ಕಲ್ಲತಾವರಗೇರಾ ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛ ಹಸಿರು ಗ್ರಾಮ ವಾರ ಕಾರ್ಯಕ್ರಮ ಇಂಗು ಗುಂಡಿ, ಎರೆಹುಳುತೊಟ್ಟಿ ನಿರ್ಮಾಣ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ

Get real time updates directly on you device, subscribe now.

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸುಸ್ಥಿರ ಅಭಿವೃದ್ದಿ ಮತ್ತು ಪರಿಸರ ಸಂರಕ್ಷಣೆ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಜೂನ್-05 ರಿಂದ ಜೂನ್-10, 2024ರವರೆಗೆ “ಸ್ವಚ್ಛ ಹಸಿರು ಗ್ರಾಮ ವಾರ” ಕಾರ್ಯಕ್ರಮದ ಪ್ರಯುಕ್ತ ಜೂನ್ 10 ರಂದು ಕೊಪ್ಪಳ ತಾಲೂಕಿನ ಕಲ್ಲತಾವರಗೇರಾ ಗ್ರಾಮ ಪಂಚಾಯತಿಯ ದನಕನದೊಡ್ಡಿ ಗ್ರಾಮದ ಮಸೀದಿಯ ಆವರಣದಲ್ಲಿ ಐಇಸಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಉದ್ದೇಶ ಕುರಿತು ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಪ್ರತಿ ಗ್ರಾಮದಲ್ಲಿ ಸ್ವಚ್ಛತೆ ಹೊಂದಬೇಕಾದರೆ ಪ್ರತಿ ಕುಟುಂಬದಿAದ ಸ್ವಚ್ಚತೆಯ ಪರಿಕಲ್ಪನೆ ಮೂಡಿಬರಬೇಕು. ನಮ್ಮ ಸುತ್ತ-ಮುತ್ತಲು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜಗತ್ತಿನಲ್ಲಿ ನಾವು ಎಲ್ಲ ವಸ್ತುಗಳನ್ನು ಕೊಂಡುಕೊಳ್ಳಬಹುದು. ಆದರೆ ಆರೋಗ್ಯವನ್ನು ನಾವು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಆರೋಗ್ಯದ ಬಗ್ಗೆ ಗಮನಹರಿಸದೇ ಇದ್ದಲ್ಲಿ ನಾವು ದುಡಿದ ಹಣವನ್ನು ಖರ್ಚು ಮಾಡಿದರೂ ಸಾಲದು. ಜಗತ್ತಿನಲ್ಲಿ ಮುಂದಿನ ದಿನಗಳಲ್ಲಿ ಇದೇ ರೀತಿ ಸ್ವಚ್ಛತೆಯ ಬಗ್ಗೆ ಚಿಂತನೆ ಮಾಡದೇ ಇದ್ದಲ್ಲಿ ಸಮಾಜವು ಆರೋಗ್ಯದ ಸಮಸ್ಯೆಗಳ ಸುಳಿಯಲ್ಲಿ ಸಿಲುಕುತ್ತದೆ. ಪ್ರತಿ ಮನೆಯ ಬಚ್ಚಲು ನೀರನ್ನು ರಸ್ತೆಗೆ ಹರಿಬಿಡುವುದರಿಂದ ಹಿರಿಯ ನಾಗರಿಕರು, ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕಲುಷಿತ ನೀರು ಹರಿಯುವುದರಿಂದ ಅಕ್ಕ ಪಕ್ಕದಲ್ಲಿ ಸೊಳ್ಳೆಗಳು, ದುರ್ನಾತ ಇತ್ಯಾದಿಗಳು ಉಂಟಾಗುತ್ತವೆ. ಇದರಿಂದ ಮುಕ್ತಿ ಹೊಂದಬೇಕಾದರೆ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಪ್ರತಿ ಮನೆಗೆ ಬಚ್ಚಲುಗುಂಡಿ ನಿರ್ಮಾಣಕ್ಕೆ ಅವಕಾಶ ಇರುತ್ತದೆ. ಜಾಬ್‌ಕಾರ್ಡ್ ಹೊಂದಿದವರು ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿ ರೂ.11,000/- ವೆಚ್ಚದಲ್ಲಿ ಬಚ್ಚಲುಗುಂಡಿ ನಿರ್ಮಿಸಿಕೊಳ್ಳಬೇಕೆಂದ ಅವರು, ದನಕನದೊಡ್ಡಿ ಗ್ರಾಮವು ಸಂಪೂರ್ಣ ಬಚ್ಚಲಗುಂಡಿ ಹೊಂದಿದ ಗ್ರಾಮವನ್ನಾಗಿ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕೆಂದರು.
