ವಿಶ್ವ ಕ್ಷಯರೋಗ ದಿನಾಚರಣೆಯ ಜಾಗೃತಿ ಜಾಥಾ ಮೂಲಕ ವಿಶೇಷ ಅರಿವು

Special awareness through World Tuberculosis Day awareness march

Get real time updates directly on you device, subscribe now.

ಕೊಪ್ಪಳ ಮಾರ್ಚ್  ): ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಮಂಗಳವಾರದಂದು ಜಾಗೃತಿ ಜಾಥಾ ಮೂಲಕ ವಿಶೇಷ ಅರಿವು ಮೂಡಿಸಲಾಯಿತು ಮತ್ತು ವೇದಿಕೆ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸಾಧನೆಗೈದ ಸಾಧಕರಿಗೆ ಪಶಸ್ತಿ ಪ್ರಧಾನ ಮಾಡಲಾಯಿತು.
ನಗರದ ಹಳೇ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಲಾದ ಜಿಲ್ಲಾಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆಯ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಎ.ಶಶಿಧರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಜಾಥವು ಹಳೇ ಜಿಲ್ಲಾ ಆಸ್ಪತ್ರೆ ಆವರಣದಿಂದ ಪ್ರಾರಂಭಗೊಂಡು, ನಗರದ ಕೇಂದ್ರೀಯ ಬಸ್ ನಿಲ್ದಾಣ, ಡಾ. ಸಿಂಪಿ ಲಿಂಗಣ್ಣ ರಸ್ತೆ, ದಿವಟರ್ ವೃತ್ತ, ಜವಾಹಾರ ರಸ್ತೆ ಮಾರ್ಗವಾಗಿ ಸಾಹಿತ್ಯ ಭವನದವರೆಗೆ ನಡೆಯಿತು.
*ವೇದಿಕೆ ಕಾರ್ಯಕ್ರಮ:* ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ತಾಲ್ಲೂಕು ಆರೋಗ್ಯಾಧಿಕಾರಿಗಳ‌ ಕಾರ್ಯಾಲಯ ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರೂ ಹಾಗೂ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದ ರಾಯಭಾರಿಗಳಾದ ಗಂಗಾವತಿ ಪ್ರಾಣೇಶ ಅವರು ಭಾಗವಹಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಕ್ಷಯರೋಗವು ಒಂದು ಮಾರಣಾಂತಿಕ ರೋಗವಾಗಿದ್ದು,ಅನೇಕ ಜನರು ಕ್ಷಯರೋಗದಿಂದ ಸಾವನ್ನಪ್ಪುತ್ತಿದ್ದರು. ಆದರೆ, ಈಗ ಕ್ಷಯರೋಗದ ಅರಿವು ಮತ್ತು ಜಾಗೃತಿ ಜನರಲ್ಲಿ ಹೆಚ್ಚಾಗಿ ಮೂಡುತ್ತಿದ್ದು, ಕ್ಷಯರೋಗ ಚಿಕಿತ್ಸೆಯನ್ನು ಪಡೆದಲ್ಲಿ ಸಂಪೂರ್ಣ ಗುಣಮುಖವಾಗಬಹುದಾಗಿದೆ ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳಾದ ಡಾ.ಶಶಿಧರ ಎ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2026ರ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮವನ್ನು  “ಹೌದು, ಭಾರತದ ನೇತೃತ್ವದಲ್ಲಿ, ಜನರ ಶಕ್ತಿಯೊಂದಿಗೆ ನಾವು ಕ್ಷಯರೋಗವನ್ನು ನಿರ್ಮೂಲನೆ ಮಾಡಬಹುದು” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. 