ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೋಬಳಿ ಮಟ್ಟದ ಜನ ಸಂಪರ್ಕ ಸಭೆ

Get real time updates directly on you device, subscribe now.

ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇರ್ಕಲ್ಗಡದ ಶಾಸಕರ ಕಾರ್ಯಾಲದಲ್ಲಿ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಹೋಬಳಿ ಮಟ್ಟದ ಜನ ಸಂಪರ್ಕ ಸಭೆ ನಡೆಸಿ ಜನರಿಂದ ಅಹವಾಲು ಸ್ವೀಕರಿಸಿದರು.

ಸಭೆಯಲ್ಲಿ ಹೋಬಳಿಯ ಗ್ರಾಮವಾರು ಜನರ ಕುಂದುಕೊರತೆ ಆಲಿಸಿ, ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದರು. ಜನರಿಂದ ಒಟ್ಟು ನೂರಕ್ಕೂ ಅಧಿಕ ಅಹವಾಲು ಸ್ವೀಕರಿಸಿ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸದೇ ಜನರ ಕಷ್ಟಗಳಿಗೆ ಸ್ಪಂದಿಸಿ ಶೀಘ್ರ ಅರ್ಜಿಗಳ ವಿಲೇವಾರಿ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕರಿಯಣ್ಣ ಸಂಗಟಿ, ಇರ್ಕಲ್ಗಡ ಗ್ರಾ.ಪಂ ಅಧ್ಯಕ್ಷೆ ಶಿವಮ್ಮ ಶೇಖರಪ್ಪ ಲಮಾಣಿ, ಅರಸಿನಕೆರೆ ಗ್ರಾ.ಪಂ ಅಧ್ಯಕ್ಷ ಬಾಳಪ್ಪ, ತಾ.ಪಂ ಮಾಜಿ ಸದಸ್ಯ ಗಂಗಾಧರ ಸ್ವಾಮಿ, ಮುಖಂಡರಾದ ಹಿರೇಮಠ್, ಮನೋಹರ್ ಗೌಡ ಹೇರೂರು, ಸಂಗಮೇಶ್ ಬಾದವಾಡಗಿ, ಚಂದ್ರು ಹೇರೂರು,ಯಮನೂರು ಚೌಡ್ಕಿ, ದುರ್ಗಪ್ಪ ದಳಪತಿ, ಬಸವಕುಮಾರ ಪಟ್ಟಣಶಟ್ಟಿ, ಮಂಜುನಾಥ ಗೊಂದಿ, ದ್ಯಾಮಣ್ಣ ಪೂಜರ್, ರಾಮಣ್ಣ ನಾಯಕ್, ಹನುಮಂತ ಗೋಸಲದೊಡ್ಡಿ , ಮಲ್ಲಿಕಾರ್ಜುನ ಗೌಡ ಗಂಗನಾಳ್, ಗವಿಸಿದ್ದಯ್ಯ ಚಳ್ಳಾರಿ, ಶಿವು ಗಂಜಿಹಾಳ್, ಬಸವರಾಜ್ ಹಿರೇಮಠ್, ಮರಿಯಪ್ಪ, ನಾಗರಾಜ್ ಕಟ್ಟಿಮನಿ, ರಮೇಶ್ ಬುಡಶೆಟ್ನಾಳ , ರಮೇಶ್, ಜಗದೀಶ್ ಹಾಗೂ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!