ಕುಷ್ಟಗಿಯಲ್ಲಿ ಪತ್ರಿಕಾ ವಿತರಕರ ದಿನಾಚರಣೆ ಯಶಸ್ವಿ

ಕುಷ್ಟಗಿ:- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ತಾಲೂಕು ಘಟಕ ಕುಷ್ಟಗಿ ಇವರ ವತಿಯಿಂದ ಪತ್ರಿಕಾ ವಿತರಕರ ದಿನಾಚರಣೆಯನ್ನು ಶುಕ್ರವಾರ ಮಾಡಲಾಯಿತು.
ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಹಾಗೂ ಹಿರಿಯ ಪತ್ರಕರ್ತ ರವೀಂದ್ರ ಬಾಕಳೆ ಕೇಕ್ ಕತ್ತರಿಸುವ ಮೂಲಕ ವಿತರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಪತ್ರಿಕಾ ವಿತರಕರ ಕುರಿತು ಮಾತನಾಡುತ್ತಾ ಪತ್ರಕರ್ತರು ಈ ಸಮಾಜದ ಅಂಕು ಡೊಂಕು ತಿದ್ದುವಂತಹ ಕೆಲಸ ಮಾಡಿದರೆ ಪತ್ರಕರ್ತರು ಬರೆದ ಸುದ್ದಿಯನ್ನು ಪೇಪರನಲ್ಲಿ ಬಂದ ತಕ್ಷಣಾ ಸುದ್ದಿಯನ್ನು ಮಳೆ ಬಿಸಿಲು ಚಳಿಯನ್ನು ಲೆಕ್ಕಿಸದೆ ಪತ್ರಿ ಮನೆ ಮನೆಗೆ ಮತ್ತು ಅಂಗಡಿಗೆ ಹಾಗೂ ಸರಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವಾರು ಕಡೆ ಪತ್ರಿಕೆ ಹಂಚುವ ಮೂಲಕ ಸಮಾಜದ ಸುದ್ದಿಗಳನ್ನು ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ಪತ್ರಿಕಾ ವಿತರಕರು ಮಾಡುತ್ತಾರೆ.ಅಂತಹ ಪತ್ರಿಕಾ ವಿತರಕರ ಬೆಂಬಲಕ್ಕೆ ನಾವುಗಳು ನಿಲ್ಲಬೇಕು. ಪತ್ರಿಕಾ ವಿತರಕರ ಕಷ್ಟ ಬಹಳ ಇದ್ದು ಪತ್ರಿಕಾ ವಿತರಕರು ಅಸಂಘಟಿತ ವಲಯ ಕಾರ್ಮಿಕರಲ್ಲಿ ಬರುತ್ತಾರೆ ಅವರಿಗೆ ಕಾರ್ಮಿಕ ಇಲಾಖೆಯಿಂದ ಸರಕಾರದ ಸೌಲಭ್ಯ ಸಿಗಬೇಕಾಗಿದೆ ಎಂದು ಹೇಳಿದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಪವಾಡೆಪ್ಪ ಚೌಡ್ಕಿ ಮಾತನಾಡಿ ಪತ್ರಕರ್ತರು ಮತ್ತು ಪತ್ರಿಕಾ ವಿತರಕರು ಒಂದೇ ಮುಖದ ಎರಡು ನ್ಯಾಣಗಳು ಇದ್ದಂತೆ ಅವರ ಸಮಸ್ಯೆಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕು ಘಟಕದ ಸಂಘ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ ಯಾವುದೇ ವಿಷಯಗಳು ಇದ್ದರೆ ನಮ್ಮ ಪತ್ರಕರ್ತರ ಜೊತೆಗೆ ಹಂಚಿಕೊಳ್ಳಬಹುದು ಯಾವುದೇ ತೊಂದರೆ ಬೇಡ ಯಾವುದೇ ಸಂಕೋಪ ಇಲ್ಲದೆ ತಾವುಗಳು ನಮ್ಮ ಜೊತೆಗೆ ಇದ್ದರೆ ಸಾಕು ನಿಮ್ಮ ಬೆಂಬಲಕ್ಕೆ ನಾವುಗಳು ಸದಾ ಇರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮಹೇಶ ಹಡಪದ ಹಾಗೂ ಕರ್ನಾಟಕ ಕಾರ್ಯನಿರತಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಕಮ್ಮಾರ ಕಾರ್ಯಕ್ರಮ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಶರಣಪ್ಪ ಲೈನದ್ ಸ್ವಾಗತಿಸಿದರು ಹಾಗೂ ನಿರೂಪಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರಾದ ಜಮದಗ್ನಿ ಗುರಿಕಾರ, ಹುಸೇನಸಾನ ಗುಮಗೇರಾ, ಬಸವರಾಜ ಗೌಡ್ರ ನೆರೆಬೆಂಚಿ ಇವರಿಗೆ ಗೌವರ ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮ ಸಂದರ್ಭದಲ್ಲಿ ಪತ್ರಕರ್ತರಾದ ಪರಶಿವಮೂರ್ತಿ ದೋಟಿಹಾಳ, ಭೀಮನಗೌಡ ಮಂಡಲಮರಿ, ಸಂಗಮೇಶ ಲೂತಿಮಠ, ಮಲ್ಲಿಕಾರ್ಜುನ ದೋಟಿಹಾಳ, ಲಕ್ಷ್ಮಣ ನವನಹಳ್ಳಿ, ಮೈಲಾರಪ್ಪ ಮಂತ್ರಿ, ಲಕ್ಷ್ಮಿಮತಿ ಹಿರೇಮಠ, ಮರಿಯಪ್ಪ ಹಕ್ಕಲ್, ಮುತ್ತಣ್ಣ ಹಕ್ಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Comments are closed.