ಕೇಂದ್ರದ ಒತ್ತಾಯದ ಹಿಂದಿ ಧೋರಣೆ: ಕರವೇಯಿಂದ ಸರ್ಕಾರದ ಭೂತದಹನ -ಬಂಧಿತ ಕಾರ್ಯಕರ್ತರ ಬಿಡುಗಡೆಗೆ ಆಗ್ರಹ

ಕೊಪ್ಪಳ,ಸೆ.೨೭: ಕೇಂದ್ರ ಸರ್ಕಾರದ ಹಿಂದಿ ಸಭೆಯನ್ನು ವಿರೋಧಿಸಿ ಹೋರಾಟ ನಡೆಸಿದ ೪೧ ಜನ ಕರವೇ ಕಾರ್ಯಕರ್ತರನ್ನು ಬಂಧಿಸಿರುವ ಕ್ರಮ ಖಂಡನಾರ್ಹ, ಕೇಂದ್ರ ಸರ್ಕಾರ ಬಾಯಲ್ಲಿ ಬೆಣ್ಣೆ, ಕೈಯಲ್ಲಿ ದೊಣ್ಣೆ ವರೆಸೆ ನಡೆಸುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶನಿವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ಶ್ರೀ ಕನಕದಾಸ ವೃತ್ತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಭೂತ ಧಹನ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದರು.
ದೇಶವು ಒಕ್ಕೂಟ ರಾಷ್ಟçವಾಗಿದ್ದು, ಬಹು ಸಂಸ್ಕೃತಿ, ಬಹು ಬಾಷೆ, ಬಹು ಜನರ ಆಗರವಾಗಿದ್ದು, ಆದರೆ ಒಂದೆ ಭಾಷೆಯನ್ನು ವೈಭವೀಕರಿಸುವ ಬಲವಂತವಾಗಿ ಹೇರುವವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಭಾಷೆಯೇ ಮೊದಲು ಹಿಂದಿ ದಿವಸ್ ಆಚರಣೆ ಅಸಮರ್ಪಕ ಮತ್ತು ಅನಗತ್ಯವಾಗಿದೆ.
ರಾಜಭಾಷಾ ಸಂಸತ್ ಸಮಿತಿಯು ಎರಡನೇ ಉಪ ಸಮಿತಿಯ ಸಭೆಯನ್ನು ಕನ್ನಡಿಗರ ಮತ್ತು ಕನ್ನಡದ ವಿನಾಶಕ್ಕೆ ನಡೆಸುತ್ತಿದ್ದ ಉನ್ನಾರದ ಭಾಗವಾಗಿದ್ದು, ಭಾರತದ ಭಾಷಾನೀತಿಯನ್ನು ಸಂವಿಧಾನದ ೧೭ನೇ ಭಾಗದ ೩೪೩-೩೫೧ನೇ ವಿಧಿಗಳಲ್ಲಿ ಬರೆಯಲಾಗಿದೆ. ಒಕ್ಕೂಟ ವ್ಯವಸ್ಥೆಯ ೨೨ ಭಾಷೆಗಳಿಗೂ ಸಮಾನ ಸ್ಥಾನಮಾನಗಳಿದ್ದು, ದಕ್ಷಿಣ ಭಾರತವೂ ಸೇರಿದಂತೆ ದೇಶಾದ್ಯಂತ ಹಿಂದಿಯನ್ನು ಉತ್ತೇಜಿಸಲು ರಾಜಭಾಷಾ ಸಂಸತ್ ಸಮಿತಿಯು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಸಲಹೆಯನ್ನು