ವಿಧಾನಸಭೆ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ನಿನ್ನೆ ಇರಕಲ್ಗಡ ಗ್ರಾಮದಲ್ಲಿ ಹೋಬಳಿ ಮಟ್ಟದ ಶಾಸಕರ ಜನಸಂಪರ್ಕ ಕಾರ್ಯಾಲಯ ಉದ್ಘಾಟಿಸಲಾಯಿತು .
ಇರಕಲ್ಗಡ, ಕಿನ್ನಾಳ, ಲೇಬಿಗೇರಿ, ಕಲ್ ತಾವರಗೇರಾ, ಬೂದುಗುಂಪ ಇಂದಿರಗಿ, ವನಬಳ್ಳಾರಿ, ಹಾಸಗಲ್ ಚಿಕ್ಕಬೊಮ್ಮನಾಳ, ಬುಡಶಟ್ನಾಳ್, ತಾಳಕನಕಾಪುರ ಮತ್ತು ಮುದ್ಲಾಪುರ ಸುತ್ತಮುತ್ತ ಗ್ರಾಮಗಳ ಜನರ ಕುಂದು ಕೊರತೆಗಳನ್ನು ಈ ಶಾಸಕರ ಕಾರ್ಯಾಲಯದಲ್ಲಿ ಪರಿಹರಿಸಲಾಗುವುದು. ಈ ಮೇಲ್ಕಂಡ ಎಲ್ಲಾ ಗ್ರಾಮಗಳ ಗ್ರಾಮಸ್ಥರು ತಮ್ಮ ಸಮಸ್ಯೆಗಳಿಗೆ ಈ ಕಾರ್ಯಾಲಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ವಿನಂತಿಸಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿ ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಶರಣು ತಳ್ಳಿಕೇರಿ, ಕೊಪ್ಪಳ ಮಾಜಿ ಜಿಲ್ಲಾಧ್ಯಕ್ಷರಾದ ವಿರೂಪಾಕ್ಷಪ್ಪ ಸಿಂಗನಾಳ್, ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಡಾ.ಬಸವರಾಜ್ ಕೆ ಶರಣಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕರಿಯಣ್ಣ ಸಂಗಟಿ, ಮುಖಂಡರಾದ ದುರ್ಗಪ್ಪ ಆಗೋಲಿ, ಸಂಗಮೇಶ ಬಾದವಾಡಗಿ, ಗಂಗಾಧರ್ ಸ್ವಾಮಿ, ವೆಂಕಟೇಶ್ ಜಬ್ಬಾಲಗುಡ್ಡ, ಯಮನೂರ್ ಚೌಡ್ಕಿ, ಅಮರೇಶ್ ಹೊಸಮನಿ, ರಮೇಶ್ ಹೊಸಮಲಿ, ಮಲ್ಲೇಶಪ್ಪ ಗುಮಗೇರಿ, ಹನುಮಂತಪ್ಪ ಗುಳೆದ್, ರಮೇಶ್ ರೆಡ್ಡಿ, ದ್ಯಾಮಣ್ಣ ಪೂಜಾರ್, ಹನುಮಗೌಡ ಚೆಳ್ಳಾರಿ, ಮಹಾಂತೇಶ್ ಸಂಗಟಿ, ಆನಂದಗೌಡ ಬೆಣಕಲ್, ಹುಸೇನ್ ಬಾಷಾ, ವೆಂಕಟೇಶ್ ಇಂಜಿನಿಯರ್, ಚಂದ್ರು ಹಿರೂರು, ಬಸವಂತ ಪಾಟೀಲ್, ಮಂಜು ಗೊಂದಿ ಹತ್ತಿಮರದ ಕಾಳಿಂಗ ನಾಯಕ, ನಿತೀಶ್ ಆನಂದ್ಕರ್, ಸೋಮಶೇಖರ್ ಆರ್ ನಾಯಕ್ ಹಾಗೂ ಅನೇಕ ಮುಖಂಡರು, ಹಿರಿಯರು, ಕಾರ್ಯಕರ್ತರು ಹಾಗೂ ಗ್ರಾಮದ ಜನತೆ, ಮಾಧ್ಯಮ ಸ್ನೇಹಿತರು, ಉಪಸ್ಥಿತರಿದ್ದರು.
Comments are closed.