ಶ್ರೀ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿ ಪೂರ್ವ ವಸತಿ ಕಾಲೇಜ್ -ಕಿರು ಪರಿಚಯ
ಗುಡಿಸಲಿನ ಮಕ್ಕಳ ಎದೆಯಲ್ಲಿ ಅಕ್ಷರ ದೀಪ ಹಚ್ಚುವ ಕಾರ್ಯ
ನೂತನ ಕಟ್ಟಡದ ಲೋಕಾರ್ಪಣಾ ಕಾರ್ಯಕ್ರಮದ ನಿಮಿತ್ಯ
ಶ್ರೀ ಗವಿಸಿದ್ಧೇಶ್ವರ ಗುರುಕುಲ ಆವರಣದ ಕಿರು ಪರಿಚಯ



ತಮಗೆ ತಿಳಿದಿರುವಂತೆ ಅನ್ನ, ಅಕ್ಷರ, ಅರಿವು ಆರೋಗ್ಯ, ಆಧ್ಯಾತ್ಮದ ದಾಸೋಹದ ಕ್ಷೇತ್ರ ಶ್ರೀ ಗವಿಮಠ. ತಾವು ಪೂಜಿಸುವ ದೇವಮಂದಿರದಲ್ಲಿ ದೀಪ ಹಚ್ಚುವುದಕ್ಕಿಂತ ದೀಪವೇ ಇಲ್ಲದ ಗುಡಿಸಲಿನ ಮಕ್ಕಳ ಎದೆಯಲ್ಲಿ ಅಕ್ಷರ ದೀಪ ಹಚ್ಚುವ ಕಾರ್ಯವೇ ಪೂಜೆ ಎಂದು ಅರಿತವರು ಶ್ರೀ ಮಠದ ಪೂಜ್ಯರು. ಈ ನಾಡಿನ ಮಕ್ಕಳ ಏಳ್ಗೆಗಾಗಿ ಶಿಕ್ಷಣ ಸಂಸ್ಥೆ ಸ್ಥಾಪಿಸಿವುದರ ಜೊತೆಗೆ ಮುಖ್ಯವಾಗಿ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಶ್ರೀ ಗವಿಮಠವು ಆಶ್ರಯ ತಾಣವಾಗಿದೆ. ೧೯೫೧ರಲ್ಲಿ ಕೆಲವೇ ವಿದ್ಯಾ


ರ್ಥಿಗಳಿಂದ ಆರಂಭವಾದ ಶ್ರೀ ಗವಿಸಿದ್ದೇಶ್ವರ ಉಚಿತ ವಸತಿ ಹಾಗೂ ಪ್ರಸಾದ ನಿಲಯದಲ್ಲಿ ಇಂದು ೫೦೦೦ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಬೆಳಗಿಸಿಕೊಳ್ಳುತ್ತಿದ್ದಾರೆ.
ಪ್ರಸ್ತುತ ಗುರುಕುಲ ಕಾಲೇಜು ಸ್ಥಾಪಿಸುವ ಉದ್ಧೇಶ
ಗ್ರಾಮಿಣ ಮಟ್ಟದಲ್ಲಿ ಉತ್ತಿರ್ಣರಾದ ಪ್ರತಿಭಾವಂತ ವಿದ್ಯಾರ್ಥಿನಿಯರು ಬಡತನ, ಬಸ್ಸಿನ ಪ್ರಯಾಣದ ಅನಾನುಕೂಲ, ನೀಟ್, ಸಿ.ಇ.ಟಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ದುಬಾರಿ ಶುಲ್ಕ ನೀಡಲಾಗದೆ ಅನೇಕ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಬಾರದೆAದು ಇದನ್ನರಿತ ಶ್ರೀ ಗವಿಮಠವು ಕೊಪ್ಪಳ ನಗರದ ೧೧ಕಿ.