ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದಂತ ಆರೋಪಿಗಳನ್ನು ಗಡಿಪಾರು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ

Get real time updates directly on you device, subscribe now.

.

ಗಂಗಾವತಿ: ಕಲಬುರ್ಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ವಿಶ್ವ ನಾಯಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಸೋಮವಾರ ರಾತ್ರಿ ಸಮಯದಲ್ಲಿ ದು?ರ್ಮಿಗಳು ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿರುತ್ತಾರೆ. ಇಂತಹ ಕೃತ್ಯ ಎಸೆದ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಅಂತವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಗಡಿಪಾರು ಮಾಡುವಂತೆ ಇಂದು ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ದಲಿತ ಪರ ಸಂಘಟನೆಗಳ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಹುಸೇನಪ್ಪ ಹಂಚಿನಾಳ ವಕೀಲರು ಇವರು ವಿಶ್ವರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಮಗ್ರ ಅಭಿವೃದ್ಧಿಗೆ, ಸರ್ವಜನತೆಯ ಸಮಾನತೆಗಾಗಿ ಹೋರಾಟ ಮಾಡಿದಂತಹ ಮಹಾನಾಯಕ. ಎಲ್ಲಾ ಜಾತಿ ಜನಾಂಗದವರಿಗೆ ಸಮಾನವಾಗಿ ಹಕ್ಕು, ಅವರು ಬರೆದಂತಹ ಸಂವಿಧಾನದ ಮಹಾಗ್ರಂಥವನ್ನು ನಮ್ಮ ದೇಶಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಅದರಲ್ಲಿ ಎಲ್ಲರಿಗೂ ಸಮಾನವಾದ ಹಕ್ಕು ನೀಡಿದ್ದಾರೆ. ಅಂತಹ ಮಹಾನ್ ನಾಯಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಅಪಮಾನ ಮಾಡುವ ಮೂಲಕ ಭಾರತದ ಸಂವಿಧಾನವನ್ನು ಹಾಗೂ ಸಮಾನತೆಯನ್ನು ವಿರೋಧಿಸುವ ಮನೋಭಾವ ಇದರಲ್ಲಿ ಸ್ಪ?ವಾಗಿದೆ. ಭಾರತವನ್ನು ಕೋಮುವಾದಿ ನೆಲೆಯಲ್ಲಿ ವಿಚ್ಛಿದ್ರಗೈಯುತ್ತಿರುವ ಸಂವಿಧಾನ ವಿರೋಧಿ ಮನುವಾದಿ ಮನಸುಗಳು ಇಂತಹ ದು?ತ್ಯ ಪದೇ ಪದೇ ಮರುಕಳಿಸುತ್ತವೆ ಮತ್ತು ಇಂತಹ ಘಟನೆಯು ಕೂಡ ಸುಮಾರು ಎರಡು ವಾರದ ಹಿಂದೆ ಗಂಗಾವತಿ ನಗರದ ಕೋರ್ಟ್ ಮುಂಭಾಗದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿಗೆ ಟೊಮೋಟೊ ಸಾರ್ಸ್ ಎರಚಿ ಅವಮಾನ ಮಾಡಿರುತ್ತಾರೆ. ಇಂತಹ ಘಟನೆಗಳು ಪದೇ ಪದೇ ನಮ್ಮ ದೇಶದಲ್ಲಿ ಮರುಕಳಿಸುತ್ತಿವೆ. ಇದಕ್ಕೆ ಕಾರಣ ನಮ್ಮನ್ನು ಆಳುವಂತಹ ಸರ್ಕಾರವೇ ಕಾರಣ ಎಂದು ಹೇಳಿದರು. ಗಂಗಾವತಿ ಘಟನೆ ನಡೆದು ಸುಮಾರು ದಿನಗಳಾದರೂ ಕೂಡ ಇದುವರೆಗೂ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಮತ್ತು ಸಂಬಂಧಪಟ್ಟ ತಹಸಿಲ್ದಾರರು ಕೂಡ ಇದರ ಬಗ್ಗೆ ಒಂದು ಸಾರಿಯೂ ಕೂಡ ದಲಿತರನ್ನು ಮೀಟಿಂಗ್ ಕರೆದು ಯಾರೇ ಕಿಡಿಗೇಡಿಗಳ ಆಗಲಿ ಅಂತವರನ್ನು ಪತ್ತೆ ಹಚ್ಚಿ ಬಂದಿಸುತ್ತೇವೆ ಎಂದು ಹೇಳಿರುವುದಿಲ್ಲ. ಅವರು ಕೂಡ ಈ ಘಟನೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಈ ಪತ್ರಿಕೆಗಳ ಮುಖಾಂತರ ಅವರ ವಿರುದ್ಧ ಧಿಕ್ಕಾರ ಕೂಗುತ್ತೇವೆ ಎಂದು ಹೇಳಿ, ಇಂತಹ ಘಟನೆ ನಡೆದಿದೆ ಎಂದರೆ ಅದನ್ನು ತೀವ್ರವಾಗಿ ಖಂಡಿಸಿದ್ದು, ದುಷ್ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಡಿ. ಭೋಜಪ್ಪ. ಹುಲುಗಪ್ಪ ಮಾಗಿ ವಕೀಲರು, ಬಸವರಾಜ ಚಲವಾದಿ, ಹುಲಿಗೇಶ ದೇವರಮನಿ, ಹಂಪೇಶ ಹರಗೋಲು. ಹನುಮಂತ ಮೂಳೆ, ಹೊನ್ನೂರಪ್ಪ ಡಾಣಾಪುರ. ಯಮನೂರ್ ಭಟ್, ವೀರೇಶ ಆರತಿ ಸೇರಿದಂತೆ ಇತರ ಪ್ರಗತಿಪರ ಹೋರಾಟಗಾರರು ಭಾಗವಹಿಸಿದ್ದರು

Get real time updates directly on you device, subscribe now.

Comments are closed.

error: Content is protected !!