ಜಾನುವಾರು ಕಳ್ಳರ ಬಂಧನ : 6 ಲಕ್ಷ ಮೌಲ್ಯವುಳ್ಳ ನಗದು ಹಣ ಮತ್ತು ವಾಹನ ವಶ.
Koppal
ಕೊಪ್ಪಳ ಜಿಲ್ಲೆ ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಜಾನುವಾರು ಕಳ್ಳತನವಾದ ಬಗ್ಗೆ ಒಟ್ಟು 04 ಪ್ರಕರಣಗಳು ವರಧಿಯಾಗಿದ್ದು ವರಧಿಯಾದ ಜಾನುವಾರು ಕಳ್ಳತನ ಪ್ರಕರಣಗಳನ್ನು ಬೇದಿಸಲು ಮಹಾಂತೇಶ ಸಜ್ಜನ್ ಕೊಪ್ಪಳ ಗ್ರಾಮೀಣ ವೃತ್ತದ ಸಿಪಿಐ ರವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು, ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ವೈಜ್ಞಾನಿಕ ವಿಧಾನಗಳು ಮತ್ತು ಸಾರ್ವಜನಿಕರ ಮಾಹಿತಿಯಿಂದ ಆರೋಪಿತರಾದ ಖಾದರ್ ಸಾಬ್ , ಹಸನ್ ಪಶಾ ರನ್ನು ಬಂಧಿಸಲಾಗಿದೆ
ಆರೋಪಿತರು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವಂತಹ ಜಾನುವಾರುಗಳನ್ನು ಮಾರಾಟ ಮಾಡಿದ ಒಟ್ಟು ಹಣ ರೂ 2,50,000=00 ರೂ ಗಳನ್ನು ಮತ್ತು 3,50,000=00 ಸಾವಿರ ರೂ ಮೌಲ್ಯದ ಟಾಟಾ ಎಸಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ಭೇದಿಸಿದ ತಂಡದಲ್ಲಿ ಮಹಾಂತೇಶ ಸಜ್ಜನ್ ಸಿ.ಪಿ.ಐ ಕೊಪ್ಪಳ ಗ್ರಾಮೀಣ ವೃತ್ತ, ಅಶೋಕ ಬೇವೂರು ಪಿ.ಎಸ್.ಐ (ಕಾ&ಸು), ಹೀರಪ್ಪ ಪಿ.ಎಸ್.ಐ (ತನಿಖೆ), ಮತ್ತು ಸಿಬ್ಬಂದಿಯವರಾದ ಮಹೇಶ ಸಜ್ಜನ್, ಚಂದಪ್ಪ, ಮಾರುತಿ, ಉಮೇಶ ರಾಥೋಡ್, ಗಂಗಾಧರ, ಹನುಮಂತಪ್ಪ, ಶರಣಪ್ಪ, ಅಂದಿಗಾಲಪ್ಪ, ಮಂಜುನಾಥ, ತಾಜುದ್ದಿನ್, ನಿರುಪಾದೆಪ್ಪ, ಸಿ.ಡಿ.ಆರ್ ವಿಭಾಗದ ಪ್ರಸಾದ್, ಕೊಟೇಶ, ಬರಹಗಾರರಾದ ಮಾರುತಿ, ಗಂಗಾಧರ ಚಾಲಕರಾದ ಚಂದ್ರಶೇಖರ, ಮರಿಯಪ್ಪ, ಮೆಹಬೂಬ ಮತ್ತು ಇತರೆ ಅಧಿಕಾರಿಗಳು ಸಿಬ್ಬಂದಿಯವರು ಶ್ರಮಿಸಿದ್ದರು., ಎಸ್ಪಿಯವರು ಪ್ರಕರಣವನ್ನು ಬೇದಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಶ್ಲಾಘನೆ ಮಾಡಿ, ಬಹುಮಾನ ಘೋಷಣೆ ಮಾಡಿದ್ದಾರೆ.
Comments are closed.