೊಪ್ಪಳ ನಗರಸಭೆಯ 8ನೇ ಹಾಗೂ 11ನೇ ವಾರ್ಡಿನ ಸದಸ್ಯರ ಆಯ್ಕೆಗಾಗಿ ನವೆಂಬರ್ 23ರ ಮತದಾನ ಮುಕ್ತಾಯದ ನಂತರ ತಹಶೀಲ್ದಾರ ಕಛೇರಿಯಲ್ಲಿ ಭದ್ರತಾ ಕೊಠಡಿಯನ್ನು ನಿರ್ಮಾಣ ಮಾಡಲಾಗಿರುತ್ತದೆ.
*ಮತ ಎಣಿಕೆ ಕಾರ್ಯ:* ಕೊಪ್ಪಳ ನಗರಸಭೆಯ 8ನೇ ಹಾಗೂ 11ನೇ ವಾರ್ಡಿನ ಸದಸ್ಯರ ಆಯ್ಕೆಗಾಗಿ ನ.23ರ ಮತದಾನ ಮುಕ್ತಾಯದ ನಂತರ ನ.26ರಂದು ಬೆಳಿಗ್ಗೆ 08 ಗಂಟೆಯಿಂದ ತಹಶೀಲ್ದಾರ ಕಛೇರಿಯ ಸಭಾಂಗಣದಲ್ಲಿ ಮತ ಎಣಿಕೆ ಕಾರ್ಯವು ಪ್ರಾರಂಭಗೊಳುತ್ತದೆ ಹಾಗೂ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ನ.26ರಂದು ಚುನಾವಣಾ ಪ್ರಕ್ರೀಯೆ ಮುಕ್ತಾಯಗೊಳ್ಳುತ್ತದೆ.
ಚುನಾವಣಾ ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಗಮನಕ್ಕೆ ಬಂದಾಗ ಆಯೋಗದ ಆದೇಶದಂತೆ ಕ್ರಮವಹಿಸಲಾಗುವುದು ಎಂದು ಕೊಪ್ಪಳ ನಗರಸಭೆ ವಾರ್ಡ ಸಂಖ್ಯೆ 8 ಮತ್ತು 11ರ ಚುನಾವಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.