ಉತ್ತರ ಕರ್ನಾಟಕ ಶಾಮಿಯಾನ್ ಸಪ್ಲೇಯರ್ಸ್ ೨ನೇ ಶೃಂಗಾರ ಮಹಾ ಅಧಿವೇಶನ

Get real time updates directly on you device, subscribe now.

ಗಂಗಾವತಿ: ತಾಲೂಕಿನ ಉತ್ತರ ಕರ್ನಾಟಕ ಶಾಮಿಯನ್ ಸಪ್ಲಾಯರ್ಸ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇ?ನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಹೊಸಪೇಟೆ ವಿಜಯನಗರ ಜಿಲ್ಲೆ, ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‌ಫೇರ್ ಆರ್ಗನೈಜೇಶನ್ ನವದೆಹಲಿ ಹಾಗೂ ಶಾಮಿಯಾನ ಸಪ್ಲಾಯರ್ಸ್ ಅಸೋಸಿಯೇ?ನ್ ಹುಬ್ಬಳ್ಳಿ ಧಾರವಾಡ ಜಿಲ್ಲೆ ಇವರುಗಳ ನೇತೃತ್ವದಲ್ಲಿ ಇದೇ ದಿನಾಂಕ ೫ನೇ, ೬ನೇ ಹಾಗೂ ೭ನೇ ಆಗಸ್ಟ್-೨೦೨೩ ಗಳಂದು ೩ ದಿನಗಳ ಕಾಲ ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ್ ಗಾರ್ಡನ್‌ನಲ್ಲಿ ಶೃಂಗಾರ ೨ನೇ ಮಹಾ ಅಧಿವೇಶನಕ್ಕೆ ಗಂಗಾವತಿ ತಾಲೂಕಿನ ಶಾಮಿಯಾನ ಡೆಕೋರೇಟರ್ ಸಂಘದಿಂದ ೪೦ಕ್ಕೂ ಅಧಿಕ ಮಾಲೀಕರು ಭಾಗವಹಿಸುತ್ತಾರೆ ಎಂದು ಸಂಘದ ಅಧ್ಯಕ್ಷ ಗುರುರಾಜ ಚಳ್ಳಾರಿ ಹೇಳಿದರು.
ಬುಧವಾರದಂದು ತಮ್ಮ ಕಾರ್ಯಾಲಯದಲ್ಲಿ ಉತ್ತರ ಕರ್ನಾಟಕ ಉಪಾಧ್ಯಕ್ಷರಾದ ಚಂದ್ರಶೇಖರ್ ಶ್ರೇಷ್ಠಿ ಹಣವಾಳ ಅಮಂತ್ರಣ ಪತ್ರಿಕೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿ, ಗಂಗಾವತಿ ತಾಲೂಕಿನಲ್ಲಿ ಸುಮಾರು ೬೦ಕ್ಕೂ ಅಧಿಕ ಶಾಮಿಯಾನ ಸಪ್ಲಾಯರ್‍ಸ್, ಲೈಟಿಂಗ್, ಧ್ವನಿವರ್ಧಕ ಸೇರಿದಂತೆ ಡೆಕೋರೇ?ನ್ ಹೊಂದಿದ್ದ ಸಂಘಟನೆಯನ್ನು ರಚಿಸಿಕೊಳ್ಳಲಾಗಿದೆ. ಸಂಘಟನೆ ಸಮಸ್ಯೆಗಳು, ಪರಿಹಾರಗಳು ಸೇರಿದಂತೆ ಡೆಕೋರೇ?ನ್‌ಗೆ ಅಲಂಕಾರಕ ವಸ್ತುಗಳನ್ನು ಖರೀದಿಸುವ ಉದ್ದೇಶದಿಂದ ೨ನೇ ಮಹಾ ಅಧಿವೇಶನದಲ್ಲಿ ಶಾಮಿಯಾನ ಮಳಿಗೆಗಳ ಬೃಹತ್ ವಸ್ತುಪ್ರದರ್ಶನ, ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳಿಗಾಗಿ ಮನವಿ ಪತ್ರ ಸಲ್ಲಿಕೆ ಸೇರಿದಂತೆ ಇವುಗಳೊಂದಿಗೆ ಕಲೆಯ ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಗೀತ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಶೃಂಗಾರ ೨ನೇ ಮಹಾ ಅಧಿವೇಶನದ ಸಮಾರಂಭವನ್ನು ದಿನಾಂಕ ೫ನೇ ಆಗಸ್ಟ್ ಶನಿವಾರ ಬೆಳಗ್ಗೆ ೧೦ ಗಂಟೆಗೆ ಧ್ವಜಾರೋಹಣ ಉದ್ಘಾಟನೆಯನ್ನು