ಗ್ಯಾರಂಟಿ ಸಮಾವೇಶಕ್ಕೆ ಆಗಮಿಸುವ ಫಲಾನುಭವಿಗಳ ಸುರಕ್ಷತೆಗೆ ಆದ್ಯತೆ ನೀಡಿ: ಎಡಿಸಿ ಸಾವಿತ್ರಿ ಬಿ.ಕಡಿ
ಕನಕಗಿರಿ ಉತ್ಸವದಲ್ಲಿ ಆಯೋಜಿಸಲಾಗುವ ಗಂಗಾವತಿ ತಾಲ್ಲೂಕು ಹಾಗೂ ಕನಕಗಿರಿ ಮತಕ್ಷೇತ್ರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ಆಗಮಿಸುವ ಫಲಾನುಭವಿಗಳನ್ನು ಸುರಕ್ಷಿತವಾಗಿ ಕರೆ ತರುವುದು ಮತ್ತು ಸುರಕ್ಷಿತವಾಗಿ ಅವರ ಊರುಗಳಿಗೆ ತಲುಪಿಸುವುದು ತಹಶೀಲ್ದಾರ ಹಾಗೂ ಇಒ ಗಳ ಜವಾಬ್ದಾರಿಯಾಗಿದ್ದು, ವ್ಯವಸ್ಥಿತವಾಗಿ ನಿರ್ವಹಿಸಿ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ತಾಲ್ಲೂಕುಗಳಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಕರೆತರಬೇಕು. ಇದಕ್ಕಾಗಿ ಅವಶ್ಯಕ ಬಸ್‌ಗಳ ಸಂಖ್ಯೆ, ಒಟ್ಟು ಫಲಾನುಭವಿಗಳ ಸಂಖ್ಯೆಯನ್ನು ಸಂಬAಧಿಸಿದ ಇಲಾಖಾ ಅಧಿಕಾರಿಗಳು ಚರ್ಚಿಸಿ ಅಂತಿಮಗೊಳಿಸಿ. ಒಟ್ಟು 160 ಗ್ರಾಮಗಳಿಂದ ಫಲಾನುಭವಿಗಳು ಆಗಮಿಸಲಿದ್ದು, ಬಸ್ ಆಗಮನ, ನಿರ್ಗಮನದ ಸಮಯ, ಒಟ್ಟು ಅಂತರ, ಫಲಾನುಭವಿಗಳಿಗೆ ಊಟದ ವ್ಯವಸ್ಥೆ, ಮುಂತಾದ ಅವಶ್ಯಕ ವಿಷಯಗಳ ಬಗ್ಗೆ ಅಗತ್ಯ ಕ್ರಮ ವಹಿಸಿ. ತುರ್ತು ಪರಿಸ್ಥಿತಿ ನಿರ್ವಹಿಸಲು ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಅಗತ್ಯವಿದ್ದಲ್ಲಿ ಪ್ರತಿ ಬಸ್‌ಗೆ ಒಬ್ಬ ಶುಶ್ರೂಕಿಯರನ್ನು ನಿಯೋಜಿಸಿ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವುದರ ಮೂಲಕ ಯಾವುದೇ ಫಲಾನುಭವಿಗೆ ಬಸ್ ವಿಷಯವಾಗಿ ಹಾಗೂ ಸಮಾವೇಶದಲ್ಲಿ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಿ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಅವರು ಮಾತನಾಡಿ, ಫಲಾನುಭವಿಗಳನ್ನು ಕರೆತರಲು ಅಂದಾಜು 300 ಬಸ್‌ಗಳ ಅವಶ್ಯಕತೆ ಇದ್ದು, ವಿಭಾಗೀಯ ನಿಯಂತ್ರಣಾಧಿಕಾರಿಗಳು ಈ ಕುರಿತು ಕ್ರಮ ವಹಿಸಬೇಕು. ಸಮಾವೇಶದ ನಂತರ ಫಲಾನುಭವಿಗಳನ್ನು ಸುರಕ್ಷಿತವಾಗಿ ಅವರ ಊರುಗಳಿಗೆ ತಲುಪಿಸಬೇಕು. ಉತ್ಸವದ ಅಂಗವಾಗಿ ವಾಹನ ಹಾಗೂ ಜನದಟ್ಟಣೆ ಇರುತ್ತದೆ. ಎಲ್ಲ ಅಂಶಗಳನ್ನು ಪರಿಗಣಿಸಿ ತಹಶೀಲ್ದಾರರು ವಾಹನಗಳ ರೂಟ್ ಮ್ಯಾಪ್ ಸಿದ್ದಪಡಿಸಿ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ತಹಶೀಲ್ದಾರರಾದ ವಿಶ್ವನಾಥ, ಕುಮಾರಸ್ವಾಮಿ, ನಾಗರಾಜ ಯು, ಆಹಾರ ಇಲಾಖೆ ಉಪನಿರ್ದೇಶಕರಾದ ಚಿದಾನಂದಪ್ಪ, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಇಒಗಳು, ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.