ವಾಸವಿ ಜಯಂತಿ ಸರ್ಕಾರ ಕಾರ್ಯಕ್ರಮವಾಗಲಿ
ಕೊಪ್ಪಳ: ಆರ್ಯವೈಶ್ಯ ಕುಲದೇವತೆ ಶ್ರೀವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಜಯಂತಿ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು ಎಂದು ಒತ್ತಾಯಿಸಿ ಆರ್ಯವೈಶ್ಯ ಸಮಾಜದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಮಾಜದ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿಗೆ ಮನವಿ ಸಲ್ಲಿಸಿದರು.
ಶ್ರೀವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಜಯಂತಿಯನ್ನು ಪ್ರತಿವರ್ಷ ಮೇ ೧೮ರಂದು ಶನಿವಾರ ಆಚರಿಸುತ್ತಿದ್ದೇವೆ. ಶ್ರೀವಾಸವಿ ಮಾತೆಯು ತ್ಯಾಗ ಮತ್ತು ಪವಿತ್ರತೆಯ ಸಾರವನ್ನು ಜಗತ್ತಿಗೆ ತಿಳಿಸಲು ಭೂಲೋಕದಲ್ಲಿ ಅವತರಿಸಿದ್ದಾಳೆ. ಶ್ರೀವಾಸವಿ ಮಾತೆಯ ಜನ್ಮವು ಕೂಡ ಪುತ್ರಕಾಮೇಷ್ಟಿ ಯಾಗದಲ್ಲಿಯ ಪವಿತ್ರವಾದ ಅಗ್ನಿಂಬಂದ ಆಗಿದೆ. ಶ್ರೀವಾಸವಿ ಮಾತೆಯು ಜನ್ಮ ತಾಳಿದ ಉದ್ದೇಶ ಸರ್ವ ಮನುಷ್ಯರು ದೇಹಾಭಿಮಾನವನ್ನು ತ್ಯಾಗಮಾಡಿ, ಆತ್ಯಾಭಿಮಾನಿಗಳಾಗಬೇಕು ಎನ್ನುವುದೇ ಆಗಿದೆ. ಅಂದರೆ ಯಾವುದೇ ಮನುಷ್ಯನು ವಸ್ತುಗಳಿಗೆ, ವೈಭೋಗಗಳಿಗೆ ಮತ್ತು ಇಹಲೋಕದ ಭೋಗ, ಲಾಲಸೆಗಳಿಗೆ ವಶನಾಗದೇ ಅಥವಾ ಮನಸೋಲದೆ ಪಾರಮಾರ್ಥಿಕ ಮುಕ್ತಿ ಸಾಧನೆಗಾಗಿ ತನ್ನನ್ನು ತಾನು ಭಗವಂತನಿಗೆ ಸತ್ಯ ಮನಸ್ಸಿನಿಂದ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಮುಖಾಂತರ ಶರಣಾಗಬೇಕು ಎಂದು ತಿಳಿಸುವುದೇ ಶ್ರೀ ವಾಸವಿ ಮಾತೆಯ ಅವತಾರದ ಮುಖ್ಯ ಉದ್ದೇಶವಾಗಿದೆ ಎಂದು ಮನವಿ ಮೂಲಕ ತಿಳಿಸಿದರು.
