ಶಿಕ್ಷಕರಿಂದ ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಪಾಠ: ಭೂಮರಡ್ಡಿ

Get real time updates directly on you device, subscribe now.

ಕೊಪ್ಪಳ: ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್ ಡಿ ಎ ಕೂಟದ ಅಭ್ಯರ್ಥಿಗಳ ಜಯ ಭ್ರಷ್ಟ ಕಾಂಗ್ರೆಸ್ ಪಕ್ಷಕ್ಕೆ ಶಿಕ್ಷಕರು ಕಲಿಸಿದ ಸರಿಯಾದ ಪಾಠ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಹೇಳಿದ್ದಾರೆ.


“ಕಾಂಗ್ರೆಸ್ ಸರಕಾರದ ವಿರುದ್ಧ ಶಿಕ್ಷಕರು ಮತ್ತು ಪದವೀಧರರು ಭ್ರಮನಿರಸನಗೊಂಡಿದ್ದರು. ಶಿಕ್ಷಕರ ಸಮಸ್ಯೆಗಳನ್ನು ಈಡೇರಿಸಲು ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ನಿಯಮಿತವಾಗಿ ನೇಮಕಾತಿ ನಡೆಯಲಿಲ್ಲ. ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿಯೇ ಉಳಿದವು. ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದು ಪ್ರಕ್ರಿಯೆಗಳೇ ರದ್ದಾದವು. ಕಾಂಗ್ರೆಸ್ ಎಸ್ ಐ ಆರ್ ಪ್ರಕ್ರಿಯೆ ಕುರಿತು ಸುಳ್ಳಿನ ಸಂಕಥನಗಳನ್ನು ಹರಡಿತು.

ಸ್ಟಿಂಗ್ ಆಪರೇಷನ್ ಮೂಲಕ ಮತದಾರರ ವಿಶ್ವಾಸ ಕಳೆದುಕೊಂಡಿತು. ಇದರಿಂದ ರೋಸಿ ಹೋದ ಶಿಕ್ಷಕರು ಮತ್ತು ಪದವೀಧರರು, ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿದ್ದಾರೆ,” ಎಂದು ಅವರು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಗೆಲುವು ಎನ್ ಡಿಎ ಒಕ್ಕೂಟದ ಬಗ್ಗೆ ಮತದಾರರ ಒಲವನ್ನು ತೋರಿಸುತ್ತದೆ. ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ಎನ್ ಡಿಎ ಒಕ್ಕೂಟ ಅಬೂತಪೂರ್ವ ಗೆಲುವು ಸಾಧಿಸುವುದನ್ನು ಈ ಫಲಿತಾಂಶ ಸ್ಪಷ್ಟವಾಗಿ ಹೇಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಎನ್‌ಡಿಎ ಒಕ್ಕೂಟ ಅಧಿಕಾರಕ್ಕೆ ಬರುವುದನ್ನು ಶತಃಸಿದ್ಧ ಎಂದು ಅವರು ಹೇಳಿದ್ದಾರೆ.

ಪದವೀಧರ ಮತ್ತು ಶಿಕ್ಷಕರ ಎಲ್ಲ ಮತದಾರರಿಗೂ ಧನ್ಯವಾದಗಳು ಮತ್ತು ಅಭ್ಯರ್ಥಿಗಳಿಗೆ ಅಭಿನಂದನೆಗಳು ಎಂದು ಅವರು ಹೇಳಿದ್ದಾರೆ.

Get real time updates directly on you device, subscribe now.

Comments are closed.

error: Content is protected !!