ಗರ್ಭಕಂಠ ಕ್ಯಾನ್ಸರ್ ತಡೆಗೆ 500 ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ HVP ಲಸಿಕೆ

Get real time updates directly on you device, subscribe now.

ಮಾಜಿ ಸಚಿವರಾದ ದಿವಂಗತ ಸಿ. ಬೈರೇಗೌಡ ಅವರ ಸ್ಮರಣಾರ್ಥ ಕಾರ್ಯಕ್ರಮ

ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ ಜಾಗತಿಕವಾಗಿ 6 ಲಕ್ಷ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಸೋಂಕು ಇರುವ ಹೊಸಪ್ರಕರಣಗಳು ವರದಿಯಾಗಿವೆ. ಮತ್ತು ಅವುಗಳಲ್ಲಿ ಅರ್ಧದಷ್ಟು ಮಹಿಳೆಯರು ಮೃತ್ಯುವಿಗೆ ಹತ್ತಿರವಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ಸಮಸ್ಯೆಯನ್ನು ಪರಿಹರಿಸಲು, ಬಹುಮುಖಿ ವಿಧಾನದ ಅಗತ್ಯವಿದ್ದು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ HPV ಲಸಿಕೆಗಳನ್ನೂ ನೀಡುವುದು ಕಡ್ಡಾಯ. ಆದರೆ ಮಾರುಕಟ್ಟೆಯಲ್ಲಿ ಈ ಒಂದು ಲಸಿಕೆ 10,000 ರೂಪಾಯಿಗೂ ಅಧಿಕ. ಹೀಗಾಗಿ ಅನೇಕ ಮಹಿಳೆಯರು ದುಬಾರಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಈ ದುಸ್ಸಾಹಸ ಮಹಿಳೆಯರು ಗರ್ಭಕಂಠ ಕ್ಯಾನ್ಸರ್ ನಿಂದಾಗಿ ಸಾವಿಗೆ ಕಾರಣವಾಗಬಹುದು.

ಹೀಗಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಹಾಗೂ ಅವರಿಗೆ ಉಚಿತ ಲಸಿಕೆ ನೀಡುವ ಉದ್ದೇಶದಿಂದ ಮಾಜಿ ಸಚಿವರಾದ ಸಿ. ಬೈರೇಗೌಡ ಅವರ ಕುಟುಂಬ ಹಾಗೂ ಬೆಳ್ಳೂರು ಕೃಷ್ಣಮಾಚಾರ್ & ಶೇಷಮ್ಮ ಸ್ಮಾರಕ ನಿಧಿ ಟ್ರಸ್ಟ್ ವತಿಯಿಂದ ವೇಮಗಲ್ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ HPV ಲಸಿಕೆ ನೀಡಲಾಯಿತು.

Get real time updates directly on you device, subscribe now.

Comments are closed.

error: Content is protected !!