ಮಹಿಳೆ ಸಮಾಜದ ಬೆಳಕು, ಲಿಂಗ ತಾರತಮ್ಯ ಬೇಡ: ನ್ಯಾ. ಕುಮಾರ ಡಿ.ಕೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ ಕೊಪ್ಪಳ ಇವರ ಸಹಭಾಗಿತ್ವದಲ್ಲಿ ಕೊಪ್ಪಳ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಯುತ್ತಿರುವ ಕೌಟುಂಬಿಕ ಹಿಂಸೆಯಿAದ ಮಹಿಳೆಯರ ಸಂರಕ್ಷಣೆ ಕಾಯ್ದೆ-2005 ಹಾಗೂ ನಿಯಮಗಳು 2006 ಅನುಷ್ಠಾನ ಕುರಿತು ಸಂರಕ್ಷಣಾಧಿಕಾರಿಗಳು ಮತ್ತು ಇತರೆ ಭಾಗಿದಾರರುಗಳಿಗೆ ಓರಿಯೆಂಟೆಷನ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರಾದ ತಿಪ್ಪಣ್ಣ ಸಿರಸಗಿ ಮಾತನಾಡಿ, ಮಹಿಳೆಯರ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ನಮ್ಮ ಇಲಾಖೆಯ ಸಹಕಾರ ಸದಾ ಇರುತ್ತದೆ ಎಂದರು.
ಕೌಟುAಬಿಕ ಹಿಂಸೆಯಿAದ ಮಹಿಳೆಯರ ಸಂರಕ್ಷಣಾ ಕಾಯ್ದೆಯ ಬಗ್ಗೆ ವಕೀಲರಾದ ಹನಮಂತರಾವ್, ಲಿಂಗ ತಾರತಮ್ಯದ ಬಗ್ಗೆ ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ರಾಘವೇಂದ್ರ ಭಟ್ ಹಾಗೂ ಕಾಯ್ದೆ ಅನುಷ್ಠಾನದಲ್ಲಿ ಇಲಾಖೆಯ ಸಮನ್ವವದ ಬಗ್ಗೆ ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಹರೀಶ ಜೋಗಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ, ಡಿ.ಹೆಚ್.ಓ ಡಾ.ಲಿಂಗರಾಜು, ಕೊಪ್ಪಳ ತಹಶೀಲ್ದಾರರಾದ ವಿಠಲ್ ಚೌಗಲ್, ತಾ.ಪಂ ಇಓ ದುಂಡಪ್ಪ ತುರಾದಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ ಆರ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧ ಇಲಾಖೆಯ ಗಂಗಪ್ಪ, ಮಹಿಳಾ ಧ್ವನಿ ಶಿಕ್ಷಣ ಮತ್ತು ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆಯ ಪ್ರಿಯದರ್ಶಿನಿ ಮುಂಡರಗಿಮಠ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತಿರರು ಉಪಸ್ಥಿತಿ ಇದ್ದರು.
Comments are closed.