ಮಾದಕ ವಸ್ತುವಿನ ಜಾಲವು ರಾಜಾರೋಷವಾಗಿ ನಮ್ಮ ಮಧ್ಯೆ ವ್ಯಾಪಿಸಿರುವುದು ದುರಂತ-ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕೊಪ್ಪಳ
ಕೊಪ್ಪಳ : ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕೊಪ್ಪಳದ ಲೇಬರ್ ಸರ್ಕಲ್‌ದಿಂದ ರ್ಯಾಲಿ ಪ್ರಾರಂಭವಾಗಿ ಅಶೋಕ ವೃತ್ತದ ವರೆಗೆ ಬೃಹತ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿ. ಮುಫ್ತಿ ನಜೀರ್ ಅಹ್ಮದ್ ಸಹಾಬ್ ಸೋಲಿಡಾರಿಟಿ ಧ್ವಜವನ್ನು ಲಬೀದ್ ಶಾಫಿ ಅವರಿಗೆ ನೀಡುವುದರ ಮೂಲಕ ನಮ್ಮ ನಡಿಗೆ ನಶೆ ಮುಕ್ತ ಹಾಗೂ ಮಾದಕ ಮುಕ್ತ ಸಮಾಜ ಕಡೆಗೆ ಎಂಬ ಜಾಗೃತಿ ನಡಿಗೆ ಚಾಲನೆಯನ್ನು ನೀಡಿದರು.
ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಲಬೀದ್ ಶಾಫಿ ಮಾತನಾಡಿ ಇಂದು ನಮ್ಮ ಯುವಕರು ಅಮಲು ಪದಾರ್ಥಕ್ಕೆ ಮಧ್ಯ ಪಾನಕ್ಕೆ ಹಾಗು ಮಾದಕ ದ್ರವ್ಯ ಚಟಗಳಿಗೆ ವ್ಯಾಪಕವಾಗಿ ಬಲಿಯಾಗುತ್ತಿದ್ದಾರೆ. ಇಂದು ಡ್ರಗ್ಸ್ ಸೇವಿಸುವ ಸರಾಸರಿ ವಯಸ್ಸು 12 ಎಂದು ಗುರುತಿಸಲಾಗುತ್ತಿದೆ, ಅಂದರೆ ಶಾಲಾ ವಠಾರದಲ್ಲಿಯೂ ಈ ಮಾದಕ ದ್ರವ್ಯ ಕೂಡ ವ್ಯಾಪಕ ಜಾಲವಾಗಿ ಹರಡಿದೆ. ಇದು ಒಂದು ಸಾಮಾಜಿಕ ಪಿಡುಗು ಎಂದು ಗುರುತಿಸಲಾಗಿದೆ ಇದನ್ನು ಎಲ್ಲಾ ಕೆಡುಕುಗಳ ಕೇಂದ್ರ ಎಂದು ಕರೆಯಲಾಗಿದೆ. ಒಂದು ವರದಿಯ ಪ್ರಕಾರ ಆತ್ಮಹತ್ಯೆ ಮಾಡುವಂತಹ ಮೂರನೇ ಒಂದು ಹಿನ್ನೆಲೆಯವರು ಮಾದಕ ದ್ರವ್ಯ ದಿಂದ ಕೂಡಿರುತ್ತಾರೆ ಎಂದು ಅಂಕಿ ಅಂಶಗಳು ತಿಳಿದು ಬರುತ್ತದೆ.
