ಇಂಗ್ಲಿಷ್ ಕೌಶಲ್ಯ ಕುರಿತು ಉಪನ್ಯಾಸ
ಕೊಪ್ಪಳ : ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಮತ್ತು ಇಂಗ್ಲಿಷ ವಿಭಾಗದ ಸಹಯೋಗದಲ್ಲಿ ವಿಶೇಷ ಉಪನ್ಯಾಸವನ್ನು ಬೆಳಗ್ಗೆ 10 ಗಂಟೆಗೆ ಕಾಲೇಜಿನ ಆಡಿಟೋರಿಯಂ ಹಾಲ್‌ನಲ್ಲಿ ಆಯೋಜಿಸಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಇರಕಲ್ ಗಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಶ್ರೀಮತಿ ದಿವ್ಯಾ ಆಗಮಿಸಿದ್ದರು. ಸಮಾರಂಭವನ್ನು ಚಾಲನೆ ಗೊಳಿಸಿ ವಿದ್ಯಾರ್ಥಿಗಳಿಗೆ ” ಇಂಗ್ಲಿಷ್ ಕೌಶಲ್ಯಗಳ ” ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ತಿಮ್ಮಾರೆಡ್ಡಿ ಮೇಟಿ, ಐ. ಕ್ಯೂ.ಎ.ಸಿ ಸಂಯೋಜಕಿ ಡಾ.ಟಿ.ವಿ.ವಾರುಣಿ, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ .ಶಿವಬಸಪ್ಪ ಮಸ್ಕಿ, ಹಾಗೂ ಹಿರಿಯ ಉಪನ್ಯಾಸಕರಾದ .ಶಿವಣ್ಣ , ಲತಾ, ಅನುರಾಧ., ಸುಷ್ಮಾ, ಉಷಾ, ಮಹೇಶ್ ಎಚ್. ಪಾಟೀಲ್ , ಚಂದ್ರ ಕಾಂತ, ಶ್ಯಾಮೀದ ಇದ್ದರು.
Comments are closed.