ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಿರ್ದೇಶಕರ ಭೇಟಿ – ಕಾಲೇಜಿನ ಶಿಸ್ತು, ಸಾಧನೆಗೆ ನಿರ್ದೇಶಕರ ಪ್ರಶಂಸೆ



ಕೊಪ್ಪಳ: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೋಮವಾರ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾದ ಪ್ರೊ.ಶೋಭಾ.ಜಿ. ಭೇಟಿ ನೀಡಿ, ಗುಣಮಟ್ಟದ ಬೋಧನೆಯ ದಾಖಲಾತಿಗಳನ್ನು ಪರಿಶೀಲಿಸಿ ಕಾಲೇಜಿನ ಶಿಸ್ತು, ಸಾಧನೆಯನ್ನು ಪ್ರಶಂಸಿಸಿದರು.
ಕಾಲೇಜಿನ ಕಾಯಂ ಬೋಧಕರ, ಅತಿಥಿ ಉಪನ್ಯಾಸಕರ ಹಾಗೂ ಬೋಧಕೇತರ ಸಿಬ್ಬಂದಿ ಜೊತೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿದರು. ಸಮಸ್ಯೆ ನಿವಾರಣೋಪಾಯಗಳನ್ನು ಚರ್ಚಿಸಿ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸುವ ಭರವಸೆ ನೀಡಿದರು.
ಕಾಲೇಜಿನ ಪ್ರಯೋಗಾಲಯ, ತರಗತಿ ಕೋಣೆ, ಜಿಮ್, ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆ, ವಿವಿಧ ವಿಭಾಗಗಳ ವಿದ್ಯಾರ್ಥಿಗಳ ಸಾಧನೆಯ ಅಂಶಗಳು, ಮತ್ತಿತರ ವ್ಯವಸ್ಥೆಗಳನ್ನು ಪರಿಶೀಲಿಸಿ ಹರ್ಷ ವ್ಯಕ್ತಪಡಿಸಿದರು.
ಈ ವೇಳೆ ಪ್ರಾಂಶುಪಾಲ ಡಾ.ಡಿ.ಎಚ್.ನಾಯಕ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿ ಇದ್ದರು.
Comments are closed.