ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ  ತಂಗಡಗಿ

Get real time updates directly on you device, subscribe now.

 ಕೊರೊನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಪರಿಶೀಲಿಸಲು ಡಿಸೆಂಬರ್ 23ರಂದು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಜಿಲ್ಲಾಸ್ಪತ್ರೆಯಲ್ಲಿನ ಸ್ಥಿತಿಗತಿಯ ಬಗ್ಗೆ ಕೇಳಿ ಅಲ್ಲಿನ ರು.
ಇಲ್ಲಿ ಎಲ್ಲರಿಗೂ ಒಂದೇ ನ್ಯಾಯ. ಸೌಲಭ್ಯಗಳು ಎಲ್ಲರಿಗೂ ಸಮ ಪ್ರಮಾಣದಲ್ಲಿ ಸಿಗಬೇಕು. ಉತ್ತಮ ಚಿಕಿತ್ಸೆ ಬೇಕು ಎಂದು ನಾವು ಹೇಗೆ ಬಯಸುತ್ತೇವೆಯೋ ಅದೆ ರೀತಿ ಸಾಮಾನ್ಯ ವ್ಯಕ್ತಿಗಳು ಸಹ ಬಯಸುತ್ತಾರೆ. ಕೆಲವರು ಒಳ್ಳೆಯ ಆಸ್ಪತ್ರೆಗಳಿಗೆ ಹೋಗಬೇಕು. ಬಡವರು ಮಾತ್ರ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಅಲ್ಲಿ ಸೌಕರ್ಯ ಸಿಗದೇ ನರಳಬೇಕೆ? ನೀವು ಆಸ್ಪತ್ರೆಗಳಿಗೆ ಹೋಗಿಲ್ಲವೇ? ಅಲ್ಲಿನ ವಾಸ್ತವ ಸ್ಥಿತಿಯನ್ನು ಒಮ್ಮೆಯಾದರು ನೋಡಿದ್ದೀರಾ? ಎಂದು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ನಿರ್ದೇಶಕರಿಗೆ ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯಲ್ಲಿ ಶುಚಿತ್ವದ ಕಾಪಾಡದ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿ ಅವರಿಂದ ವಿವರಣೆಯನ್ನು ಪಡೆದುಕೊಳ್ಳಲು ಸಚಿವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. 15 ದಿನಗಳೊಳಗೆ ಜಿಲ್ಲಾಸ್ಪತ್ರೆಯ ಪ್ರತಿಯೊಂದು ಕಡೆಗೆ ಶುಚಿತ್ವ ಕಾಣಬೇಕು. ಆಸ್ಪತ್ರೆಯ ಒಳಗೆ ಮತ್ತು ಹೊರಗೆ ಆರೋಗ್ಯರ ವಾತಾವರಣ ಇರುವಂತೆ ಕಾಣಬೇಕು. ಒಡೆದು ಹೋದ ಕಿಟಗಿ ಬಾಗಿಲು ಲೈಟುಗಳನ್ನು ಸರಿಪಡಿಸಬೇಕು ಎಂದು ಸಚಿವರು ಬೋಧಕ ಆಸ್ಪತ್ರೆಯ ನಿರ್ದೇಶಕರಿಗೆ ಗಡುವು ವಿಧಿಸಿದರು.
ಚಿಕಿತ್ಸೆಗೆಂದು ಬರುವ ಜನರಿಗೆ ಅಲ್ಲಿ ಯಾರು ಸಹ ಕೇಳದಂತಹ ಪರಿಸ್ಥಿತಿ ಬಂದಿದೆ. ಸಾರ್ವಜನಿಕರು ನೆಲದ ಮೇಲೆ ಮಲಗುವಂತ ದುಸ್ಥಿತಿಯಿದೆ. ಆಸ್ಪತ್ರೆಯನ್ನು ಅಂತಹ ದುಸ್ಥಿತಿಗೆ ತಳ್ಳಿರುವುದನ್ನು ಸಹಿಸಲಾಗದು. ಈ ಆಸ್ಪತ್ರೆ ಸ್ಥಿತಿಯನ್ನು ಹದಗೆಡಿಸಿದವರ ಮೇಲೆ ಶಿಸ್ತು ಕ್ರಮವಾಗಬೇಕು. ಈ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಕೂಡಲೇ ವರದಿಯೊಂದನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ವೈದ್ಯಕೀಯ ಶಿಕ್ಷಣ ಸಚಿವರಿಗೆ ವರದಿಯನ್ನು ಕಳುಹಿಸಿ ಕ್ರಮ ವಹಿಸಿ ಆ ದುರಾವಸ್ಥೆಯನ್ನು ಸರಿಪಡಿಸಲಾಗುವುದು ಎಂದರು.
ಈ ಆಸ್ಪತ್ರೆಗೆ ಇದುವರೆಗೆ ಮಂಜೂರಾದ ಅನುದಾನ ಎಷ್ಟು? ಖರ್ಚಾದ ಅನುದಾನ ಎಷ್ಟು ಎಂಬುದರ ಬಗ್ಗೆ
ಪರಿಶೀಲಿಸಿ ವಿವರವಾದ ಮಾಹಿತಿ ಪಡೆಯಲು ಅದಕ್ಕಾಗಿ ಅಧಿಕಾರಿಯೊಬ್ಬರನ್ನು ನಿಯೋಜಿಸಿ ಕ್ರಮ ವಹಿಸಬೇಕು ಎಂದು ಸಹ ಇದೆ ವೇಳೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಡಿಎಚ್‌ಓ ಡಾ.ಲಿಂಗರಾಜ, ಬೋಧಕ ಆಸ್ಪತ್ರೆಯ ಆಡಳಿತ ವರ್ಗದವರು ಸೇರಿದಂತೆ ಇನ್ನೀತರು ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: