ಡಿಜಿಟಲ್ ಭಾರತ ನಿರ್ಮಾಣ- ಡಾ.ಬಸವರಾಜ
ಕುಷ್ಟಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಜಿಟಲ್ ಭಾರತ ನಿರ್ಮಾಣ ಮಾಡಿದ್ದಾರೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ.ಶರಣಪ್ಪ ಹೇಳಿದರು.
ವಿಧಾನಸಭಾ ವ್ಯಾಪ್ತಿಯ ತಳವಗೇರಾದಲ್ಲಿ ನಡೆದ ಚುನಾವಣಾ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತವನ್ನು ಡಿಜಿಟಲೀಕರಣ ಮಾಡುವುದು ಅಸಾಧ್ಯ ಎಂದು ಹಿಂದಿನ ಯುಪಿಎ ಸರ್ಕಾರದ ವಿತ್ತ ಸಚಿವ ಚಿದಂಬರಂರವರು ಮಾತನಾಡಿದ್ದರು ಆದರೆ ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಲ್ಲಿ ಇದು ಸಾಧ್ಯವಾಗಿದೆ. ಪ್ರತಿಯೊಬ್ಬ ಭಾರತೀಯನೂ ಇಂದು ಡಿಜಿಟಲೀಕರಣಕ್ಕೆ ಹೊಂದಿಕೊಂಡು ಬದಲಾವಣೆ ಬಯಸುತ್ತಿದ್ದಾನೆ. ಸಣ್ಣಪುಟ್ಟ ವ್ಯಾಪಾರಸ್ಥರು ಸಹಿತ ಯುಪಿಐ ಕ್ಯೂಆರ್ ಕೋಡ್ ಹೊಂದಿದ್ದಾರೆ. ಮೊಬೈಲ್ ಮೂಲಕವೇ ಪ್ರತಿ ವ್ಯವಹಾರವನ್ನು ಸರಳಗೊಳಿಸುವ ಮೂಲಕ ಸಣ್ಣಪುಟ್ಟ ವ್ಯವಹಾರಕ್ಕೂ ಬ್ಯಾಂಕಿಗೆ ಹೋಗುವ ಅಲೆದಾಟವನ್ನು ಮೋದಿಜಿ ಸರ್ಕಾರ ತಪ್ಪಿಸಿದೆ ಎಂದು ಕೇಂದ್ರ ಸರ್ಕಾರದ ಸಾಧನೆ ತಿಳಿಸಿದರು.
ಈ ಸಂದರ್ಭದಲ್ಲಿ ಕುಷ್ಟಗಿ ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬದಾಮಿ, ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ, ಶಾಸಕರು, ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಹೆಚ್ ಪಾಟೀಲ, ಶಾಸಕ ಗಾಲಿ ಜನಾರ್ಧನ ರೆಡ್ಡಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಕೊಪ್ಪಳ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರತ್ನಕುಮಾರಿ, ಪ್ರಮುಖರಾದ ಪ್ರಭಾಕರ ಚಿಣಿ, ದೇವೆಂದ್ರಪ್ಪ ಬಳೂಟಗಿ, ಪರಸಪ್ಪ ಕತ್ತಿ, ಫಕೀರಪ್ಪ ವಕೀಲರು, ನಾಗಪ್ಪ ಸೂಡಿ ವಕೀಲರು, ಜಗ್ಗನಗೌಡ, ನಾಗರಾಜ ಮೂಲಿಮನಿ, ಬಾಲಪ್ಪ ಚಾಕ್ರಿ, ಶಂಕರ ಕರಪುಡಿ, ಕಾಶಿಮಪ್ಪ ಬಿಜಕಲ್, ಮಹಿಳಾ ಮೋರ್ಚಾದ ಶೈಲಜಾ ಬಗಲಿ, ಪರಿಮಳ ಶೆಟ್ಟರ, ಗಣೇಶ ಹೊರತಟ್ನಾಳ, ಯಮನೂರ ಚೌಡ್ಕಿ ಸೇರಿದಂತೆ ಉಭಯ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
Comments are closed.