ಫೆ.22ರಂದು ಭಾನಾಪುರ-ಗದ್ದನಕೇರಿ ಬೈಪಾಸ್ ರಸ್ತೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ: ಕರಡಿ ಸಂಗಣ್ಣ
ಭಾನಾಪುರ-ಗದ್ದನಕೇರಿ ಮಾರ್ಗದಲ್ಲಿ ಬೈಪಾಸ್ ರಸ್ತೆಗಳ ನಿರ್ಮಾಣಕ್ಕೆ ಫೆಬ್ರವರಿ 22 ರಂದು ಶಂಕುಸ್ಥಾಪನೆ ನಡೆಯಲಿದೆ ಎಂದು ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ತಿಳಿಸಿದ್ದಾರೆ.
ಬಹುದಿನಗಳ ಬೇಡಿಕೆಯಾದ ರಾಷ್ಟಿçÃಯ ಹೆದ್ದಾರಿ 364 ಭಾನಾಪುರ-ಗದ್ದನಕೇರಿ ಮಾರ್ಗದಲ್ಲಿ ಬರುವ ತಾಲ್ಲೂಕು ಕೇಂದ್ರಸ್ಥಾನಗಳಾದ ಕುಕನೂರು, ಯಲಬುರ್ಗಾ, ಗಜೇಂದ್ರಗಡ ಪಟ್ಟಣಗಳ ಬೈಪಾಸ್ ರಸ್ತೆಗಳ ನಿರ್ಮಾಣ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಫೆ.22ರಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರ ಅಮೃತ ಹಸ್ತದಿಂದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ರಾಜ್ಯದ ಇತರ ಜಿಲ್ಲೆಗಳ ಪ್ರಮುಖ ಕಾಮಗಾರಿಗಳನ್ನು ಒಂದೇ ಸ್ಥಳದಲ್ಲಿ ಜರುಗಿಸುವ ಕಾರಣಕ್ಕಾಗಿ ಈ ಶಂಕುಸ್ಥಾಪನೆ ಕಾರ್ಯಕ್ರಮವು ಬೆಳಗಾವಿಯಲ್ಲಿ ನಡೆಯಲಿದೆ.
ಭಾನಾಪುರ-ಗದ್ದನಕೇರಿ ಮಾರ್ಗದಲ್ಲಿನ ಬೈಪಾಸ್ ರಸ್ತೆಗಳ ನಿರ್ಮಾಣ ಕಾಮಗಾರಿಯು ಒಟ್ಟು 17 ಕಿ.ಮೀ ಉದ್ದವಿದ್ದು, ಅಂದಾಜು ಮೊತ್ತ ರೂ. 254 ಕೋಟಿಗಳದ್ದಾಗಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.