ಸುಖ ಸಂಸಾರಕ್ಕೆ ಒಂದು ಬೇಕು ಎರಡು ಸಾಕು


ವಿಶ್ವ ಜನಸಂಖ್ಯಾ ದಿನವನ್ನು ಪ್ರತಿ ವರ್ಷ ಜುಲೈ 11ರಂದು ಆಚರಿಸುತ್ತಾ ಬರಲಾಗುತ್ತಿದೆ. ಇದರ ಉದ್ದೇಶ ಜಾಗತಿಕಮಟ್ಟದಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಕುಟುಂಬ ಯೋಜನೆ ಪ್ರಾಮುಖ್ಯತೆ, ಲಿಂಗ ಸಮಾನತೆ, ಬಡತನ, ತಾಯಿ ಆರೋಗ್ಯ ಮತ್ತು ಮಾನವ ಹಕ್ಕುಗಳಂತಹ ವಿವಿಧ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜೊತೆಗೆ ವ್ಯಕ್ತಿ ಮತ್ತು ಕುಟುಂಬಗಳಿಗೆ ತಮ್ಮ ಸಂತಾನೋತ್ಪತ್ತಿ ಆಯ್ಕೆಗಳ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡುತ್ತದೆ.
ವಿಶ್ವದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವ ಇಂದಿನ ದಿನಮಾನಗಳಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗುವ ದುಷ್ಪರಿಣಾಮಗಳ ಕುರಿತು ನಾವು ಎಚ್ಚೆತ್ತುಕೊಳ್ಳಬೇಕಿದೆ. ಚಿಕ್ಕ ಕುಟುಂಬ ಚೊಕ್ಕ ಕುಟುಂಬ. ಮನೆಗೊಂದು ಮಗು ಊರಿಗೊಂದು ವನ. ಸುಖ ಸಂಸಾರಕ್ಕೆ ಒಂದು ಮಗು ಬೇಕು ಎರಡು ಸಾಕು ಎನ್ನುವ ಉಕ್ತಿಯನ್ನು ನಾವೆಲ್ಲರೂ ಪಾಲಿಸಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಹಲವಾರು ಸಮಸ್ಯೆಗಳನ್ನು ತಡೆಗಟ್ಟಲು ಕುಟುಂಬ ಯೋಜನೆ ಮತ್ತು ಮಾನವ ಹಕ್ಕುಗಳು ಹಾಗೂ ತಾಯಂದಿರ ಆರೋಗ್ಯದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಪ್ರಸ್ತುತ ವಿಶ್ವದ ಜನಸಂಖ್ಯೆ 8.23 ಬಿಲಿಯನ್‌ನಷ್ಟಿದ್ದು, ಭಾರತದ ಜನಸಂಖ್ಯೆ 146 ಕೋಟಿಯಾಗಿದೆ. ಭಾರತವು ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದೇಶವಾಗಿದ್ದು, ಜನಸಂಖ್ಯೆ ಹೆಚ್ಚಳದಿಂದ ನಿರುದ್ಯೋಗ, ಬಡತನ, ಆಹಾರ, ವಸತಿ ಸಮಸ್ಯೆಗಳು ಹಾಗೂ ದೇಶದ ಆರ್ಥಿಕತೆಯ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ.
2025ರ ವಿಶ್ವ ಜನಸಂಖ್ಯಾ ದಿನದ ಘೋಷವಾಕ್ಯ “ಮೊದಲ ಗರ್ಭಧಾರಣೆಗೆ ಹಾಗೂ ನಂತರದ ಯೋಜಿತ ಗರ್ಭದಾರಣೆಗೆ ಆರೋಗ್ಯಕರ ದೇಹ, ಮನಸ್ಸು ಮತ್ತು ವಯಸ್ಸು ಅತ್ಯವಶ್ಯಕ” ಎಂಬುದಾಗಿದೆ.
ತಾತ್ಕಾಲಿಕ ವಿಧಾನಗಳಾದ ಅನಪೇಕ್ಷಿತ ಗರ್ಭಧಾರಣೆ ಮತ್ತು ಲೈಂಗಿಕ ಸೋಂಕುಗಳು ಇವೆರಡನ್ನೂ ತಡೆಯಲು ಕಾಂಡೋಮ್‌ಗಳ(ನಿರೋಧ್) ಉಪಯೋಗ, ಸಂಯೋಜಿತ ಗರ್ಭನಿರೋಧಕ ಮಾತ್ರೆಗಳು(ಮಾಲಾ-ಎನ್) ಹಾರ್ಮೋನ್ ಸಹಿತ ಮಾತ್ರೆಗಳು, ಸೆಂಟ್ ಕ್ರೋಮನ್(ಛಾಯಾ) ಹಾರ್ಮೋನ್ ರಹಿತ ಮಾತ್ರೆಗಳು ಎದೆ ಹಾಲುಣಿಸುವ ಮತ್ತು ಎದೆ ಹಾಲುಣಿಸದೆ ಇರುವ ಮಹಿಳೆಯರಿಗಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನ ಇದಾಗಿದ್ದು ಯಾವುದೇ ವಯಸ್ಸಿನ ಮಹಿಳೆಯು ಆಕೆಗೆ ಮಕ್ಕಳಿದ್ದರೂ ಅಥವಾ ಇಲ್ಲದಿದ್ದರೂ ಇದನ್ನು ಬಳಸಬಹುದಾಗಿದ್ದು, ಮೊದಲ ಡೋಸ್‌ಗಾಗಿ ಆರೋಗ್ಯ ಸಹಾಯಕಿ ಅಥವಾ ವೈದ್ಯರನ್ನು ಸಂಪರ್ಕಿಸಿ ತೆಗೆದುಕೊಳ್ಳಬೇಕು. ತುರ್ತು ಗರ್ಭನಿರೋಧಕ ಮಾತ್ರೆಗಳು(ಇಜಿ ಪಿಲ್ಸ್) ಅಸುರಕ್ಷಿತ ಲೈಂಗಿಕ ಸಂಭೋಗ ಅಥವಾ ಇತರೆ ಗರ್ಭನಿರೋಧಕಗಳ ಬಳಕೆಯ ವೈಫಲ್ಯಗಳಾದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆಯ 72 ಗಂಟೆಗಳ ಒಳಗೆ ಅಥವಾ ಶೀಘ್ರವೇ ತೆಗೆದುಕೊಂಡಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಮತ್ತು ಗರ್ಭಪಾತಕ್ಕೆ ಕಾರಣವಾಗುವುದಿಲ್ಲ.

ಲೇಖನ :- ಡಾ. ಸುರೇಶ ಜಿ.
ಸಹಾಯಕ ನಿರ್ದೇಶಕರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ.
Comments are closed.