ಮತದಾರರ ಕೈಬೀಸಿ ಕರೆಯುತ್ತಿರುವ ಬಸಾಪಟ್ಟಣ ಮಾಡೆಲ್ ಬೂತ್..
ಮತದಾನ ಹಬ್ಬಕ್ಕೆ ಅಲಂಕೃತಗೊಂಡ ಮಾದರಿ ಮತಗಟ್ಟೆ
ಲೋಕಸಭಾ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ತೆರೆಯಲಾದ ಮಾದರಿ ಮತಗಟ್ಟೆ ಅಲಂಕೃತಗೊಂಡು ಮತದಾರರನ್ನು ಸೆಳೆಯುತ್ತಿದೆ.
ಮತಗಟ್ಟೆ ಬಲೂನ್ ಗಳು, ವಿದ್ಯುತ್ ದೀಪಾಲಂಕಾರ ಗೊಂಡಿದ್ದು ಕಣ್ಮನಸೆಳೆಯುತ್ತಿದೆ. ವರ್ಲಿ ಪೇಯಿಂಟಿಂಗ್, ಆಕರ್ಷಕ ರಂಗೋಲಿ, ಮತದಾನ ಜಾಗೃತಿ ಶ್ಲೋಘನ್ ಗಳು, ಜಾಗೃತಿ ಫಲಕಗಳೊಂದಿಗೆ ಮತಗಟ್ಟೆ ಆಕರ್ಷಿತಗೊಂಡಿದೆ.
‘ಆಮಿಷಕ್ಕೆ ಮರುಳಾಗದಿರಿ: ಯೋಚಿಸಿ ಮತಚಲಾಯಿಸಿ’, ‘ನಮ್ಮ ನಡೆ-ಮತಗಟ್ಟೆ ಕಡೆ’, ‘ನಮ್ಮ ಮತ, ನಮ್ಮ ಹಕ್ಕು’, ಎಂಬ ಮತದಾನ ಜಾಗೃತಿ ಬರಹ ಬರೆಯಿಸಲಾಗಿದೆ.
ಬಸಾಪಟ್ಟಣ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ವಿದ್ಯಾವತಿ ಅವರು ಮತಗಟ್ಟೆ ಮುಂಭಾಗ ಬಿಡಿಸಿದ ಮತದಾನ ಜಾಗೃತಿ ರಂಗೋಲಿ ಅತ್ಯಾಕರ್ಷಕವಾಗಿದೆ.
Comments are closed.