ಕೊಪ್ಪಳ ಜಿಲ್ಲೆ: ಎಸ್‌ಐಆರ್ ಬಳಿಕ ಅಂತಿಮ ಮತದಾರರ ಪಟ್ಟಿಯಲ್ಲಿ 10,59,164 ಜನ

ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ, ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)-2026ರ ಪ್ರಕ್ರಿಯೆ ಜಿಲ್ಲೆಯಲ್ಲಿ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ 5,27,459 ಪುರುಷ ಮತದಾರರು, 5,31,641 ಮಹಿಳಾ ಮತದಾರರು ಹಾಗೂ 64 ತೃತಿಯ ಲಿಂಗಿಗಳು ಸೇರಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 10,59,164 ಮತದಾರರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ಸಹ ಕಳೆದ ಜೂನ್ ದಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿತ್ತು. ಇದೀಗ ಅಕ್ಟೋಬರ್ 27ರಂದು
ಅಂತಿಮ ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗಿದೆ. ಎಸ್‌ಐಆರ್ ಬಳಿಕ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರವಾರು 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 1,09,826 ಪುರುಷರು ಹಾಗೂ 1,07,076 ಮಹಿಳೆಯರು ಮತ್ತು 9 ಜನ ಇತರೆ ಸೇರಿ ಒಟ್ಟು 2,16,911 ಮತದಾರರಿದ್ದಾರೆ. 61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 1,04,457 ಪುರುಷರು ಹಾಗೂ 1,07,451 ಮಹಿಳೆಯರು ಮತ್ತು 13 ಇತರೆ ಸೇರಿ ಒಟ್ಟು 2,11,921 ಮತದಾರರಿದ್ದಾರೆ. 62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 93,506 ಪುರುಷರು ಹಾಗೂ 95,638 ಮಹಿಳೆಯರು ಮತ್ತು ಇತರೆ 15 ಸೇರಿ ಒಟ್ಟು 1,89,159 ಮತದಾರರಿದ್ದಾರೆ. 63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 1,05,360 ಪುರುಷರು ಹಾಗೂ 1,04,939 ಮಹಿಳೆಯರು ಮತ್ತು 11 ಜನ ಇತರೆ ಸೇರಿ ಒಟ್ಟು 2,10,310 ಮತದಾರರಿದ್ದಾರೆ. 64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 1,14,310 ಪುರುಷರು ಹಾಗೂ 1,16,537 ಮಹಿಳೆಯರು ಮತ್ತು 16 ಇತರೆ ಸೇರಿ ಒಟ್ಟು 2,30,863 ಮತದಾರರಿದ್ದಾರೆ ಎಂದು ಅವರು ಕ್ಷೇತ್ರವಾರು ಮತದಾರರ ಮಾಹಿತಿ ನೀಡಿದರು.
ಅಂತಿಮ ಮತದಾರರ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 11,808 ಪುರುಷರು, 9,702 ಮಹಿಳೆ ಹಾಗೂ 1 ಇತರೆ ಸೇರಿ ಒಟ್ಟು 21,511 ಜನ ಯುವ ಮತದಾರರಿದ್ದಾರೆ. 8,897 ಪುರುಷರು, 6,357 ಮಹಿಳೆಯರು ಹಾಗೂ 1 ಇತರೆ ಸೇರಿ ಒಟ್ಟು 15,255 ವಿಕಲಚೇತನ ಮತದಾರರು ಇದ್ದಾರೆ. 2,326 ಪುರುಷರು ಹಾಗೂ 5,247 ಮಹಿಳೆಯರು ಸೇರಿ ಒಟ್ಟು 6,053 ಹಿರಿಯ ನಾಗರಿಕ (85 ವರ್ಷ ಮೇಲ್ಪಟ್ಟ) ಮತದಾರರಿದ್ದಾರೆ. ಮತ್ತು 494 ಪುರುಷರು ಹಾಗೂ 27 ಮಹಿಳೆಯರು ಸೇರಿ ಒಟ್ಟು 521 ಸೇವಾ ಮತದಾರರು ಇದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದ ಅರ್ಹ ವ್ಯಕ್ತಿಗಳು ನಮೂನೆ-6ರ ಮೂಲಕ ಅರ್ಜಿ ಸಲ್ಲಿಸಬಹುದು. ಮತದಾರರ ಪಟ್ಟಿಯಲ್ಲಿ ಹೆಸರನ್ನು ತೆಗೆದುಹಾಕಲು ನಮೂನೆ-7ರ ಮೂಲಕ ಅರ್ಜಿ ಸಲ್ಲಿಸಬಹುದು. ಮತದಾರರ ಪಟ್ಟಿಯಲ್ಲಿನ ವಿವರ/ನಮೂದುಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ ನಮೂನೆ-8ರ ಮೂಲಕ ಅರ್ಜಿ ಸಲ್ಲಿಸಬಹುದು. ನಮೂನೆ-6 ಹೊಸ ಮತದಾರರಾಗಿ ನೋಂದಾಯಿಸಲು, ನಮೂನೆ-6ಎ ಹೊಸ ಸಾಗರೋತ್ತರ ಮತದಾರರಾಗಿ ನೋಂದಾಯಿಸಲು, ನಮೂನೆ-7 ಹೆಸರು ತೆಗೆದುಹಾಕುವಿಕೆ, ನಮೂನೆ-8 ನಿವಾಸ ಸ್ಥಳ ಬದಲಾವಣೆ/ ನಮೂದುಗಳ ತಿದ್ದುಪಡಿ/ ಎಪಿಕ್ ಬದಲಾವಣೆ/ ಪಿಡಬ್ಲೂö್ಯಡಿ ಗುರುತು ದಾಖಲಿಸುವುದು, ಆನ್‌ಲೈನ್‌ನಲ್ಲಿ ಸಲ್ಲಿಸಲು ಇಸಿಐ ನೆಟ್ ಆ್ಯಪ್ (ಇಅIಓeಣ ಂಠಿಠಿ) ಮೂಲಕ ಲಾಗಿನ್ ಮಾಡಿ ಅಥವಾ https://voters.eci.gov.in ಗೆ ಭೇಟಿ ನೀಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
Comments are closed.