ಚಂದ್ರಯಾನ-೩ ಯಶಸ್ವೀಗೆ ಪ್ರಾರ್ಥಿಸಿದ ಶಾಲಾ ವಿದ್ಯಾರ್ಥಿಗಳು
ಕೊಪ್ಪಳ : ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿರುವ ಚಂದ್ರಯಾನ-೩ ಯಶಸ್ವೀಯಾಗಲಿ ಎಂದು ನಗರದ ಶ್ರೀಶಿವಮೂರ್ತಯ್ಯ ಮಹಾಂತಯ್ಯನಮಠ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಸಂಸ್ಥೆಯ ಅಧ್ಯಕ್ಷ ವಿರೇಶ ಮಹಾಂಯ್ಯನಮಠ ಮಾತನಾಡಿ ಭಾರತದ ಹೆಮ್ಮೆ ಸಂಸ್ಥೆ ಇಸ್ರೋ ಪ್ರತಿಭಾವಂತ ವಿಜ್ಞಾನಿಗಳು ಕೈಗೊಂಡ ಚಂದ್ರಯಾನ-೩ ಯಶಸ್ವೀಗೊಂಡು ಭಾರತ ವಿಶ್ವದಲ್ಲಿ ಮಹತ್ವದ ಸ್ಥಾನ ಗಳಿಸಲಿ ಎಂಬುದು ಎಲ್ಲಾರ ಆಶಯ ಚಂದ್ರಯಾನ-೩ ಯಶಸ್ವೀಗೆ ಶುಭಾವಾಗಲಿ ಎಂದರು.
ನಂತರ ಸಮಾಜ ಸೇವಕರು ಹಾಗೂ ಹಿರಿಯ ಮುಖಂಡರಾದ ದೊಡ್ಡನಗೌಡ ಓಜಿನಹಳ್ಳಿ ಮಾತನಾಡಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿರುವ ಚಂದ್ರಯಾನ-೩ ವಿಕ್ರಮ್ ನೌಕೆಯು ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಲಿ ಎಂದರು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಚಂದ್ರಯಾನ-೩ ಯಶಸ್ವೀಯಾಗಲಿ, ಬೋಲೋ ಭಾರತ ಮಾತಾ ಕೀ ಜೈ, ಜೈ ಜವಾನ್ ಜೈ ಕಿಸಾನ್ ಘೋಷಣೆ ಹಾಕಿ ಭಗವಂತನಲ್ಲಿ ಪ್ರಾರ್ಥನೆ ಮಾಡಿದರು.
ನಂತರ ಪೂರ್ಣಿಮ ದೊಡ್ಡನಗೌಡ ಓಜಿನಹಳ್ಳಿ, ಸಂಕೇತಗೌಡ ಓಜಿನಹಳ್ಳಿ ಅವರು ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕೈಗೊಂಡಿರುವ ಚಂದ್ರಯಾನ-೩ ಯಶಸ್ವೀಯಾಗಲಿ ಎಂದು ಶುಭಾ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಭಾರತಿ ಎಂ.ಎಸ್.ಮಹಾಂತಯ್ಯನಮಠ, ಶಾಲೆಯ ಮುಖ್ಯ ಶಿಕ್ಷಕರಾದ ಮಹೇಶ ಕೆ.ಎಂ. ಪವಿತ್ರ ಮಡಿವಾಳರ, ರೇಣುಕಾ ಹೂಗಾರ, ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Comments are closed.