ಮೀ ದೂರದಲ್ಲಿ ಕೋಳೂರು-ಕಾಟ್ರಳ್ಳಿ ಸಮೀಪದ ೪೮ಎಕರೆ ಸ್ಥಳದಲ್ಲಿ ಒಟ್ಟು ೧೫೦೦ವಿದ್ಯಾರ್ಥಿನಿಯರಿಗಾಗಿ ಶ್ರೀ ಗವಿಸಿದ್ದೇಶ್ವರ ಗುರುಕುಲ ವಸತಿಯುಕ್ತ ಬಾಲಕಿಯರ ಪದವಿ ಪೂರ್ವ ಕಾಲೇಜ್ ಸಕಲ ಸೌಲಭ್ಯದೊಂದಿಗೆ ಸುಮಾರು ೧,೫೩,೪೦೦ಚದರ ಅಡಿಯಲ್ಲಿ ಗುರುಕುಲದ ಬೃಹತ್ ಕಟ್ಟಡಗಳನ್ನು ೬೦ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಪ್ರಸ್ತುತ ವರ್ಷ (೨೦೨೬-೨೦೨೭)ರಲ್ಲಿArts HEGPಕಲಾ ೧ ವಿಭಾಗವನ್ನು, ವಿಜ್ಞಾನ À (Science PCMB) ೨ ವಿಭಾಗಗಳನ್ನು ಹಾಗೂ Long term (ವಿಜ್ಞಾನ ವಿಷಯದಲ್ಲಿ ಧೀರ್ಘಾವಧಿ) ವಿದ್ಯಾರ್ಥಿಗಳಿಗೆ ೨ ವಿಭಾಗಗಳನ್ನು ಪ್ರಾರಂಬಿಸಿ ಈ ವರ್ಷ ೬೦೦ ಮಕ್ಕಳಿಗೆ ಪ್ರವೇಶಾತಿ ನೀಡಲಾಗುವುದು. ಂಡಿಣs(ಕಲಾ) ವಿದ್ಯಾರ್ಥಿಗಳಿಗೆ Arts(PÀ¯Á) «zÁåyðUÀ½UÉ CSE/CLAT/CUET ಈ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಎರಡು ವರ್ಷದಲ್ಲಿ ನೀಡಲಾಗುವುದು. ಹಾಗೆಯೇ ವಿಜ್ಞಾನ ವಿಭಾಗದ ((Science PCMB) ವಿದ್ಯಾರ್ಥಿಗಳಿಗೆ JEE, NEET,CET, ICAR ತರಬೇತಿ ನೀಡಲಾಗುವುದು.
ಹಾಗೇಯೇ ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಹೊಂದಿLong term ತರಬೇತಿ( ಕೋಚಿಂಗ್) ಪಡೆಯಲಿಚ್ಚಿಸುವ ವಿದ್ಯಾರ್ಥಿನಿಯರಿಗೆ ಪ್ರವೇಶ ಪರೀಕ್ಷೆಯ ಮುಖಾಂತರ ಪ್ರವೇಶಾತಿ ನೀಡಲಾಗುವುದು.. Long term ವಿದ್ಯಾರ್ಥಿಗಳ ಪ್ರವೇಶ ದಿನಾಂಕದ ಮಾಹಿತಿಯನ್ನು ಶ್ರೀ ಗವಿಸಿದ್ಧೇಶ್ವರ ಗುರುಕುಲ Website ಮುಖಾಂತರ ತಿಳಿಸಲಾಗುವುದು.
ಇಂತಹ ಮಹತ್ವದ ಕಾರ್ಯವನ್ನು ನೆರವೇರಿಸಲು ಅನೇಕ ಜನ ತಮ್ಮ ಹಣೆಯ ಬೆವರಿನ ಹಣವನ್ನು ಸಾವಿರಾರು ಮಕ್ಕಳ ಹಣೆಬರಹವನ್ನು ಬದಲಿಸಲು ಉದಾರ ಹೃದಯವಂತರು ಹಾಗೂ ನಾಡಿನ ಸಧ್ಭಕ್ತರು ಮುಕ್ತ ಮನಸ್ಸಿನಿಂದ ದಾನಗೈದಿರುವರು. ಅವರ ದಾಸೋಹ ಫಲವೇ ಶ್ರೀ ಗವಿಸಿದ್ಧೇಶ್ವರ ಗುರುಕುಲ ಕಾಲೇಜು ನಿರ್ಮಾಣಗೊಂಡಿದೆ. ಪ್ರಸ್ತುತ ಕಾಲೇಜಿನ ಸುಂದರ ಪರಿಸರ ಸ್ನೇಹಿ ಕಟ್ಟಡವನ್ನು ದಿನಾಂಕ : ೦೩.೦೫.೨೦೨೬ ರವಿವಾರದಂದು ಬೆಳಗ್ಗೆ ೧೦:೩೦ಗಂಟೆಗೆ