ಪAಚಾಯತ ಅಭಿವೃದ್ದಿ ಅಧಿಕಾರಿ ಯಮನೂರಪ್ಪ ಕಬ್ಬಣ್ಣನವರ ಮಾತನಾಡಿ, ಮಹಾತ್ಮಾ ಗಾಂಧಿ ನರೇಗಾ ಯೋಜನೆಯನ್ನು ಕೇವಲ ಕೂಲಿ ಹಣಕ್ಕಾಗಿ ಮಾತ್ರ ಬಳಸದೇ ವೈಯಕ್ತಿಕ ಸುಸ್ಥಿರ ಕಾಮಗಾರಿಗಳನ್ನು ಅನುಷ್ಠಾನಿಸಿಕೊಳ್ಳಲು ಆದ್ಯತೆ ನೀಡಬೇಕು. ಗ್ರಾಮ ಪಂಚಾಯತಿಯಿAದ ದನದಶೆಡ್, ಕುರಿಶೆಡ್, ಬಚ್ಚಲಗುಂಡಿ, ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಬೆಳೆಗಳು, ಕೃಷಿ ಇಲಾಖೆಯಿಂದ ಕಂದಕ ಬದು ನಿರ್ಮಾಣ, ಕೃಷಿಹೊಂಡ, ಎರೆಹುಳು ತೊಟ್ಟಿ, ರೇಷ್ಮೆ ಇಲಾಖೆಯಿಂದ ರೇಷ್ಮೆ ಕೃಷಿ ಇತ್ಯಾದಿ ಕಾಮಗಾರಿಗಳನ್ನು ಅನುಷ್ಠಾನಿಸಿಕೊಂಡು ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಸದ್ಭಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಅನುಷ್ಠಾನ ಇಲಾಖೆಯ ತಾಂತ್ರಿಕ ಸಂಯೋಜಕಿ ಕವಿತಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲಾ ರೈತರು ರಾಸಾಯನಿಕ ಗೊಬ್ಬರ ಬಳಕೆಗೆ ಮಾರು ಹೋಗಿದ್ದಾರೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಪ್ರತಿಯೊಬ್ಬರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಆಸ್ಪತ್ರೆಗೆ ಅಲೆಯುವುದು ಪ್ರಾರಂಭವಾಗುತ್ತದೆ. ಅಲ್ಲದೇ ಭೂಮಿಯ ಸಾರತ್ವ ಕಡಿಮೆಯಾಗುವುದರ ಜೊತೆಗೆ ಇಳುವರಿ ಕೂಡಾ ಕಡಿಮೆಯಾಗುತ್ತದೆ. ಮನುಷ್ಯನ ಆರೋಗ್ಯದ ಜೊತೆಗೆ ಮಣ್ಣಿನ ಆರೋಗ್ಯವು ಕೂಡಾ ಅಷ್ಟೇ ಮುಖ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬಚ್ಚಲಗುಂಡಿ ನಿರ್ಮಿಸಿಕೊಂಡ ಚನ್ನಮ್ಮ ಫಕೀರಪ್ಪ ಕೋರಿ ಹಾಗೂ ಎರೆಹುಳುತೊಟ್ಟಿ ನಿರ್ಮಿಸಿಕೊಂಡ ಗೋವಿಂದಪ್ಪ ಕುರಿ ಇವರಿಂದ ಅದರ ಸದುಪಯೋಗ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರವಿ ಒಂಟಿಗಾರ, ಸಿವಿಲ್ ತಾಂತ್ರಿಕ ಸಹಾಯಕ ಶರಣಯ್ಯ, ಕೃಷಿ ತಾಂತ್ರಿಕ ಸಹಾಯಕಿ ಸರಸ್ವತಿ, ಗ್ರಾಮಸ್ಥರಾದ ಯಮನೂರಪ್ಪ ಕೊಳ್ಳಿ, ಬಸವರಾಜ ಪರ್ವತಮಲ್ಲಯ್ಯ ಗ್ರಾಮ ಪಂಚಾಯತಿ ಡಿಇಒ ಲಕ್ಷ್ಮಣ ಹಿರೇಮನಿ, ಗ್ರಾಮ ಕಾಯಕ ಮಿತ್ರ ಯಂಕಮ್ಮ ವಾಲಿಕಾರ, ತಾಂಡಾ ರೋಜಗಾರ್ ಮಿತ್ರ ಶೇಖಪ್ಪ ಪೂಜಾರ, ಸಂಜೀವಿನಿ ಸಂಘದ ಮಹಿಳೆಯರು, ಮಹಿಳಾ ಕೂಲಿಕಾರರು, ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: