ಗ್ರಾಹಕರಿಗೆ ಶುದ್ಧನೀರು ಕೊಡುವಂತೆ ಹೋಟೆಲ್ ಮಾಲೀಕರಿಗೆ ಸೂಚನೆ

 ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಹೋಟೆಲ್, ಉದ್ದಿಮೆ, ವಾಣಿಜ್ಯ ಚಟುವಟಿಕೆ ನಡೆಸುವ ಮಾಲೀಕರು ಗ್ರಾಹಕರಿಗೆ ಕುಡಿಯಲು ಶುದ್ಧನೀರು ಕೊಡುವಂತೆ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ ಸೂಚನೆ ನೀಡಿದ್ದಾರೆ. ಶುದ್ಧ ನೀರು ನೀಡಿ : ಬೇಸಿಗೆಯಲ್ಲಿ ಆಹಾರದಿಂದ, ನೀರಿನಿಂದ ಸಾರ್ವಜನಿಕರಿಗೆ ರೋಗಗಳು ಹರಡುವ ಸಂಭವವಿದ್ದು  ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಹೊಳೆಯ ನೀರು, ಬೋರ್‌ವೆಲ್ ನೀರನ್ನು ನೇರವಾಗಿ ಕುಡಿಯಲು ನೀಡದೆ ಕಡ್ಡಾಯವಾಗಿ ಫಿಲ್ಟರ್ ನೀರನ್ನು ಒದಗಿಸಬೇಕು.  ಎಲ್ಲೆಂದರಲ್ಲಿ ಕಸ ಬಿಸಾಡದಿರಿ : ವಾಣಿಜ್ಯ ಚಟುವಟಿಕೆ ನಡೆಸುವಂತಹ ಎಲ್ಲಾ ಹೋಟೆಲ್, ಉದ್ದಿಮೆದಾರರು ಕಸವನ್ನು ಚರಂಡಿಯಲ್ಲಿ, ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದು ಹಲವಾರು ಬಾರಿ ನೋಟಿಸ್ ನೀಡಲಾಗಿದ್ದರೂ ಸಹ ಕಸವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದು ಕಂಡುಬಂದಿದೆ.  ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಸವನ್ನು ಮೂಲ ಹಂತದಲ್ಲಿ ಹಸಿ, ಒಣ ಕಸವನ್ನಾಗಿ ಬೇರ್ಪಡಿಸಿ, ನಗರಸಭೆ ವಾಹನಗಳಲ್ಲಿ ಹಾಕಬೇಕು. ಹೋಟೆಲ್ ಹಾಗೂ ಅಂಗಡಿಗಳ ಮುಂಭಾಗ ಅಥವಾ ಅಕ್ಕಪಕ್ಕದ…

Read More