2025ನೇ ಸಾಲಿನಲ್ಲಿ ಕ್ಷಯರೋಗಿಗಳ ಪತ್ತೆ ವಿಶೇಷವಾಗಿ ಸರ್ಕಾರಿ ಮತ್ತು ಖಾಸಗಿ ವಲಯದಿಂದ ಕಫದಲ್ಲಿ ದೃಢಪಟ್ಟ ಕ್ಷಯರೋಗಿಗಳನ್ನು ಪತ್ತೆ ಹಚ್ಚುವಲ್ಲಿ ವಿಶೇಷ ಸಾಧನೆ ಮಾಡಿದ್ದು, ಜಿಲ್ಲೆಯಲ್ಲಿರುವ 8 ತ್ವರಿತ ಮತ್ತು ಪ್ರಾಥಮಿಕ ಹಂತದಲ್ಲಿ  ಕ್ಷಯವನ್ನು ಪತ್ತೆ ಹಚ್ಚುವ ಸಿಬಿನಾಟ್ ಯಂತ್ರಗಳು ಹಾಗೂ 16 ಟ್ರೂನಾಟ್ ಯಂತ್ರಗಳ ಕಫ ಪರೀಕ್ಷೆಯ ಜೊತೆಗೆ ಕ್ಷ-ಕಿರಣ ಮುಖಾಂತರ ಪತ್ತೆ ಹಚ್ಚಿದ್ದರಿಂದ 2025ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಲು ಅನುಕೂಲವಾಗಿದೆ. ಇದಕ್ಕೆ ಮುಖ್ಯ ಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ಷಯರೋಗದ ಹರಡುವಿಕೆಯನ್ನು ತಡೆಗಟ್ಟಲು ಹಮ್ಮಿಕೊಂಡಿರುವ ಅನೇಕ ಯೋಜನೆಗಳಾದ ವಿಭಿನ್ನ ಆರೈಕೆ ಮಾದರಿ, ಆಸ್ಪತ್ರೆಗಳಲ್ಲಿ ಒಳರೋಗಿಗಳ ತಪಾಸಣೆ ಕಾರ್ಯಕ್ರಮ, ಟಿ.ಬಿ. ಗುರುವಾರ, ನಿಕ್ಷಯ್ ದಿವಸ, ಕ್ಷಯ ಮುಕ್ತ ಶಾಲೆ ಮತ್ತು  ಕ್ಷಯಮುಕ್ತ ಕಾರ್ಯಸ್ಥಳ ಆಗಿವೆ ಎಂದರು.
ಇದಲ್ಲದೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ತಲಾ ಇಬ್ಬರು ಕ್ಷಯರೋಗಿಗಳನ್ನು ದತ್ತು ಪಡೆದು ಚಿಕಿತ್ಸೆಯನ್ನು ಪೂರೈಸುವವರೆಗೂ ಆರು ತಿಂಗಳ ಕಾಲ 1000 ಮುಖಬೆಲೆಯ ಪೌಷ್ಟಿಕ ಆಹಾರದ ಕಿಟ್‌ಗಳನ್ನು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗುವ ಮೂಲಕ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದಾರೆ. ಇದಕ್ಕಾಗಿ ಈ ವೇದಿಕೆಯ ಮುಖಾಂತರ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಮುಕುಂದ ಸುಮಿ ಸ್ಪೇಷಲ್ ಸ್ಟೀಲ್ಸ್ ಲಿಮಿಟೆಡ್, ಹೊಸ ಕನಕಾಪುರ ಕಾರ್ಖಾನೆಯವರು 10,00,000 ರೂಪಾಯಿಗಳ 1000 ಪೌಷ್ಟಿಕ ಆಹಾರದ ಕಿಟ್‌ಗಳನ್ನು ಕ್ಷಯರೋಗಿಗಳಿಗೆ ನೀಡುವ ಮೂಲಕ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ.ಲಿಂಗರಾಜು ಅವರು ಮಾತನಾಡಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಿದ್ದರೂ ತಮ್ಮ ಹವ್ಯಾಸಗಳಿಗೆ ಕನಿಷ್ಟ ಸಮಯವನ್ನು ನೀಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ. ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ದಿ ಮಂಡಳಿಯ ಅನುದಾನದಲ್ಲಿ 4 ಸಿಬಿನಾಟ್ ಯಂತ್ರಗಳನ್ನು ಜಿಲ್ಲಾ ಆಡಳಿತ ಕೊಡಿಸಿರುವುದರಿಂದ ಕ್ಷಯರೋಗ ಪತ್ತೆಯ ಪ್ರಮಾಣ ಹೆಚ್ಚಾಗಿರುವುದರಿಂದ ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ನಳಿನ್ ಅತುಲ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿದ್ದ ರಾಹುಲ್ ರತ್ನಂ ಪಾಂಡೆಯ ರವರಿಗೆ ಈ ವೇದಿಕೆಯ ಮುಖಾಂತರ ಕೃತಜ್ಞತೆಯನ್ನು ಸಲ್ಲಿಸಿದರು. ಜಿಲ್ಲೆಯಲ್ಲಿ ಕ್ಷೇತ್ರಮಟ್ಟದಿಂದ ಎಲ್ಲಾ ಸಿಬ್ಬಂದಿಗಳು ಕ್ಷಯರೋಗ ನಿರ್ಮೂಲನೆಯಲ್ಲಿ ತೊಡಗುವ ಮೂಲಕ ಕ್ಷಯರೋಗ ಪತ್ತೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದಾಗಿ ತಿಳಿಸಿದರು.