2020ರಲ್ಲಿ 9169 ಆತ್ಮಹತ್ಯೆ ಪ್ರಕರಣಗಳು ಯುವಕರು ಮಾದಕ ದ್ರವ್ಯ ಚಟದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಎಂದು ಅಂಕಿ ಅಂಶಗಳು ನಮ್ಮ ಮುಂದೆ ಇದೆ. ಒಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ನಮ್ಮ ಹೊಸ ತಲೆಮಾರುಗಳನ್ನು ದುರ್ಬರಗೊಳಿಸುವಂತಹ ಅವರ ಅಭಿವೃದ್ಧಿಯನ್ನು ಅವರ ಕ್ರಿಯಾಶೀಲತೆಯನ್ನು ಕುಂಠಿತಗೊಳಿಸುವಂತಹ ಮಹಾ ಪಿಡುಗಾಗಿ ಗೆದ್ದಲು ಹುಳುಗಳಂತೆ ಈ ಮಾದಕ ದ್ರವ್ಯ ಪದಾರ್ಥ ನಮ್ಮ ಯುವಸಮೂಹವನ್ನು ನಾಶ ಮಾಡುವುದರಲ್ಲಿ ತೊಡಗಿದೆ. ಮಾತನಾಡಿದ ಅವರು 1939ರಲ್ಲಿ ಹರಿಜನ ಪತ್ರಿಕೆಯಲ್ಲಿ ಬರೆಯಲಾಗುತ್ತದೆ, ಮಧ್ಯಪಾನದ ಚಟವು ಮನುಷ್ಯನ ಆತ್ಮವನ್ನು ಹಾಳು ಮಾಡುತ್ತದೆ ಅವನನ್ನು ಮೃತ ಸಮಾನವನ್ನಾಗಿ ಮಾಡುತ್ತದೆ ಎಂದು. ಹೆಂಡತಿ, ತಾಯಿ, ಸಹೋದರಿ, ಮಗಳು, ಎಂಬ ಒಂದು ವಿವೇಚನಾ ಶಕ್ತಿಯನ್ನು ಅವನಿಂದ ಇಲ್ಲದಾಗಿಸುವಂತಹ ಒಂದು ಅತ್ಯಂತ ಕೆಟ್ಟ ನೀಚ ಕೃತ್ಯ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ. ಗಾಂಧೀಜಿಯವರ ಕನಸು ಮಧ್ಯಪಾನ ಮುಕ್ತ ಅಮಲು ಪದಾರ್ಥ ಮುಕ್ತ ಸಮಾಜ ಆಗಬೇಕೆಂಬುದು ಅವರ ಗುರಿಯಾಗಿತ್ತು.
ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ ರಾಜ್ಯ ಗೃಹ ಇಲಾಖೆಗಳ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 16 ಡ್ರಗ್ಸ್ ಪ್ರಕರಣಗಳು ಕಂಡುಬರುತ್ತಿದ್ದು, ಅದರಲ್ಲಿ ಮಾದಕ ವಸ್ತುಗಳ ಸೇವನೆ, ಸ್ವಾಧೀನ ಮತ್ತು ವ್ಯವಹರಗಳ ಪ್ರಕರಣಗಳು ದಾಖಲಾಗುತ್ತಿದೆ. ದೇಶದ ವಿವಿಧ ನಗರಗಳ 16 ರಿಂದ 20 ವರ್ಷದ ಸಾವಿರ ಯುವಕರಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿದ್ದು, ಅದರಲ್ಲಿ ಶೇ. 47 ಜನರು ಸಿಗರೇಟು ಸೇವಿಸುವುದಾಗಿದ್ದು, ಶೇ. 20 ಯುವಕರು ಮಾದಕ ದ್ರವ್ಯ ಸೇವಿಸಿದ್ದಾರೆ. ಅದರಲ್ಲಿ ಶೇ 83ರಷ್ಟು ಯುವಕರಿಗೆ ಈ ಚಟದಿಂದ ಹೇಗೆ ಹೊರಬರಬೇಕೆಂದು ತಿಳಿದಿಲ್ಲ. ಇದು ಇಂದಿನ ಯುವಕರು ಅನುಭವಿಸುತ್ತಿರುವ ಒಂದು ಜ್ವಲಂತ ಸಮಸ್ಯೆಯಾಗಿದ್ದು, ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಈ ಮಾದಕ ವಸ್ತುವಿನ ಜಾಲವು ರಾಜಾರೋಷವಾಗಿ ನಮ್ಮ ಮಧ್ಯೆ ವ್ಯಾಪಿಸಿರುವುದು ದುರಂತವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಫ್ತಿ ನಜೀರ್ ಅಹಮದ್ ಹಾಗೂ ಎಮ್ , ಲಾಯಕ್ ಅಲಿ, ಶ್ರೀ ಅಲ್ಲಮಪ್ರಭು ಬೆಟ್ಟದೂರು, ಲಬೀದ್ ಶಾಫಿ, ಆದಿಲ್ ಪಟೇಲ್, ಆಸಿಫ್ ಕರ್ಕಿಹಳ್ಳಿ , ಇಸ್ ಹಾಖ್ ಫುಜೆಲ್,ಅಬ್ದುಲ್ ಹಸೀಬ್ , ಜಕ್ರಿಯಾ , ಇಲಿಯಾಸ್ , ಗೌಸ್ ಪಟೇಲ್ , ಹಾಗೂ jamaat-e-islami ಹಿಂದ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
Comments are closed.