ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕಾಮ್ರೆಡ್ ಶರಣು ಗಡ್ಡಿ ನಾಮಪತ್ರ ಸಲ್ಲಿಕೆ

Get real time updates directly on you device, subscribe now.

ಜನ ಹೋರಾಟಗಳಿಂದ ಹೊರಹೊಮ್ಮಿದ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕಾಮ್ರೆಡ್ ಶರಣು ಗಡ್ಡಿ ನಾಮಪತ್ರ ಸಲ್ಲಿಸಿದರು.

ಕೊಪ್ಪಳದ ನಗರದ ಲೇಬರ್ ಸರ್ಕಲ್ ನಿಂದ ಗಂಜ್ ಸರ್ಕಲ್ ವರೆಗೂ ನೂರಾರು ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಕಾಮ್ರೇಡ್ ಶರಣಪ್ಪ (ಶರಣು ಗಡ್ಡಿ) ಅವರ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್.ಯು. ಸಿ. ಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ನಾಯಕರಲ್ಲಿ ಒಬ್ಬರಾದ ಕಾಮ್ರೇಡ್ ಡಿ. ನಾಗಲಕ್ಷ್ಮಿ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ.ಎಲೆಕ್ಟ್ರಾಲ್ ಬಾಂಡ್ ವಿಶ್ವದ ದೊಡ್ಡ ಹಗರಣವಾಗಿ ಕೇಂದ್ರ ಬಿಜೆಪಿ ಸರ್ಕಾರ ಸೇರಿದಂತೆ ಎಲ್ಲಾ ಪಕ್ಷಗಳು ದೇಣಿಗೆ ತೆಗೆದುಕೊಂಡಿದ್ದು ಜಗಜ್ಜಾಯಿರಾಗಿದೆ.

2014 ರಲ್ಲಿ ಬಿಜೆಪಿ ದನಿ ಎತ್ತಿದ ಬೆಲೆಯೇರಿಕೆ, ನಿರುದ್ಯೋಗ ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಈಗ ಮೌನವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಬಾರಿ ಶಿಕ್ಷಣ ಆರೋಗ್ಯ ಸೌಲಭ್ಯಗಳು ಜೀವನ ವೆಚ್ಚವನ್ನು ಹೆಚ್ಚಿಸಿ ಜನರನ್ನು ಸಾಲಗಾರರನ್ನಾಗಿ ಮಾಡಿವೆ. 9.9 ಕೋಟಿ ಸಂಖ್ಯೆಯಿದ್ದ ಮಧ್ಯಮ ವರ್ಗದ ಕುಟುಂಬಗಳು 6.6 ಕೋಟಿಗೆ ಕುಸಿದಿವೆ. ರೈತರಿಗೆ ಬೆಂಬಲ ಬೆಲೆ ಕಾನೂನು ಮಾಡಲಾಗಿಲ್ಲ. ಇನ್ನೊಂದೆಡೆ ರೈತರ ನ್ಯಾಯಯುತ ಹೋರಾಟವನ್ನು ಹತ್ತಿಕ್ಕಲಾಗಿದೆ. ಇತ್ತೀಚಿಗೆ ರೈತ ಹೋರಾಟದಲ್ಲಿ 780 ಜನ ಹುತಾತ್ಮರಾಗಿದ್ದಾರೆ.
ಇನ್ನೊಂದೆಡೆ ನಮ್ಮ ಪಕ್ಷದ ವಿದ್ಯಾರ್ಥಿ, ಯುವಜನ, ರೈತ ಕಾರ್ಮಿಕರ,ಕಟ್ಟಡ ಕಾರ್ಮಿಕರು,ಆಶಾಕಾರ್ಯಕರ್ತೆಯರು ದುಡಿಯುವ ಜನರ ಹೋರಾಟಗಳಿಗೆ ನಾಯಕತ್ವವನ್ನು ನೀಡಿ ಜನ ಚಳುವಳಿಯಿಂದ ಹೊರಹೊಮ್ಮಿದ ಅಭ್ಯರ್ಥಿ ಕಾಮ್ರೇಡ್ ಶರಣಪ್ಪ (ಶರಣು ಗಡ್ಡಿ ) ಅವರನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ಎಲ್ಲಾ ಜನತೆ ಬೆಂಬಲಿಸಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಕಾಮ್ರೇಡ್ ಶರಣಪ್ಪ (ಶರಣು ಗಡ್ಡಿ )ಮಾತನಾಡಿ, ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಸಮಸ್ಯೆಗಳು ಜನರನ್ನು ಕಿತ್ತು ತಿನ್ನುತ್ತಿವೆ ಇಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಗ್ರಾಮೀಣ ಪ್ರದೇಶದ ಕೆರೆಗಳಿಗೆ ನೀರು ತುಂಬಿಸಲು ಆಗಿಲ್ಲ. ಪ್ರತಿ ವರ್ಷ ಕುಡಿಯುವ ನೀರು ಹಾಗೂ ಕೃಷಿಗೆ ನೀರಿನ ಅಭಾವ ಮಾತ್ರ ಕಟ್ಟಿಟ್ಟ ಬುತ್ತಿ.ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರಗಳು ಬರ ನಿರ್ವಹಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ.
ಜನರನ್ನು ನಿಜವಾದ ಸಮಸ್ಯೆಗಳಿಂದ ದಿಕ್ಕು ತಪ್ಪಿಸಲು ಜಾತಿ ಧರ್ಮದ ಹೆಸರಲ್ಲಿ ಜನಸಾಮಾನ್ಯರನ್ನು ಧೃವೀಕರಣ ಮಾಡಲಾಗುತ್ತಿದೆ.
ಬಡವರ,ದುಡಿಯುವವರ,ಕಾರ್ಮಿಕರ ನೈಜ ಹೋರಾಟ ಕಟ್ಟುತ್ತಿರುವ ಎಸ್. ಯು. ಸಿ. ಐ. (ಕಮ್ಯುನಿಸ್ಟ್) ಪಕ್ಷವನ್ನು ಗೆಲ್ಲಿಸಬೇಕೆಂದು ಕೊಪ್ಪಳ ಜನತೆಯಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶರಣಪ್ಪ ಉದ್ಬಳ್ ಉಪಸ್ಥಿತರಿದ್ದರು. ಸದಸ್ಯರಾದ ಶರಣು ಪಾಟೀಲ್ , ರಮೇಶ್.ವಿ, ಗಂಗರಾಜ ಅಳ್ಳಳ್ಳಿ, ದೇವರಾಜ್ ಹೊಸಮನಿ , ಮಂಜುಳಾ ಮತ್ತು ಬೆಂಬಲಿಗರಾದ ಸುರೇಶ ಗಡ್ಡಿ, ಮಂಗಳೇಶ ರಾಠೋಡ್ ಗೀಣಗೇರಾ,ನಾಗಪ್ಪ ಗಡ್ಡಿ, ಯಮನಪ್ಪ, ಹನುಮಂತ,ಮೌನೇಶ ಹಲಗೇರಿ , ಕುಮಾರ್ ಹುಲಗಿ,, ವೆಂಕನಗೌಡ ಲಿಂಗದಹಳ್ಳಿ, ಯಮನಪ್ಪ, ಶಿವರಾಜ್,ಗಣೇಶ, ಹುಲಗಪ್ಪ, ನೀಲಮ್ಮ, ಹುಲಿಗೇಮ್ಮ, ರಂಜಾನ ಬೀ, ನಾಗಮ್ಮ ಮುಂತಾದವರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: