ಕೂಸಿನ ಮನೆಯ ಮಕ್ಕಳ ಆರೈಕೆ ಪ್ರಮುಖ ಜವಾಬ್ದಾರಿ: ಮಹೇಶ್

Get real time updates directly on you device, subscribe now.

ಕೊಪ್ಪಳ ತಾಲೂಕ ಪಂಚಾಯತಿಯಲ್ಲಿ ಜರುಗಿದ ಆರೈಕೆದಾರರ ತರಬೇತಿಯ ಸಮಾರೋಪ ಸಮಾರಂಭ

ಕೊಪ್ಪಳ:- ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಕೂಸಿನ ಮನೆ ತೆರೆಯಲಾಗಿದ್ದು ಅದರಲ್ಲಿನ ಮಕ್ಕಳ ಆರೈಕೆ ಮಾಡುವದು ಆರೈಕೆದಾರರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಕೊಪ್ಪಳ ತಾಲೂಕ ಪಂಚಾಯತಿಯ ಸಹಾಯಕ ನಿರ್ದೇಶಕ ಮಹೇಶ್‌ ಎಚ್‌ ಕರೆ ನೀಡಿದರು.
ದಿನಾಂಕ:09-01-2024ರಂದು ಕೊಪ್ಪಳ ತಾಲೂಕ ಪಂಚಾಯತಿಯಲ್ಲಿ ಜರುಗಿದ 07 ದಿನಗಳ ವಸತಿ ರಹಿತ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪ್ರತಿ ಗ್ರಾಮ ಪಂಚಾಯತಿಗೆ ಒಂದರೆಂತೆ ಈಗಾಗಲೇ ಕೂಸಿನ ಮನೆ ತೆರೆಯಲಾಗಿದ್ದು 07 ತಿಂಗಳಿನಿಂದ 03 ವರ್ಷದೊಳಗಿನ ಮಕ್ಕಳನ್ನು ಈ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತದೆ. ಪ್ರತಿಯೊಬ್ಬ ಆರೈಕೆದಾರರು ಪ್ರಮುಖ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸತಕ್ಕದ್ದು. ಯಾವುದೇ ಕಾರಣದಿಂದ ನಿರ್ಲಕ್ಷ್ಯವಹಿಸತಕ್ಕದ್ದಲ್ಲ. ಅಲ್ಲಿರುವ ಮಕ್ಕಳನ್ನು ತಮ್ಮ ಮಕ್ಕಳಂತೆ ಆರೈಕೆ ಮಾಡುವದಕ್ಕೆ ಗಮನಹರಿಸಬೇಕು. ಅಲ್ಲಿರುವ ಮಕ್ಕಳ ಮೇಲೆ ನಿಮಿಷ ನಿಮಿಷಕ್ಕೂ ಗಮನಹರಿಸಿ ಅವರಿಗೆ ಆಟೋಟ ಚಟುವಟಿಕೆ, ಕಲಿಕಾ ಪೂರಕ ಚಟುವಟಿಕೆಗಳನ್ನು ಜರುಗಿಸಿ ಅವರನ್ನು ಸೂಕ್ಷ್ಮತೆಯಿಂದ ಗಮನಿಸಿ ಅವರಲ್ಲಿರುವ ಪ್ರತಿಭೆಯನ್ನು ಎತ್ತಿಹಿಡಿಯಬೇಕೆಂದು ಕರೆ ನೀಡಿದರು. ಕಾಲ ಕಾಲಕ್ಕೆ ಅವರಿಗೆ ಆಹಾರವನ್ನು ನೀಡತಕ್ಕದ್ದು. ಅಗತ್ಯ ದಾಖಲಾತಿಯನ್ನು ನಿರ್ವಹಣೆ ಮಾಡುವದರ ಜೊತೆಗೆ ಗ್ರಾಮ ಪಂಚಾಯತಿ ಹಾಗು ಮಕ್ಕಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿರೆಂದರು.
ತಾಲೂಕ ಪಂಚಾಯತಿ ಯೋಜನಾಧಿಕಾರಿ ರಾಜೇಸಾಬ ನದಾಫ್ ಮಾತನಾಡಿ ಕೂಸಿನ ಮನೆಗಳು ಅಂಗನವಾಡಿಯಲ್ಲಿ ನೀಡುವಂತೆ ಆಹಾರ ವ್ಯವಸ್ಥೆ, ಆರೈಕೆ ಇರುತ್ತದೆಂದರು. ನೀವುಗಳು ಸರಿಯಾಗಿ ಕಾರ್ಯನಿರ್ವಹಿಸಿ ಮಾದರಿ ಕೂಸಿನ ಮನೆ ಆರೈಕೆದಾರರೆಂದು ಗುರುತಿಸುವಷ್ಟು ಕಾರ್ಯನಿರ್ವಹಿಸಿರೆಂದರು.
ಮೊಬೈಲ್‌ ಕ್ರಷ್‌ ಸಂಸ್ಥೆಯ ವಿಜಯಲಕ್ಷ್ಮೀ ಮಾತನಾಡಿ 07 ದಿನಗಳ ತರಬೇತಿ ಬಹಳಷ್ಟು ಮಾಹಿತಿ ನೀಡಲಾಗಿದೆ. ಇಲ್ಲಿ ತರಬೇತಿ ಪಡೆದ ಎಲ್ಲಾ ಕೇರ್‌ ಟೆಕರ್‌ ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಲ್ಲಿ ಈ ತರಬೇತಿ ನೀಡಿರುವದಕ್ಕೆ ಸಾರ್ಥಕವಾಗುತ್ತದೆಂದರು. ಎಲ್ಲರೂ ಕೂಡಾ ಮುಕ್ತವಾಗಿ ಭಾಗವಹಿಸಿ ಯಶಸ್ವಿಯಾಗಿ ತರಬೇತಿ ಪಡೆದಿದ್ದಿರಿ. ನಾಳೆಯಿಂದ ನಿಮ್ಮ ಕಾರ್ಯಚಟುವಟಿಕೆಯಲ್ಲಿ ನಿರತರಾಗಬೇಕೆಂದರು. ಕಾರ್ಯಕ್ರಮದ ನಿರೂಪಣೆಯನ್ನು ತಾಲೂಕ ಪಂಚಾಯತಿಯ ಐಇಸಿ ಸಂಯೋಜಕ ದೇವರಾಜ ಪತ್ತಾರ ನಿರ್ವಹಿಸಿದರು.
ಸದರಿ ಕಾರ್ಯಕ್ರಮದಲ್ಲಿ ಮಾಸ್ಟರ್‌ ಟ್ರೈನರ್ ಗಳಾದ ಹಿರಿಯ ಮೇಲ್ವಿಚಾರಕರಾದ ಜಯಶ್ರೀ, ಭುವನೇಶ್ವರಿ, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಮೊಬೈಲ್‌ ಕ್ರಷ್‌ ಸಂಸ್ಥೆಯ ಶೋಭಾ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, SIRD ಸಂಪನ್ಮೂಲ ವ್ಯಕ್ತಿ ಎಚ್‌, ಎಸ್‌ ಹೊನ್ನೂಂಚಿ, ಡಿಇಒ ಗಂಗಾಧರ ಚಿಲವಾಡಗಿ, ತಾಲೂಕಿನ ಗ್ರಾಮ ಪಂಚಾಯತಗಳ ಕೇರ್‌ ಟೆಕರ್‌ ಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!