ನವದೆಹಲಿಯ ವೈಸ್‌ಚೇರ್ಮನ್, ಹುಬ್ಬಳ್ಳಿಯ ಜಿ. ಪೂರ್ಣಚಂದ್ರರಾವ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪ್ರಾಂತ ಕಾರ್ಯಕಾರಿ ಸದಸ್ಯ ಕರ್ನಾಟಕ ಉತ್ತರ ಧಾರವಾಡದ ಶ್ರೀಧರ್ ನಾಡಿಗೆರ, ವಸ್ತುಪ್ರದರ್ಶನ ಮಳಿಗೆಗಳ ಉದ್ಘಾಟನೆ ಸಮಾರಂಭ ಜರುಗಲಿದ್ದು, ಸಾನಿಧ್ಯವನ್ನು ಹುಬ್ಬಳ್ಳಿಯ ಬಸವಲಿಂಗ ಮಹಾಸ್ವಾಮಿಗಳು ರುದ್ರಾಕ್ಷಿಮಠ ವಹಿಸುವರು. ಅಧ್ಯಕ್ಷತೆಯನ್ನು ಗಂಗಾಧರ ದುಬೆ ಶಾಮಿಯಾನ್ ಸಪ್ಲಾಯರ್ಸ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ತರ್ ಸಿಂಗ್, ರಾಜೇಗೌಡ, ವೆಂಕಟ ಪ್ರದೀಪ್, ಎಂ.ಪಿ ಅಯೂಬ್ ಪಾ? ಸೇರಿದಂತೆ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.
ಸಂಜೆ ೪ ಗಂಟೆಗೆ ಮೊದಲನೇ ದಿನದ ೨ನೇ ಮಹಾ ಅಧಿವೇಶನವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟಿಸಲಿದ್ದು, ದಿವ್ಯಸಾನಿಧ್ಯವನ್ನು ಡಾ. ಗುರು ಸಿದ್ದರಾಜ ಯೋಗೇಂದ್ರ ಮಹಾಸ್ವಾಮಿಗಳು ಭಾಗವಹಿಸುವರು. ದಕ್ಷತೆಯನ್ನು ಉತ್ತರ ಕರ್ನಾಟಕದ ಕೆ. ನರಸಿಂಹಮೂರ್ತಿ ಅಪ್ಪಣ್ಣ ಸೇರಿದಂತೆ ವಿಧಾನಪರಿ?ತ್ ಸದಸ್ಯರು, ಮಹಾಪೌರರು ಇತರರು ಭಾಗವಹಿಸುವರು.
ನಂತರ ಮಾತನಾಡಿದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾದ ಗುರುರಾಜ್ ಚರ್ಚೆನಗುಡ್ಡ ಮಾತನಾಡಿ ಮೂರು ದಿನದ ಈ ಅಧಿವೇಶನ ಇಡೀ ರಾಜ್ಯದ ಶಾಮಿಯಾನ ಡೆಕೋರೇ?ನ್ ಸಪ್ಲೈ, ಲೈಟಿಂಗ್, ಧ್ವನಿವರ್ಧಕ ಮಾಲೀಕರಿಗೆ ಅತ್ಯಂತ ಸಹಕಾರಿಯಾಗಿದೆ, ಶಾಮಿಯಾನ ಮಳಿಗೆಗಳ ಬೃಹತ್ ವಸ್ತುಪ್ರದರ್ಶನದಲ್ಲಿ ಕಡಿಮೆ ಮೊತ್ತದಲ್ಲಿ ಅಲಂಕಾರಿಕ ಸಾಮಗ್ರಿಗಳು ದೊರೆಯಲಿವೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕ ಘಟಕದ ಕಾರ್ಯದರ್ಶಿ ಸುರೇಶ್ ಪಿ., ಖಜಾಂಚಿ ರವಿತೇಜ. ಪಿ. ಅಶೋಕ್ ನಾಯಕ್ ಬಾಬು ಫ್ಲವರ್ಸ್, ಮೋಹನ್ ಲೆಕ್ಕಿಹಾಳ, ಗುಂಡೂರು ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಗುರುರಾಜ ಚಳ್ಳಾರಿ ಅಧ್ಯಕ್ಷರು, ತಾಲೂಕ ಡೆಕೊರೇಷನ್ ಶಾಮೀಯಾನ ಮಾಲಿಕರ ಸಂಘ, ಗಂಗಾವತಿ.
ಮೊ.ನಂ: ೯೭೪೧೯೮೦೩೧೫

Get real time updates directly on you device, subscribe now.

Comments are closed.

error: Content is protected !!