ಶ್ರೀವಾಸವಿ ಮಾತೆಯನ್ನು ಬಾಲಕಿಯಾಗಿದ್ದಾಗ ವಾಸವಿ ಎಂದು ಕರೆದರು, ಮುಂದೆ ಅವಳು ಭಗವಂತನಾದ ಪರಮೇಶ್ವರನ ಯೋಗಾಗ್ನಿಯಲ್ಲಿ ಲೀನವಾದ ನಂತರ ಕನೈಯಿಂದ ಕನ್ಯಕಾಪರಮೇಶ್ವರಿಯಾದಳು. ಅದೇ ರೀತಿ ಸರ್ವಜನರು ಆ ಭಗವಂತನನ್ನು ಅರ್ಥಮಾಡಿಕೊಂಡು ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಉದ್ದೇಶ ಪೂರ್ಣಮಾಡಬೇಕು. ಶ್ರೀವಾಸವಿ ಮಾತೆಯು ನಮಗೆಲ್ಲಾ ಆ ಭಗವಂತನನ್ನು ಸರಳವಾಗಿ ಅರ್ಥಮಾಡಿಸಿ, ಪರಿಚಯಿಸಿ, ಪಾಲನೆ ನೀಡಿದ್ದು, ಇದರಿಂದ ಅವಳನ್ನು ಆರ್ಯವೈದ್ಯ ಕುಲೋದ್ಧಾರಿಣಿ, ಆದಿಶಕ್ತಿಯ ಅಪರಾವತಾರ ಆದಿ ಪರಾಶಕ್ತಿ, ಶ್ರೀದೇವಿ ಅಥವಾ ಅಮ್ಮನವರೆಂದು ಕರೆದು ಪೂಜಿಸುತ್ತೇವೆ. ಇಂತಹ ತ್ಯಾಗ ಮತ್ತು ಪವಿತ್ರತೆ ಎಂಬ ಅಂಶಗಳು ಸರ್ವ ಜನಾಂಗದವರಿಗೂ ಅನ್ವಯಿಸುವಂತದ್ದು. ಮನುಕುಲವು ಅನುಸರಿಸುವಂತದ್ದಾಗಿದೆ ಎಂದರು.
ತಾವುಗಳು ವಿವಿಧ ಸಮಾಜದ ಪ್ರಮುಖ ಪೂಜ್ಯನೀಯ ದೇವರುಗಳ ಮತ್ತು ಮಹನೀಯರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮಗಳನ್ನಾಗಿ ಆಚರಿಸಿಕೊಂಡು ಬಂದಿರುತ್ತೀರಿ. ಅದರಂತೆ ಆರ್ಯವೈಶ್ಯ ಸಮಾಜದ ಕುಲದೇವತೆ ವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಜಯಂತಿಯನ್ನು ಸರ್ಕಾಲ ಕಾರ್ಯಕ್ರಮವನ್ನಾಗಿ ಘೋಷಿಸಿ, ಆಚರಣೆ ತರಬೇಕು ಎಂದು ಆರ್ಯವೈಶ್ಯ ಸಮಾಜದ ಮುಖಂಡರು ಮನವಿ ಮಾಡಿದರು.
ಆರ್ಯವೈಶ್ಯ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಗುಪ್ತಾ, ಭಾಗ್ಯನಗರದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ಉಪಾಧ್ಯಕ್ಷ ನಾರಾಯಣ ಕುರುಗೋಡ, ಪ್ರಧಾನ ಕಾರ್ಯದರ್ಶಿ ಡಿ.ಗುರುರಾಜ, ರಾಕೇಶ ಪಾನಘಂಟಿ, ರಾಘವೇಂದ್ರ ಚಿತ್ರಾಲಿ, ಆನಂದ ಶಿರಹಟ್ಟಿ, ಅರುಣ ಶೆಟ್ಟರ, ಗಿರೀಶ ಪಾನಘಂಟಿ, ಬಿ.ಆಂಜನೇಯ, ಕೆ.ಶಾಂತಕುಮಾರ, ರಮೇಶಬಾಬು, ಪವನ್ ಜನಾದ್ರಿ ಇದ್ದರು.
ಸಚಿವ, ಶಾಸಕರಿಗೂ ಮನವಿ ಸಲ್ಲಿಕೆಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮತ್ತು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಗೆ ವಾಸವಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು ಎಂದು ಆರ್ಯವೈಶ್ಯ ಸಮಾಜದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.ಆರ್ಯವೈಶ್ಯ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಗುಪ್ತಾ, ಭಾಗ್ಯನಗರದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ಉಪಾಧ್ಯಕ್ಷ ನಾರಾಯಣ ಕುರುಗೋಡ, ಪ್ರಧಾನ ಕಾರ್ಯದರ್ಶಿ ಡಿ.ಗುರುರಾಜ, ರಾಕೇಶ ಪಾನಘಂಟಿ, ರಾಘವೇಂದ್ರ ಚಿತ್ರಾಲಿ, ಆನಂದ ಶಿರಹಟ್ಟಿ, ಅರುಣ ಶೆಟ್ಟರ, ಗಿರೀಶ ಪಾನಘಂಟಿ ಇದ್ದರು.
Comments are closed.