ಅಭಿವೃದ್ಧಿ ಮೂಲಕ ಕ್ಷೇತ್ರದ ಜನತೆಯ ಋಣ ತೀರಿಸುವೆ -ಶಾಸಕ ಕೆ ರಾಘವೇಂದ್ರ ಹಿಟ್ನಾಳ
ಕೊಪ್ಪಳ :
ಸತತವಾಗಿ ನನಗೆ ಮೂರು ಚುನಾವಣೆಯಲ್ಲಿ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ನನಗೆ ಆಶೀರ್ವಾದ ಮಾಡಿದ್ದೀರಿ ಅದಕ್ಕೆ ಅಭಿವೃದ್ಧಿ ಮೂಲಕ ಋಣ ತೀರಿಸುವ ಪ್ರಾಮಾಣಿಕ ಕೆಲಸವನ್ನು ಮಾಡಿ ನಮ್ಮ ಕೊಪ್ಪಳ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ನಿರ್ಮಾಣ ಮಾಡುತ್ತೇನೆ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಡಿಯಲ್ಲಿ ನಮ್ಮ ಕೊಪ್ಪಳ ಮತಕ್ಷೇತ್ರಕ್ಕೆ 90 ಕೋಟಿ ಅನುಧಾನ ಮಂಜೂರು ಆಗಿದ್ದು ಕ್ಷೇತ್ರದ ಪ್ರತಿ ಗ್ರಾಮಕ್ಕೂ ಕೂಡ ಸರಿ ಸಮನಾಗಿ ಅನುಧಾನ ಹಂಚಿಕೆ ಮಾಡಿ ರಸ್ತೆಗಳ ಅಭಿವೃದ್ಧಿ, ಚರಂಡಿ ನಿರ್ಮಾಣ, ಶಾಲಾ ಕೊಠಡಿಗಳ ಅಭಿವೃದ್ಧಿ ಹಾಗೂ ಸ್ಮಾರ್ಟ್ ಕ್ಲಾಸ್ ನಿರ್ಮಾಣದ ಕಾಮಗಾರಿಗಳನ್ನು ಈ ಅನುಧಾನದಲ್ಲಿ ಕೈಗೆತ್ತಿಕೊಂಡಿದ್ದೇವೆ ಎಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಅಳವಂಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ನೀರಲಿಗಿ, ಮತ್ತೂರು, ತಿಗರಿ, ಹನಕುಂಟಿ, ಬೋಚನಹಳ್ಳಿ, ಬೈರಾಪುರ, ಬೆಟಗೇರಿ, ಮೊರನಾಳ ಗ್ರಾಮಗಳಲ್ಲಿ ಅಂದಾಜು ಮೊತ್ತ 9.94 ಕೋಟಿ ಮೊತ್ತದಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ, ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ಸ್ಮಾರ್ಟ್ ಕ್ಲಾಸ್ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿ. ಪಂ ಮಾಜಿ ಅಧ್ಯಕ್ಷರಾದ ಎಸ್ ಬಿ ನಾಗರಳ್ಳಿ, ಭರಮಪ್ಪ ಹಟ್ಟಿ, ಹನುಮಗೌಡ ಹಂಗನಕಟ್ಟಿ,ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣರೆಡ್ಡಿ ಗಲ್ಬಿ, ಎಸ್ ಸಿ ಘಟಕದ ಜಿಲ್ಲಾ ಅಧ್ಯಕ್ಷರಾದ ಗಾಳೆಪ್ಪ ಪೂಜಾರ್,ಮುಖಂಡರುಗಳಾದ ಬಾಲಚಂದ್ರನ್ ಮುನಿರಬಾದ್, ವೆಂಕನಗೌಡ್ರು ಹಿರೇಗೌಡ್ರು,ಭೀಮಣ್ಣ ಬೋಚನಹಳ್ಳಿ, ತೋಟಪ್ಪ ಸಿಂಟ್ರ,ಬಸಣ್ಣ ನೀರಲಿಗಿ, ಕನಕರಾಜ ಹನಕುಂಟಿ, ಗವಿಸಿದ್ದನಗೌಡ ಮುದ್ದಾಬಳ್ಳಿ, ಶಿವಣ್ಣ ಮೋರನಾಳ, ಕಾವೇರಿ ಭಾಗ್ಯನಗರ, ಪದ್ಮಾವತಿ ಕಂಬಳಿ, ಪರಶುರಾಮ್ ಕೆರೆಹಳ್ಳಿ, ತಹಸೀಲ್ದಾರ್ ವಿಠ್ಠಲ್ ಚೌಗಲೇ, ತಾಲೂಕು ಪಂಚಾಯತ್ ಇಓ ಡುಂದೇಶ ತುರಾದಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟಾನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Comments are closed.