ಕೊಪ್ಪಳಕ್ಕೆ ಶತ್ರುತ್ವ ರಾಜಕಾರಣ ಬೇಡ: ಸಿವಿಸಿ ಮನವಿ

Get real time updates directly on you device, subscribe now.

ಕೊಪ್ಪಳ: ಗುರುವಾರ ನಮ್ಮ ಮೈತ್ರಿ ಪಕ್ಷ ಬಿಜೆಪಿ ಹಮ್ಮಿಕೊಂಡಿದ್ದ  ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಘಟನೆಗಳನ್ನು ವೈಯಕ್ತಿಕ ಹಗೆತನ ಮತ್ತು ರಾಜಕೀಯ ಶತ್ರುತ್ವ ಸಾಧಿಸಲು ಬಳಸಿಕೊಳ್ಳಬಾರದು ಎಂದು ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ಕೆಲವೊಮ್ಮೆ ಕೈಮೀರಿ ಘಟನೆಗಳು ಘಟಿಸುತ್ತವೆ. ಅವುಗಳನ್ನೇ ನೆಪವಾಗಿಟ್ಟುಕೊಂಡು ಮಹಿಳೆಯರನ್ನು ಗುರಿ ಮಾಡುವುದು ಸಮಂಜಸವಾಗಲಾರದು. ಇಂತಹ ಸಂದರ್ಭಗಳಲ್ಲಿ ಪೂಲೀಸ್ ಇಲಾಖೆಯನ್ನು ಬಳಸಿಕೊಂಡು ಪ್ರಕರಣ ದಾಖಲಿಸುವುದು ರಾಜಕೀಯ ಸೇಡಿಗೆ ದಾರಿ
ಮಾಡಿ ಕೊಡುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈಯಕ್ತಿಕ ಹಗೆತನ ಮತ್ತು ಶತ್ರುತ್ವ ಕೊಪ್ಪಳದ ರಾಜಕೀಯ ಇತಿಹಾಸದಲ್ಲಿ ಇಲ್ಲ. ಇಲ್ಲಿರುವುದು ರಾಜಕೀಯ ಮತ್ತು ಸೖದ್ದಾಂತಿಕ ವಿರೋಧವೇ ಹೊರತು
ಶತ್ರುತವ ವಲ್ಲ. ಈ ಹಿನ್ನಲೆಯಲ್ಲಿ ಶಾಸಕರು ಮತ್ತು ಕಾಂಗ್ರೆಸ್ ನಾಯಕರು ಘಟನಾವಳಿಗಳನ್ನು ಅವಲೋಕಿಸಬೇಕು. ಶಾಸಕರು ಮತ್ತು ಕಾಂಗ್ರೆಸ್ ನಾಯಕರು ಪ್ರಚೊದನಾಕಾರಿಯಾಗಿ ಮಾತನಾಡಬಾರದು ಎಂದು ಸಿವಿಸಿ ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!