ನೀಡಿದ್ದು, ಅವು ಕನ್ನಡವೂ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಗಳಿಗೆ ಮಾರಕವಾಗಿದೆ. ಇದು ಬಾಯಿಯಲ್ಲಿ ಹಿಂದಿ ಹೇರಿಕೆ ಮಾಡುವುದಿಲ್ಲವೆಂಬ ಸರ್ಕಾರದ ವಾದಕ್ಕೆ ಬಗಲಲ್ಲಿರುವ ದೊಣ್ಣೆಯಾಗಿದೆ. ಇದುವರೆಗೂ ಅಂತಹ ಬಂಬತ್ತು ವರದಿಗಳ ಮಾಹಿತಿಯು ರಾಜಭಾಷಾ ಜಾಲತಾಣಗಳಲ್ಲಿ ಲಭ್ಯವಿದೆ. ಕೇಂದ್ರ ಸರ್ಕಾರದ ಈ ಧೋರಣೆಯ ಹಿಂದಿ ಸಭೆಯನ್ನು ವಿರೋಧಿಸಿ ಹೋರಾಟ ನಡೆಸಿದ ಬೆಂಗಳೂರಿನ ೪೧ ಜನ ಕರವೇ ಕಾರ್ಯಕರ್ತರನ್ನು ಬಂಧಿಸಿರುವ ಪೋಲಿಸರ ಕ್ರಮವನ್ನು ಖಂಡಿಸಿ ಕರವೇ ಕೊಪ್ಪಳ ಜಿಲ್ಲಾ ಘಟಕದಿಂದ ಶನಿವಾರದಂದು ಶ್ರೀ ಕನಕದಾಸ ವೃತ್ತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಭೂತ ಧಹನ ಮಾಡಿ ಬೃಹತ್ ಧರಣಿ ನಡೆಸಿ ಸರ್ಕಾರವು ಕೂಡಲೇ ಬಂಧಿತ ಕರವೇ ಕಾರ್ಯಕರ್ತರನ್ನು ಬೇಷರತ್ತಾಗಿ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಭುವನೇಶ್ವರಿ ಮೊಟಗಿ, ಜಿಲ್ಲಾ ಉಪಾಧ್ಯಕ್ಷ ಸುರೇಶ ಪಾಟೀಲ, ಜಿಲ್ಲಾ ಸಂಚಾಲಕ ಸಂಗಮೇಶ ಗುರಿಕಾರ, ಕುಷ್ಟಗಿ ಅಧ್ಯಕ್ಷ ಪ್ರಕಾಶ ಮನ್ನೆರಾಳ, ಕುಕನೂರು ಅಧ್ಯಕ್ಷ ರಮೇಶ ಚಂಡೂರು, ಗೌರವಾಧ್ಯಕ್ಷ ಆದಪ್ಪ ಉಳಾಗಡ್ಡಿ, ನಗರಾಧ್ಯಕ್ಷ ಫ್ರಪುಲ ಪಾಟೀಲ, ಭಾಗ್ಯನಗರ ಅಧ್ಯಕ್ಷ ವಿರೇಶ ಮುಂಡಾಸದ, ಮುಖಂಡರಾದ ಪ್ರಕಾಶ ಜೋಷಿ, ವೆಂಕಟೇಶ ತಟ್ಟಿ, ಹನುಮಂತಪ್ಪ ಜೀರಾಳ, ಸಂಜೀವಸಿAಗ್ ಹಜಾರೆ, ದೇವೆಂದ್ರಪ್ಪ, ಚನ್ನಪ್ಪ ನಾಲಗಾರ, ಮುದ್ದಪ್ಪ ಬಹದ್ದೂರಬಂಡಿ, ಮಹಾಂತೇಶ ಯಲ್ಲಾಪೂರ, ಹನುಮಂತ ಚಂಡೂರು, ಮಾಸಪ್ಪ ಮ್ಯಾಗಳಮನಿ, ಶಂಕ್ರಮ್ಮ ಗೊರೆಬಾಳ, ಗಂಗಮ್ಮ ಕುಂಬಾರ ಹಾಗೂ ಅನೇಕರು ಭಾಗವಹಿಸಿದ್ದರು.
Comments are closed.