ದಯಮಾಡಿಸುವ ಪೂಜ್ಯರು, ಭಕ್ತರು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಗೂ ತಮ್ಮೆಲ್ಲರ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಶ್ರೀ ಗವಿಸಿದ್ಧೇಶ್ವರ ಗುರುಕುಲ ವಿದ್ಯಾರ್ಥಿನಿಯರ ಪದವಿ ಪೂರ್ವ ವಸತಿ ಕಾಲೇಜಿನಲ್ಲಿರುವ ಸೌಲಭ್ಯಗಳು
ಪದವಿ ಪೂರ್ವ ಕಾಲೇಜ್ ಕಟ್ಟಡದ ಸೌಲಭ್ಯ (೫೮೦೦೦ ಚದರ ಅಡಿ ಇದೆ)
೧) ಪ್ರಾಚಾರ್ಯರ ಕೊಠಡಿ
೨) ಉಪ ಪ್ರಾಚಾರ್ಯರ ಕೊಠಡಿ
೩) ಆಡಳಿತ ಮಂಡಳಿ ಕೊಠಡಿ
೪) ಸಭಾಂಗಣ ಕೊಠಡಿ
೫) ೪ ಪ್ರಯೋಗಾಲಯಗಳು (ರಸಯಾನಶಾಸ್ತç, ಜೀವಶಾಸ್ತç, ಭೌತಶಾಸ್ತç, ಗಣಕಯಂತ್ರ)
೬) ಗ್ರಂಥಾಲಯ (ಒಳಾಂಗಣ ಹಾಗೂ ಹೊರಾಂಗಣ ಓದುವ ಸೌಲಭ್ಯ)
೭) ಪ್ರತೇಕವಾದ ಪುರುಷರ ಹಾಗೂ ಮಹಿಳಾ ಸಿಬ್ಬಂದಿ ಕೊಠಡಿ
೮) ೧೪ ಬೋಧನಾ ಕೊಠಡಿ
೯) ಶೌಚಾಲಯಗಳು (ವಿಶೇಷ ಚೇತನರಿಗೆ ಒಳಗೊಂಡತೆ)
೧೦) ಕುಡಿಯುವ ನೀರಿನ ವ್ಯವಸ್ಥೆ
ವಸತಿ ನಿಲಯ (೪೨೦೦೦ ಚದರ ಅಡಿ ಇದೆ)
೧) ಪ್ರತಿ ಅಂತಸ್ತಿನಲ್ಲಿ ೮ ಕೊಠಡಿಗಳನ್ನು ಒಳಗೊಂಡ ೨೪ ಡಾರ್ಮಿಟರಿಗಳು
೨) ಪ್ರತಿ ಅಂತಸ್ತಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಗನಿಗುಣವಾಗಿ ವಿವಿಧ ಸವಲತ್ತುಗಳು
೩) ಪ್ರತಿ ಫ್ಲೊರ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ
೪) ಪ್ರತಿ ಅಂತಸ್ತುಗೂ ಮೇಲ್ವಿಚಾರಕರ ಕೊಠಡಿ
೫) ಪ್ರಾಥಮಿಕ ಚಿಕಿತ್ಸಾ ಕೊಠಡಿ
ಭೋಜನಾಲಯ ಹಾಗೂ ಸಭಾಂಗಣ (೫೫೦೦೦ ಚದರ ಅಡಿ ಇದೆ)
೧) ನಿರ್ವಹಣಾ ಕಛೇರಿ
೨) ಸಭಾಂಗಣ
೩) ವೇದಿಕೆ
೪) ೧೬೦೦ ವಿದ್ಯಾರ್ಥಿನಿಯರ ಏಕಕಾಲಕ್ಕೆ ಪ್ರಸಾದ ಸ್ವೀಕರಿಸುವ ಸಾಮಥ್ಯದ ಊಟದ ಹಾಲ್( ದಾಸೋಹ ಭವನ)
೫) ರೊಟ್ಟಿ, ಚಪಾತಿ ಮಾಡುವ ಮಷಿನ್ ಮತ್ತು ಸ್ಟೀಮ್ ಕುಕ್ಕಿಂಗ್ ಮಷಿನ್ ಸೌಲಭ್ಯ ಇರುತ್ತದೆ.
