ಹುಲಗಿಯ ರಾಜಾಹುಸೇನ್‌ಗೆ ರಾಜ್ಯ ಯುವ ಪ್ರಶಸ್ತಿ ಪ್ರದಾನ

Get real time updates directly on you device, subscribe now.

ಜನ ಸೇವೆಯಿಂದ ನಮ್ಮನ್ನು ಗುರುತಿಸುತ್ತಾರೆ : ಶಾಸಕ ಶ್ರೀನಿವಾಸ್
ಕೊಪ್ಪಳ: ಚಿಕ್ಕಮಗಳೂರ ಜಿಲ್ಲೆ ತರೀಕೆರೆಯಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಜಿಲ್ಲೆಯ ಹುಲಗಿ ಗ್ರಾಮದ ರಾಜಾಹುಸೇನ್ ಹುಸೇನ್ ಭಾಷಾ ಜವಳಿ ಅವರಿಗೆ ಕ್ರೀಡೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ ೨೦೨೩-೨೪ ನೇ ಸಾಲಿನ ರಾಜ್ಯ ಯುವ ಪ್ರಶಸ್ತಿ ಪ್ರದಾನ ಮಾಡಿದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಜಿಲ್ಲಾ ಘಟಕ ಚಿಕ್ಕಮಗಳೂರ ಅವರ ಆಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಮತ್ತು ಜಿಲ್ಲಾ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇದು ಬಹಳ ಒಳ್ಳೆಯ ಕಾರ್ಯಕ್ರಮ ಇನ್ನೊಬ್ಬರಿಗೆ ಸೇವೆ ಮಾಡಿದರೆ ಜನರು ನೆನಪಿಸುತ್ತಾರೆ ಎಂಬುದನ್ನು ಒಕ್ಕೂಟ ತೋರಿಸಿಕೊಟ್ಟಿದೆ, ಸರಕಾರ ನಿಲ್ಲಿಸಿದರೂ ಒಕ್ಕೂಟ ಅಂತಹ ಕೆಲಸ ಮಾಡುತ್ತಿರುವದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರ ಒಕ್ಕೂಟದ ರಾಷ್ಟ್ರಾಧ್ಯಕ್ಷ ಜಾವೇದ್ ಜಮಾದಾರ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷರುಗಳಾದ ಇಮ್ರಾನ್ ಅಹಮದ್ ಬೇಗ್ ಚಿಕ್ಕಮಗಳೂರು, ಮಂಜುನಾಥ ಜಿ. ಗೊಂಡಬಾಳ ಕೊಪ್ಪಳ, ಪುಂಡಲೀಕ ಬಿಜಾಪೂರ, ಪುರಸಭೆ ಅಧ್ಯಕ್ಷ ಪರಮೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಸಂಸ್ಕೃತಿ ಚಿಂತಕ ಎ.ಸಿ.ಚಂದ್ರಪ್ಪ, ಪುರಸಭೆ ಸದಸ್ಯ ಟಿ.ಜಿ.ಶಶಾಂಕ, ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಮುಖಂಡರಾದ ಟಿ. ಎಸ್.ಪ್ರಕಾಶ್ ವರ್ಮ, ಮಾನವ ಸರ್ವೇಕ್ಷಣಾ ಇಲಾಖೆ ಮುಖ್ಯಸ್ಥರಾದ ಡಾ.ಎಚ್.ಮರುಳಸಿದ್ದಯ್ಯ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತೆ ಜ್ಯೋತಿ ಗೊಂಡಬಾಳ ಇತರರು ಇದ್ದರು.
ಪ್ರಶಸ್ತಿ ವಿಜೇತರು : ಕೊಪ್ಪಳ ಜಿಲ್ಲೆ ಹುಲಗಿಯ ರಾಜಾಹುಸೇನ್ ಹುಸೇನ್ ಭಾಷಾ ಜವಳಿ, ಸಾರ್ತಿನ್ ಶೆಟ್ಟಿಗಾರ್ ಉಡುಪಿ, ಆನಂದ್ ಜಡಗೆನವರ ಬೀದರ್, ದೊಡ್ಡ ಸಿದ್ದ ನಾಯಕ ಚಾಮರಾಜನಗರ, ಸೂರ್ಯ ಎಸ್. ಕೋಲಾರ, ಉಮರ್ ಫಾರೂಕ್ ದಳವಾಯಿ ಗದಗ, ಸಾಗರ್ ಇಟೇಕರ್ ರಾಯಚೂರ, ಟಿ. ಎನ್. ಜಗದೀಶ್ ಚಿಕ್ಕಮಗಳೂರು, ಸುರೇಶ ಮಲ್ಲೇಶಪ್ಪಾ ತಳವಾರ ಕಲಬುರ್ಗಿ, ಅಬ್ದುಲ್ ಶಾಹಿದ್ ಮೈಸೂರು, ಸಂಗಪ್ಪ ಪೂಜಾರಿ ಬೆಳಗಾವಿ, ಸಂದೇಶ್ ಆರ್. ನಾಯಕ್ ಉತ್ತರ ಕನ್ನಡ, ಕುಮಾರಿ ಸರಸ್ವತಿ ಎನ್. ಬೆಂಗಳೂರು ಗ್ರಾ., ಪವನ್ ಯಾದವ್ ಚಿತ್ರದುರ್ಗ, ಜಿತಾಕ್ಷ ಜಿ. ದಕ್ಷಿಣ ಕನ್ನಡ, ಹರ್ಷಿತ್ ಸಿ ಪಿ. ಬೆಂಗಳೂರು ನಗರ, ರಘು ವಿ. ಮಂಡ್ಯ, ಕೌಸ್ತುಭ ಪಿ. ಕುಮಾರ್ ಶಿವಮೊಗ್ಗ, ಮಾಳಪ್ಪ ಯಾದಗಿರಿ, ವಿ. ಎಂ. ಪಾಟೀಲ್ ಬಾಗಲಕೋಟ, ಮಂಜುನಾಥ್ ಕೆ. ಬಳಗಲಿ ಧಾರವಾಡ, ಕುಮಾರಿ ಜ್ಞಾನಿಕ ಐವಿ ದಾವಣಗೇರೆ, ಗದಿಗಯ್ಯ ಗುರಯ್ಯ ಹಾವೇರಿ, ಕಾರ್ತಿಕ್ ಚಿಕ್ಕಬಳ್ಳಾಪುರ, ಚಂದನ್ ವಿ. ಎನ್. ತುಮಕೂರು, ಅರುಣ್ ಕುಮಾರ್ ಪಿ ಎಂ. ಹಾಸನ, ಸುಜಯ್ ಟಿ ಪಿ. ಕೊಡಗು, ಧನುಷ್ ವಿಜಯನಗರ, ಅವಿನಾಶ್ ಎನ್. ಬಳ್ಳಾರಿ, ಸುನಿಲ್ ಎಂ ಕೆ. ರಾಮನಗರ, ಕೃಷ್ಣ ಚಂದಪ್ಪ ಕುಂಬಾರ ವಿಜಯಪುರ ಸಾಂಘಿಕ ಪ್ರಶಸ್ತಿ : ಮಾತೃಭೂಮಿ ಯುವಕ ಸಂಘ ಲಗ್ಗೆರೆ ಬೆಂಗಳೂರು ಮತ್ತು ವೀರಾಂಜನೇಯ ಕಲಾ ಮಂಡಳಿ ಶಿವನಿ ಅಜ್ಜಂಪುರ ಚಿಕ್ಕಮಗಳೂರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Get real time updates directly on you device, subscribe now.

Comments are closed.

error: Content is protected !!