ಕೊಪ್ಪಳ ಪ್ರಜ್ಞಾವಂತರು, ಸಾಮಾಜಿಕ, ರಾಜಕೀಯ ಹೊಣೆ ಹೊತ್ತವರು ಮಾಲಿನ್ಯದ ವಿರುದ್ಧ ಬೀದಿಗಿಳಿಯಲಿ: ಗೊಂಡಬಾಳ

0

Get real time updates directly on you device, subscribe now.

ಬಲ್ಡೋಟ ತೊಲಗಿಸಲು 200ನೇ ದಿನದ ಹೋರಾಟದ ಆಟೋ ಪ್ರಚಾರಕ್ಕೆ ಚಾಲನೆ

ಕೊಪ್ಪಳ: ಬಲ್ಡೋಟ ಇಲ್ಲಿಂದ ತೊಲಗಿದರೆ ಮಾತ್ರ ಕೊಪ್ಪಳ-ಭಾಗ್ಯನಗರಕ್ಕೆ ಭವಿಷ್ಯ. ಇಲ್ಲದಿದ್ದರೆ ಒಂದೂವರೆ ಲಕ್ಷ ಜನರು ಅನಾರೋಗ್ಯದ ದುಷ್ಪರಿಣಾಮ ಎದುರಿಸಬೇಕಾಗುತ್ತದೆ, ಅನುಮಾನ ಇದ್ದವರು ಪಕ್ಕದ ಜಿಂದಾಲಿಗೆ ಹೋಗಿ ನೋಡಿ ಬನ್ನಿ ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಆತಂಕ ವ್ಯಕ್ತಪಡಿಸಿದರು. ಇದೇ 18.05.2026ರಂದು ಸೋಮವಾರ ನಗರಸಭೆ ಮುಂದೆ ಅವಳಿ ನಗರದ ಜನರ ಆರೋಗ್ಯ ಹಾನಿ ಮಾಡಲು ವಿಸ್ತರಣೆ ಬಯಸಿ ಬರುತ್ತಿರುವ ಬಲ್ಡೋಟ ಕಾರ್ಖಾನೆ ಬಂದ್ ಆಗಬೇಕು. ಇಲ್ಲಿನ ಜನಪ್ರತಿನಿಧಿಗಳು ಜನರ ಪರವಾಗಿ ಇದ್ದಾರೆ ಎಂಬ ಭರವಸೆ ಇದೆ, ಅದು ಕೂಡಲೇ ಈಡೇರಬೇಕಿದೆ, ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು 2011ರಿಂದ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕದಿಂದ ಅರ್ಧ ಊರು ಮಾಲಿನ್ಯ ಬಾಧಿವಾಗುತ್ತಿದ್ದು, ನಗರದ ಜನರ ಆರೋಗ್ಯದ ದುಷ್ಪರಿಣಾಮ ತಡೆಯಲು ಈ ಘಟಕ ಬಂದ್ ಮಾಡಿ, ಜನರ ಆರೋಗ್ಯ ಖಾತ್ರಿಪಡಿಸಸಬೇಕು. ಬಲ್ಡೋಟ ಕಂಪನಿಯು ಬಸಾಪುರ ಗ್ರಾಮದ ಕೆರೆಯನ್ನು ಅನಧಿಕೃತವಾಗಿ ಮಂಜೂರಿ ಹೆಸರಿನಲ್ಲಿ ವಶಪಡಿಸಿಕೊಂಡಿದ್ದು ಸುತ್ತಲಿನ ಸಾವಿರಾರು ಜಾನುವಾರುಗಳ ನೀರಿನ ಅಭಾವವಾಗಿದೆ. ಕಂಪನಿ ಹಾಕಿದ ಕಾಂಪೌಂಡ್ ತೆರವು ಮಾಡಿ ಜಾನುವಾರು ನೀರು ಕುಡಿಯಲು ಅವಕಾಶ ಮಾಡಿಕೊಡಬೇಕು. ತುಂಗಭದ್ರ ನೀರು ವಿಷಗೊಳಿಸುತ್ತಿರುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಮುಚ್ಚಬೇಕು. ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಸರ್ಕಾರ ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎ.ಐ.ಐ.ಎಂ.ಎಸ್ ಸಂಸ್ಥೆ ಮತ್ತು ಐ.ಐ.ಎಸ್.ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕು ಎಂದು ಧರಣಿ ನಡೆಯುತ್ತಿದೆ.
ದಿ: 18.05.2026 ಸೋಮವಾರ ಇಲ್ಲಿ ನಡೆಯುತ್ತಿರುವ ಧರಣಿ 200ನೇ ದಿನ ತಲುಪುತ್ತದೆ.. ಇದರಂಗವಾಗಿ ಎರಡು ದಿನಗ ಕಾಲ ಬಾಧಿತ ಗ್ರಾಮಗಳು ಮತ್ತು ಕೊಪ್ಪಳ, ಭಾಗ್ಯನಗರದಲ್ಲಿ ಆಟೋ ಮೂಲಕ ಪ್ರಚಾರ ಮಾಡಿ ಮಾಲಿನ್ಯದ ಕುರಿತು ಜನಜಾಗೃತಿ ಮಾಡಲಾಗುತ್ತಿದೆ. ಆಟೋ ಪ್ರಚಾರಕ್ಕೆ ಚಾಲನೆ ಕೊಟ್ಟು ಮಾತನಾಡಿದ ಗೊಂಡಬಾಳ ಅವರು “ಇದು ನಗರದ ಪ್ರಜ್ಞಾವಂತರು, ಸಾಮಾಜಿಕ, ರಾಜಕೀಯ ಕ್ಷೇತ್ರದ ಜವಾಬ್ದಾರಿ ಹೊತ್ತವರು ಮುಂದೆ ಬಂದು ಹೋರಾಟಕ್ಕೆ ಹೆಗಲು ಕೊಡಬೇಕು ಎಂದರು. ತಾಲೂಕಿನ 22 ಹಳ್ಳಿಗಳು ಧೂಳು ಬಾಧಿತವಾಗಿವೆ. ನಗರದ ಜನತೆ ಈ ವಿಷಯದಲ್ಲಿ ಅಸಡ್ಡೆ ತೋರಿದರೆ ಭವಿಷ್ಯದಲ್ಲಿ ಕೊಪ್ಪಳ ಭವಿಷ್ಯ ಉಳಿಯದು. ಬಾಧಿತರಾಗುವ ಜನರು ಮುಂಜಾಗ್ರತೆ ವಹಿಸಿ ಹೋರಾಡೋಣ ಎಂದರು.
ಧರಣಿಯಲ್ಲಿ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಎಸ್.ಮಹಾದೇವಪ್ಪ ಮಾವಿನಮಡು, ನಾಗರಾಜ ಕುಷ್ಟಗಿ ಲಾಚನಕೇರಿ, ವಿಜಯಮಹಾಂತೇಶ ಹಟ್ಟಿ, ಮೈಲಾರಪ್ಪ ಅರಳಿಗಿಡದ, ರವಿಕುಮಾರ ಹಣವಾಳ, ಈರಣ್ಣ ಬಡಿಗೇರ, ಶಿವಪ್ಪ ಜಲ್ಲಿ, ಗಂಗಮ್ಮ ಕುರುಗೋಡು ಇದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!