೬) ವಿಶಾಲ ಮತ್ತು ಪ್ರತ್ಯೆಕ ಆಧುನಿಕ ಸುವ್ಯವಸ್ಥಿತಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕೈ ತೊಳೆಯು ಸ್ಥಳ
೭) ಅತ್ಯಾಧುನಿಕ ಅಡುಗೆ ಮನೆ ಸೌಲಭ್ಯ
೮) ಪರಿಸರ ಸ್ನೇಹಿ ( ಗಾಳಿ, ಬೆಳಕಿನ ವ್ಯವಸ್ಥೆ) ವಾತಾವರಣ ಹೊಂದಿದೆ.
೯) ಜಪಾನಿನ ಮಿಯಾವಾಸಿ ಮಾದರಿ/ಎಚ್‌ಟಿಪಿ ಮಾದರಿ ನೀರಿನ ಮರುಬಳಕೆ
ಕ್ರಿಡಾಂಗಣ ( ೬ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.)
ಆರು ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಕ್ರಿಡಾಂಗಣವನ್ನು ಸಿದ್ಧಗೂಳಿಸಲಾಗಿದೆ.
೪೦೦ಮೀ ಅಥ್ಲೇಟಿಕ್ ಕ್ರಿಡಾಂಗಣ
ವಾಲಿಬಾಲ್, ಪುಟ್‌ಬಾಲ್, ಖೋಖೋ ಪಂದ್ಯಗಳ ಕ್ರೀಡಾ ಆವರಣ ನಿರ್ಮಿಸಲಾಗಿದೆ.
ಯೋಗಭ್ಯಾಸ ತರಬೇತಿ
ಗುರುಕುಲ ಆವರಣದಲ್ಲಿ (೪೮ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ.)
ಸುAದರವಾದ ಪರಿಸರ ಸ್ನೇಹಿ ವಾತಾವರಣ.
ಜಪಾನಿನ ಮಿಯುವಾಕಿ ಮಾದರಿಯಲ್ಲಿ ಸುಮಾರು ೨೨೦೦೦ ಗೀಡಗಳನ್ನು ನೆಡಲಾಗಿದೆ.
ಈ ಮಾದರಿ ಇರುವ ಕಲ್ಯಾಣ ಕರ್ನಾಟಕದ ಮೊದಲ ಮಹಾವಿದ್ಯಾಲಯವಾಗಿದೆ.
ಎಸ್ .ಟಿ .ಪಿ ಮಾರಿಯಲ್ಲಿ ನೀರಿನ ಮರುಬಳಕೆ ಮಾದರಿ ಅಳವಡಿಸಲಾಗಿದೆ.
ಎರಡು ಎಕರೆ ವಿಸ್ತಾರವಾದ ಸುಂದರವಾದ ಕೆರೆಯನ್ನು ನಿರ್ಮಿಸಲಾಗಿದೆ.
ಆವರಣದಲ್ಲಿ ವಿಭಿನ್ನ ಜಾತಿಯ ತೆಂಗು, ಮಹಾಗನಿ, ಚಿಕ್ಕು, ಹಲಸು, ಹೂವಿನ ಸಸಿಗಳನ್ನು ನೆಡಲಾಗಿದೆ.
ನುರಿತ ಉಪನ್ಯಾಸಕರಿಂದ ವಿಷಯವಾರು ಬೋಧನೆ
ವಿಷಯಾದರಿತ ನುರಿತ ಬೋಧಕರಿಂದ ಬೋಧನೆ
ಗ್ರೀನ್ ಮತ್ತು ಡಿಜಿಟಲ್ ಲೈಬ್ರರಿ
ಮಹಾವಿದ್ಯಾಲಯದಲ್ಲಿ ಬೋಧಿಸುವ ವಿಷಯಗಳು
ವಿಜ್ಞಾನ ವಿಭಾಗ
ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಗಣೀತ, ಜೀವಶಾಸ್ತ್ರ
ಕಲಾ ವಿಭಾಗದಲ್ಲಿ
ಇತಿಹಾಸ, ಶಿಕ್ಷಣ, ಭೂಗೋಳಶಾಸ್ತç, ರಾಜ್ಯಶಾಸ್ತç
On the occasion of the inauguration of the new building
A brief introduction to the premises of Sri Gavisiddheshwar Gurukul
As they know, Sri Gavi Math is a place of food, letters, knowledge, health, and spirituality. The venerable ones of Sri Math know that lighting a letter lamp in the chest of children in huts where there is no lamp is more worship than lighting a lamp in the temple where they worship. In addition to establishing an educational institution for the upliftment of the children of this country, Sri Gavi Math is a shelter for the education of lakhs of students by establishing free accommodation and Prasad Nilaya. Sri Gavi Math, which started with a few students in 1951, today 5000 students are brightening their future in Sri Gavisiddheshwar Free Accommodation and Prasad Nilaya.