ಮುಕುಂದ ಸುಮಿ ಸ್ಪೇಷಲ್ ಸ್ಟೀಲ್ಸ್ ಲಿಮಿಟೆಡ್, ಹೊಸ ಕನಕಾಪುರ ಕಾರ್ಖಾನೆಯ ಪ್ಲಂಟ್ ಮುಖ್ಯಸ್ಥರು ಓಂ ಪ್ರವಾಲ ಸಿಂಗ್‌ ಅವರು ಮಾತನಾಡುತ್ತಾ ಜಾಗತಿಕ ಮಟ್ಟದಲ್ಲಿ ಭಾರತವು ಟಿಬಿ ಖಾಯಿಲೆಯಲ್ಲಿ ಹೆಚ್ಚಾಗಿ ಆವರಿಸಿದೆ. ಜಾಗತಿಕ ಮಟ್ಟದಲ್ಲಿ 2030ರ ಒಳಗೆ ಕ್ಷಯ ಮುಕ್ತ ಮಾಡಲಾಗುವುದು ಎಂದು ತಿಳಿಸುವ ಮೂಲಕ ಆರೋಗ್ಯ ಇಲಾಖೆ ಮುಖ್ಯಸ್ಥರಿಗೆ ಈ ಅವಕಾಶ ಕಲ್ಪಿಸಿದ್ದಾಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಇದೇ ಕಾರ್ಖಾನೆಯ ಟೆಟ್ ಸುಯ ಹೋರಿ (ಕೋ-ಸಿಇಒ ಜಪಾನ್) ಅವರು ಮಾತನಾಡುತ್ತಾ ಕ್ಷಯರೋಗ ನಿರ್ಮೂಲನೆಯಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತಾ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ಸಹಕಾರ ಮುಂದುವರೆಸುವುದಾಗಿ ತಿಳಿಸಿದರು.
*ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸಾಧಕರಿಗೆ ಪಶಸ್ತಿ ಪ್ರಧಾನ:* ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿಯಲ್ಲಿ ಉತ್ತಮ ಸಾಧನೆ ಮಾಡಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ, ಖಾಸಗಿ ವೈದ್ಯರಿಗೆ, ನಿಕ್ಷಯ್ ಮಿತ್ರರವರಿಗೆ ಮತ್ತು ಇತರಿಗೆ ಪಶಸ್ತಿ ಪ್ರಧಾನ ಮಾಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅನುಷ್ಠಾನ ಅಧಿಕಾರಿ ಡಾ. ರವೀಂದ್ರನಾಥ ಎಂ.ಹೆಚ್., ಜಿಲ್ಲಾ ಆರ್.ಸಿ.ಹೆಚ್. ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪ್ರಕಾಶ ವಿ., ಅಸಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ ಹೆಚ್., ಜಿಲ್ಲಾ ಸರ್ವೇಕ್ಷಣಾ ಮತ್ತು ರೋಗ ವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ. ನಂದಕುಮಾರ, ಜಿಲ್ಲಾ ಯೋಜನಾ ಅಭಿವೃದ್ಧಿ ಅಧಿಕಾರಿ ಡಾ. ಗೋನಾಳು ಕುಮಾರಸ್ವಾಮಿ, ಗಂಗಾವತಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಗೌರಿಶಂಕರ, ಯಲಬುರ್ಗಾ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನೇತ್ರಾವತಿ ಹಿರೇಮಠ, ಗಂಗಾವತಿ ಉ.ವಿ.ಆಸ್ಪತ್ರೆ ಫಿಜಿಷಿಯನ್ ಡಾ. ಸೋಮಶೇಖರ ಕಬ್ಬೇರ, ಮುನಿರಾಬಾದ ಸ.ಆ.ಕೇಂದ್ರದ ವೈದ್ಯಾಧಿಕಾರಿ ಡಾ. ಕೆ.ಹೆಚ್. ತೊಗರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Achievements under the National Tuberculosis Eradication Program were felicitated: Gangavathi Pranesh participated*

