ಮಕ್ಕಳು ಶಿಸ್ತು, ಪ್ರಜ್ಞೆ ಮತ್ತು ಜವಾಬ್ದಾರಿ ಅರಿತುಕೊಂಡು ಮುನ್ನಡೆಯಬೇಕು : ಗೊಂಡಬಾಳ

Get real time updates directly on you device, subscribe now.


ಕೊಪ್ಪಳ: ಓದುವ ಮಕ್ಕಳು ಶಿಸ್ತು ಮತ್ತು ಪ್ರಜ್ಞೆಯನ್ನು ಹೊದಿರುವದರ ಜೊತೆಗೆ ತಮ್ಮ ಮೇಲೆ ಪೋಷಕರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಜವಾಬ್ದಾರಿಯಿಂದ ನಡೆಯಬೇಕು ಎಂದು ಬಾಲಕರ ಸರಕಾರಿ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಸಲಹೆ ನೀಡಿದರು.
ಅವರು ನಗರದ ಐತಿಹಾಸಿಕ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಯೋ ನಿವೃತ್ತಿ ಹೊಂದಿದ ವಾಣೀಜ್ಯ ವಿಭಾಗದ ಉಪನ್ಯಾಸಕ ಎಸ್. ಬಿ. ಸಂತೋಷ್‌ಜಿ ಅವರ ಬೀಳ್ಕೊಡುಗೆ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿದರು.
ಟೀನ್ ಏಜ್ ಎಂದುಕೊಂಡು ಮಾಡಿದ್ದೆಲ್ಲ ಆಟವೆಂದು ಜೀವನ ಹಾಳುಮಾಡಿಕೊಳ್ಳದೇ ಗುರಿಯತ್ತ ಚಿತ್ತ ಹರಿಸಬೇಕು, ಉತ್ತಮ ಅಂಕ ಗಳಿಕೆ ಜೊತೆಗೆ ಸಂಸ್ಕಾರ ಕಲಿಯಬೇಕು. ಪೋಷಕರಿಗೆ ಮತ್ತು ಕಾಲೇಜಿಗೆ ಒಳ್ಳೆಯ ಹೆಸರು ತರುವಂತೆ ನಡೆ ನುಡಿ ಬೆಳೆಸಿಕೊಳ್ಳಬೇಕು. ಜಗತ್ತು ಅತ್ಯಂತ ವೇಗವಾಗಿ ಚಲಿಸುತ್ತಿದ್ದು ಅದರ ಜೊತೆಗೆ ಓಡಿದರೆ ಮಾತ್ರ ಸಾಧನೆ ಸಾಧ್ಯ ಇಲ್ಲದಿದ್ದರೆ ನಿರುದ್ಯೋಗಿಗಲಾಗಿ ಮನೆಯಲ್ಲಿಯೇ ಇರಬೇಕಾಗುತ್ತದೆ. ಕಾಲೇಜನ್ನು ಪ್ರೀತಿಸಿ, ತರಗತಿಗಳಿಗೆ ಕೂಡಿ ಶಿಕ್ಷಕರ ಪಾಠ ಕೇಳಿರಿ ಈ ಬಾರಿ ಇನ್ನಷ್ಟು ಉತ್ತಮ ಫಲಿತಾಂಶಕ್ಕೆ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದರು.
ಇದೇ ವೇಳೆ ವಯೋ ನಿವೃತ್ತಿ ಹೊಂದಿದ ವಾಣೀಜ್ಯ ವಿಭಾಗದ ಉಪನ್ಯಾಸಕ ಸಂತೋಷ್‌ಜಿ ಅವರ ದ್ವಿತಿಯಾರ್ಧ ಜೀವನದ ಪಯಣ ಸುಖಮಯವಾಗಿರಲಿ ಎಂದರು ಹಾರೈಸಿ ಸನ್ಮಾನ ಮಾಡಿದರು.
ವಿಜ್ಞಾನ ಉಪನ್ಯಾಸಕ ಬಸವರಾಜ ಸವಡಿ ಅವರು ಮಾತನಾಡಿ, ಬದುಕಿನ ಬಹುಪಾಲ ಭಾಗವನ್ನು ಶಿಕ್ಷಣದಲ್ಲಿಯೇ ಮುಗಿಸಿ ಹೊಸ ನಿವೃತ್ತಿ ಜೀವನಕ್ಕೆ ಕಾಲಿಟ್ಟ ಸಂತೋಷ್‌ಜೀ ಅವರ ಒಡನಾಟ ಕುರಿತು ಮಾತನಾಡಿದರು. ಸುಧೀರ್ಘ ೧೪ ವರ್ಷ ಇದೇ ಕಾಲೇಜಿನಲ್ಲಿ ವೃತ್ತಿ ಮಾಡಿದ ಹೆಮ್ಮೆ ಅವರದ್ದಾಗಿದೆ ಎಂದರು. ಇದೇ ವೇಳೆ ಕಾಲೇಜಿನ ಹಳೆಯ ಕಾಮರ್ಸ್ ವಿದ್ಯಾರ್ಥಿಗಳು ಬಂದು ಸನ್ಮಾನಿಸಿ ಗೌರವಿಸಿದರು. ವಿದ್ಯಾರ್ಥಿಗಳಿಗೆ ಸ್ವಾಗತ ಮಾಡುವ ಸಾಂಕೇತಿಕ ಕಾರ್ಯಕ್ರಮದಲ್ಲಿ ನಮ್ಮ ಹುಡುಗರು ಸದಾ ಒಳ್ಳೆಯ ಗುಣವಂತರಾಗಿ ಕಾಲೇಜಿಗೆ ಕೀರ್ತಿ ತರಬೇಕು ಎಂದರು.
ಪ್ರಾಚಾರ್ಯ ಹೆಚ್. ಎಸ್. ದೇವರಮನಿ ಅವರು ಮಾತನಾಡಿ, ಪ್ರತಿವರ್ಷ ವಿದ್ಯಾರ್ಥಿಗಳನ್ನು ಸ್ವಾಗತಿಸುವದು ಮತ್ತು ಬೀಳ್ಕೊಡುವದು ಸಾಂಪ್ರದಾಯಿಕ ಕಾರ್ಯಕ್ರಮದರ ಜೊತೆಗೆ ಕಾಲೇಜಿನ ಉಪನ್ಯಾಸಕರೊಬ್ಬರನ್ನು ಬೀಳ್ಕೊಡುತ್ತಿರುವದು ವಿಶೇಷ ಸಂಗತಿ. ಕಾಲೇಜಿನ ಅಭಿವೃದ್ಧಿ ಸಮಿತಿ, ಉಪನ್ಯಾಸಕರು ಮತ್ತು ಮಕ್ಕಳು ಎಲ್ಲರೂ ಸೇರಿ ಈ ಬಾರಿ ಉತ್ತಮ ಫಲಿತಾಂಶ ತರೋಣ ಎಂದರು.
ಈ ವೇಳೆ ಉಪನ್ಯಾಸಕರಾದ ಬಸವರಾಜೇಶ್ವರಿ ಸವಡಿ, ಶೇಖರ್ ಪಿ. ಆರ್., ರತ್ನಮ್ಮ ಎಂ. ವಿ., ಕೊಟ್ರಪ್ಪ ನೀರಲಗಿ, ಅರುಣಕುಮಾರ, ಗವಿಸಿದ್ದಪ್ಪ, ಗುರುಸ್ವಾಮಿ, ಮಲ್ಲಿಕಾರ್ಜುನ, ಮಾರುತಿ ಗುರಿಕಾರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: