ಪೋಕ್ಸೋ ಪ್ರಕರಣ: ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ಪ್ರಕಟ

Get real time updates directly on you device, subscribe now.

): ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೋ)ವು ತೀರ್ಪು ಪ್ರಕಟಿಸಿದೆ.
ಕೊಪ್ಪಳದ ಮುನಿರಾಬಾದ್ ಠಾಣೆ ವ್ಯಾಪ್ತಿಯ ಹುಲಗಿಯ ಹುಲಿಗೆಮ್ಮ ದೇವಸ್ಥಾನ ಹತ್ತಿರ ಜಾತ್ರೆ ಸಲುವಾಗಿ ಹಾಕಿದ ಮನರಂಜನೆ ಆಟದ ತೊಟ್ಟಿಲು ಹತ್ತಿರ ಹಾಗೂ ರೈಲ್ವೆ ಹಳಿ ಪಕ್ಕದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಆರಿಸುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಂಡ ಅಪರಾಧಿಗಳಾದ ಎ-1 ಶಬ್ಬೀರ, ಎ-2 ಕಾರ್ತಿಕ ಈ ಇಬ್ಬರೂ ದುಡ್ಡು ಕೊಡುತ್ತೇವೆ ನಮ್ಮೊಂದಿಗೆ ಬಾ ಎಂದು ಬಾಲಕಿಯನ್ನು ಅಪಹರಿಸಿ, ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗಿ ಅವಳಿಗೆ ಐಸ್ ಕ್ರೀಮ್, ಚಾಕಲೇಟ್ ಕೊಟ್ಟು ತುಂಗಭದ್ರಾ ಹೊಳೆ ಹಿಂದೆ ಹೊಸೂರು ರಸ್ತೆಯಲ್ಲಿರುವ ಒಂದು ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿ ಅಲ್ಲಿ ಅಪರಾಧಿಗಳು ಬಾಧಿತಳ ಮೇಲೆ ಬಲವಂತದ ಅತ್ಯಾಚಾರ ಮಾಡಿದ ಆರೋಪ ತನಿಖೆಯಲ್ಲಿ ಸಾಭಿತಾಗಿದ್ದರಿಂದ  ಕೊಪ್ಪಳ ಪೊಲೀಸ್ ಉಪಾಧೀಕ್ಷಕರಾದ ಶ್ರೀಕಾಂತ ಕಟ್ಟಿಮನಿ ಅವರು ಅಪರಾಧಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವು ವಿಚಾರಣೆಯಲ್ಲಿ ಅಪರಾಧಿಗಳ ಮೇಲಿನ ಆರೋಪಣೆಗಳು ಸಾಭೀತಾಗಿದೆ ಎಂದು 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.35,000 ಗಳ ದಂಡವನ್ನು ವಿಧಿಸಿ, ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ (ಪೋಕ್ಸೋ) ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು ತೀರ್ಪು ಹೊರಡಿಸಿರುತ್ತಾರೆ.  ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಮನೋಹರ ಅವರು ವಾದ ಮಂಡಿಸಿದ್ದರು ಎಂದು ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!