Koppal  : As part of the World Tuberculosis Day celebration, a special awareness march was held at the Koppal district headquarters on Tuesday and the achievers who achieved success under the National Tuberculosis Eradication Program were felicitated at a stage program.
The district-level World Tuberculosis Day awareness march organized at the city’s old district hospital premises was flagged off by District Tuberculosis Eradication Officer Dr. A. Shashidhara. The march started from the old district hospital premises and proceeded through the city’s central bus stand, Dr. Simpi Linganna Road, Diwater Circle, Jawahar Road and Sahitya Bhavan.
*Stage Program:* Koppal District Administration, Zilla Panchayat, District Health and Family Welfare Department, District Tuberculosis Eradication Center, Taluk Health Officer’s Office and various departments and organizations organized the district-level World Tuberculosis Day program at the city’s Sahitya Bhavan in collaboration with comedian and Tuberculosis Eradication Program Ambassador Gangavathi Pranesh and spoke, saying that in the past, tuberculosis was a fatal disease and many people used to die of tuberculosis. However, now the awareness and awareness of tuberculosis is increasing among the people and if tuberculosis is treated, it can be completely cured.
District Tuberculosis Eradication Officers Dr. Shashidhar A. He said in his introductory speech that the 2026 World Tuberculosis Day program is being celebrated with the slogan “Yes, under the leadership of India, with the power of the people, we can eliminate tuberculosis”. In the year 2025, there was a special achievement in detecting tuberculosis patients, especially in detecting sputum-positive tuberculosis patients by the government and private sectors. The sputum test of 8 rapid and primary tuberculosis detection machines and 16 TrueNau machines in the district along with X-ray detection has facilitated good achievement in the year 2025. The main reason for this is the many schemes launched by the Health and Family Welfare Department to prevent the spread of tuberculosis such as differentiated care model, inpatient screening program in hospitals, T.B. Thursday, Nikshay Divas, tuberculosis-free schools and tuberculosis-free workplaces.
Apart from this, the District Collectors, Zilla Panchayat Chief Executive Officers and District Superintendents of Police have cooperated with the National Tuberculosis Eradication Programme by adopting two tuberculosis patients each and providing them with nutritious food kits worth Rs. 1000 for six months till the completion of treatment, thereby setting an example for everyone. For this, I would like to thank them through this platform.
Mukunda Sumi Special Steels Limited, New Kanakapura Factory, said that they have made a significant contribution to the National Tuberculosis Eradication Programme by providing 1000 nutritious food kits worth Rs. 10,00,000 to tuberculosis patients.
District Health and Family Welfare Officer Dr. T. Lingaraju, who presided over the programme, said that although the officers and staff of the Health Department are performing their duties under pressure, they can reduce their stress by giving at least some time to their hobbies. He expressed his gratitude to the former District Magistrate Nalin Atul and Chief Executive Officer Rahul Ratnam Pandey for the increase in the number of tuberculosis cases detected due to the district administration providing 4 CBINAT machines under the Kalyana Karnataka Rural Development Board grant. He said that the state has secured first place in tuberculosis detection by involving all the staff from the field level in the district in the eradication of tuberculosis.
Om Prawal Singh, Plant Head of Mukunda Sumi Special Steels Limited, New Kanakapura Factory, said that India is largely affected by TB disease at the global level. He expressed his gratitude to the Health Department Chief for providing this opportunity by stating that the world will be tuberculosis-free by 2030.
Speaking at the event, Tet Suya Hori (Co-CEO Japan) of the same factory thanked us for our involvement in the eradication of tuberculosis and said that our organization will continue its cooperation in the future.
*Favourites awarded under the National Tuberculosis Eradication Program:* On this occasion, the health department staff, private doctors, Nikshay friends and others who have performed well under the National Tuberculosis Eradication Program were awarded with prizes.
The program was attended by the District Implementation Officer of the Health and Family Welfare Department, Dr. Ravindranath M.H., District RCH and Family Welfare Officer, Dr. Prakash V., Non-Communicable Diseases Controller, Dr. Prakash H., District Surveillance and Disease Carrier Diseases Controller, Dr. Nandakumar, District Planning Development Officer, Dr. Gonalu Kumaraswamy, Gangavathi Taluk Health Officer, Dr. Gowrishankar, Yelaburga Taluk Health Officer Dr. Netravathi Hiremath, Gangavathi U.V. Hospital Physician Dr. Somashekar Kabbera, Medical Officer of Munirabad SA Center Dr. K.H. Togari and others were present.

 

Special awareness through World Tuberculosis Day awareness march

Get real time updates directly on you device, subscribe now.

Comments are closed.

error: Content is protected !!