The current purpose of establishing a Gurukul College
The talented girl students who have passed out at the rural level should not be deprived of education due to poverty, inconvenience of bus travel, inability to pay expensive fees for NEET, CET and competitive exams. Knowing this, Sri Gavi Math has established Sri Gavisiddheshwara Gurukul Residential Girls Pre-University College for a total of 1500 students on a 48-acre site near Kolur-Katralli, 11 km from Koppal city. The huge buildings of the Gurukul have been constructed at a cost of Rs. 60 crores with all the facilities under an area of about 1,53,400 square meters.
In the current year (2026-2027), Arts HEGP 1 department, Science PCMB 2 departments and Long term (long term in science) 2 departments will be started and 600 children will be admitted this year. Arts (PÀ¯Á) «zÁåyðUÀ½UÉ CSE/CLAT/CUET All these competitive exam training will be provided in two years for Arts (PÀ¯Á) students. Similarly, JEE, NEET, CET, ICAR coaching will be provided to the students of Science Department (Science PCMB).
Similarly, the students who pass the Science Department and want to get Long Term Coaching will be given admission through the entrance exam. The information about the admission date of the Long Term Students will be informed through the Sri Gavisiddheshwara Gurukul Website.
To accomplish such an important task, many people have donated their hard earned money to change the fate of thousands of children. The result of their generosity is the construction of Sri Gavisiddheshwara Gurukul College. The beautiful eco-friendly building of the current college will be dedicated to the public on Sunday, 03.05.2026 at 10:30 AM in the presence of the kind-hearted people, devotees, public representatives, students and all of them.
Sri Gavisiddheshwara Gurukul Pre-University Housing for Girls Facilities in the college
Facilities of the undergraduate college building (58000 sq ft)
1) Principal’s room
2) Vice Principal’s room
3) Board room
4) Auditorium room
5) 4 laboratories (Chemistry, Biology, Physics, Computer)
6) Library (indoor and outdoor reading facilities)
7) Separate staff rooms for men and women
8) 14 teaching rooms
9) Toilets (specially adapted)
10) Drinking water facility
Hostel (42000 sq ft)
1) 24 dormitories with 8 rooms on each floor
2) Various facilities depending on the number of female students on each floor
3) Drinking water facility on each floor
4) Supervisor’s room on each floor
5) First aid room
Dining room and Hall (55000 sq ft)
1) Management Office
2) Auditorium
3) Stage
4) Dining Hall (Dasaha Bhavan) with a capacity of 1600 students to receive Prasad at a time
5) Roti, Chapati making machine and steam cooking machine facility will be available.
6) Large and separate modern well-organized drinking water system and hand washing place
7) State-of-the-art kitchen facility
8) Eco-friendly (air, lighting system) environment.
9) Japanese Miyawasi model/HTP model water recycling
Gymnasium (built on 6 acres of land.)
The gymnasium has been prepared in an area of six acres.
400m athletic stadium
Sports complex for volleyball, football, Khokho matches has been constructed.
Yoga training
In the Gurukul campus (built on an area of 48 acres.)
Beautiful eco-friendly environment.
About 22000 trees have been planted in the Japanese Miyuki model.
Kalyana is the first college in Karnataka to have this model.
Water recycling model has been implemented in S.T.P. Mari.
A beautiful lake spread over two acres has been built.
Different species of coconut, mahogany, chickpea, jackfruit, and flower saplings have been planted in the campus.
Subject-wise teaching by expert lecturers
Subject-wise teaching by expert lecturers
Green and Digital Library
Subjects taught in the college
Science Department
Physics, Chemistry, Mathematics, Biology
Arts Department
History, Education, Geography, Political Science
ಹೆಚ್ಚಿನ ಮಾಹಿತಿಗಾಗಿ :
ಕಾಲೇಜಿನ ವೆಬ್‌ಸೈಟ್ ತಿತಿತಿ.ssmಣgಚಿvimಚಿಣhಞoಠಿಠಿಚಿಟ.oಡಿg
ಮೊಬೈಲ್ ಸಂಖ್ಯೆ : ೯೯೦೦೨೨೯೬೬೦
Comments are closed.