ಕಾರ್ – ಲಾರಿಗೆ ಡಿಕ್ಕಿಯಾಗಿ ದಂಪತಿ ಗಂಭೀರವಾಗಿ ಗಾಯ
ಕುಷ್ಟಗಿ:
ಪಟ್ಟಣದ ರಾಷ್ಟ್ರಿಯ ಹೆದ್ದಾರಿ -50 ರ ಜಿಯೊ ಪೆಟ್ರೋಲ್ ಬಂಕ್ ಹತ್ತಿರ ಕಾರ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹರಿಹಾಯ್ದು ಎದುರಗಡೆ ಬರುವ ಲಾರಿಗೆ ಡಿಕ್ಕಿಯಾಗಿ ದಂಪತಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಜರುಗಿದೆ.
ಗಾಯಗೊಂಡವರು ಪಂಜಾಬ ಮೂಲದ ದಂಪತಿಗಳಾದ ರಾಜೀವ್ ಶರ್ಮ (61), ಪೂನಮ್ ರಾಜೀವ್ ಶರ್ಮ (45) ಎಂದು ತಿಳಿದು ಬಂದಿದೆ.
ದಂಪತಿ ಸಮೇತ ರಾಜೀವ್ ಶರ್ಮ ರವರು ಬೆಂಗಳೂರಿನಿಂದ ಸೊಲ್ಲಾಪೂರಕ್ಕೆ ರಾಷ್ಟ್ರೀಯ ಹೆದ್ದಾರಿ -50ರ ಮೂಲಕ ತೆರಳುತ್ತಿರುವಾಗ ಕುಷ್ಟಗಿ – ಇಲಕಲ್ ಮಾರ್ಗ ಮಧ್ಯದ ಜಿಯೋ ಪೆಟ್ರೋಲ್ ಬಂಕ್ ಹತ್ತಿರ ಕಾರ್ ಅಪಘಾತ ಸಂಭವಿಸಿದೆ. ಕಾರ್ ಚಾಲಕನ ನಿರ್ಲಕ್ಷತನ ಹಾಗೂ ಅತಿವೇಗದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮಧ್ಯದ ವಿಭಜಕ ( ಡಿವೈಡರ್) ಹತ್ತಿ ಎದುರಗಡೆ ಬರುವ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರ್ ಚಾಲಕ ರಾಜೀವ್ ಶರ್ಮ ಹಾಗೂ ರಾಜೀವ್ ನ ಪತ್ನಿ ಪೂನಮ್ ಶರ್ಮ ರವರಿಗೆ ಗಂಭಿರವಾಗಿ ಗಾಯಗೊಂಡಿದ್ದು, ಕುಷ್ಟಗಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಗೆ ರವಾನಿಸಲಾಗಿದೆ.
Comments are closed.