ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಶೇ. ೧೦೦% ಫಲಿತಾಂಶ
10ನೇ ಬಾರಿ 100ಕ್ಕೆ ನೂರರಷ್ಟು ಫಲಿತಾಂಶ ಪಡೆದ ಕೀರ್ತಿ
ಮಾರ್ಚ್ 2024 ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನಮ್ಮ ಶಾಲೆಯಿಂದ ಒಟ್ಟು 76 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 31 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 43 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಮತ್ತು ದ್ವಿತೀಯ ದರ್ಜೆಯಲ್ಲಿ 02 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ಒಟ್ಟು ಫಲಿತಾಂಶ ಶೇ. ೧೦೦% ರಷ್ಟಿದೆ.
ಕುಮಾರಿ. ನಲ್ಲಮಿಲ್ಲಿ ಸಾಯಿ ಚಂದನ 610 (97.60%) ಪ್ರಥಮ ಸ್ಥಾನ ಕುಮಾರಿ: ಸಂಜನಾ ಪಟ್ಟಣಶೆಟ್ಟಿ 607 (97.12%)
ದ್ವಿತೀಯ ಸ್ಥಾನ ಕುಮಾರಿ: ಅಕ್ಷತಾ ಎ ಅರವಟಗಿ 603 (96.48%) ತೃತೀಯ ಸ್ಥಾನ
ಇಂಗ್ಲೀಷ್ -1 ವಿದ್ಯಾರ್ಥಿನಿ (125/125), ಕನ್ನಡ-13 ವಿದ್ಯಾರ್ಥಿಗಳು (100/100), ಹಿಂದಿ-03 ವಿದ್ಯಾರ್ಥಿಗಳು (100/100), ಗಣಿತ 2 ವಿದ್ಯಾರ್ಥಿಗಳು (97/100), ವಿಜ್ಞಾನ 1 ವಿದ್ಯಾರ್ಥಿನಿ (97/100) ಹಾಗೂ ಸಮಾಜ ವಿಜ್ಞಾನ 1 ವಿದ್ಯಾರ್ಥಿನಿ (97/100) ಹಾಗೂ ಉನ್ನತ ಶ್ರೇಣಿ (Distinction)-31 ಪ್ರಥಮ ದರ್ಜೆ(First class) – 43 ಎರಡನೇ ದರ್ಜೆ (second class) -2 ವಿದ್ಯಾರ್ಥಿಗಳು ಅಂಕಗಳಿಸಿ ಸಾಧನೆ ಮೆರೆದಿದ್ದಾರೆ. ಇವರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಭಾಸ್ಕರ ಅಗಳಿ, ಕಾರ್ಯದರ್ಶಿಗಳಾದ ಪ್ರಹ್ಲಾದ ಅಗಳಿ, ಆಡಳಿತಾಧಿಕಾರಿ ಗುರುರಾಜ ಅಗಳಿ, ಆಡಳಿತ ಮಂಡಳಿಯ ಸದಸ್ಯರು, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕಲ್ಪನಾ ವಿಜಯಕುಮಾರ್ ಹಾಗೂ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು. ಪಾಲಕರು ಅಭಿನಂದಿಸಿದ್ದಾರೆ.
Comments are closed.