ಕನ್ಹಯ್ಯ ಕುಮಾರ್ ಪ್ರತಿರೋಧ್ ~ 2 ವೇದಿಕೆಯಲ್ಲಿ ಮಾಡಿದ ಭಾಷಣದ ಮುಂದುವರಿದ ಭಾಗ .

ಭಾವಾನುವಾದ : ಚೇತನಾ ತೀರ್ಥಹಳ್ಳಿ   ಇಲ್ಲಿರುವ ಹಿರಿಯರಲ್ಲಿ ನಮ್ಮದೊಂದು ಶಿಕಾಯತ್ ಇದೆ. ನೀವು ಅದೆಷ್ಟು ಮತಭೇದ ಹುಟ್ಟುಹಾಕಿದ್ದೀರೆಂದರೆ, ಇವತ್ತು ನಮಗೆ ಒಗ್ಗಟ್ಟಿನಿಂದ ಮುಂದುವರೆಯೋದು ಮಹಾಪ್ರಯಾಸವಾಗಿಬಿಟ್ಟಿದೆ. ನೀವು ಹಾಗೆ ಮಾಡಿಲ್ಲದಿದ್ದರೆ, ಇಂದು ನಾವು ಗಾಂಧಿ ಮತ್ತು ಅಂಬೇಡ್ಕರರನ್ನು ಒಗ್ಗೂಡಿಸಲು ಇಷ್ಟೆಲ್ಲ ಕಷ್ಟ ಪಡಬೇಕಾಗ್ತಿರಲಿಲ್ಲ. ನಾವು ನಮ್ಮ ಆದರ್ಶಪುರುಷರನ್ನು ಕುಸ್ತಿಯ ಅಖಾಡಾಕ್ಕೆ ಇಳಿಸುವ ಅಗತ್ಯವಾದರೂ ಏನಿದೆ? ಇದರಲ್ಲಿ ಗೆದ್ದವರನ್ನು ಒಪ್ಪಿಕೊಳ್ಳೋದು, ಸೋತವರನ್ನ ಬಿಟ್ಟುಬಿಡಬೇಕೇನು? ಅವರು ತಮ್ಮ ಯುಗದಲ್ಲಿ ಜೀವಿಸಿದ್ದರು… ಅವತ್ತಿನ ಅಗತ್ಯಕ್ಕೆ ತಕ್ಕಂತೆ. ತಮ್ಮ ಕನ್ನಡಕದಿಂದಲೇ ಜಗತ್ತನ್ನು ನೋಡಿದರು ಮತ್ತು ಹೋರಾಡಿದರು. ತಮ್ಮದೇ ರೀತಿಯಲ್ಲಿ ಭವಿಷ್ಯವನ್ನು ರೂಪಿಸಿದರು. ನಾವೀಗ ನಮ್ಮದೇ ಯುಗದಲ್ಲಿ ಜೀವಿಸ್ತಾ ಇದ್ದೀವಿ. ನಮ್ಮ ಕನ್ನಡಕದಿಂದ ಜಗತ್ತನ್ನ ನೋಡ್ತಾ ಇದ್ದೀವಿ. ಅಗತ್ಯ ಬಿದ್ದರೆ ಕನ್ನಡಕ ಕಳಚಿಟ್ಟು ನೋಡ್ತೀವಿ. ಯಾವಾಗ ಯಾರ ಅಗತ್ಯ ಬೀಳ್ತದೋ ಅವರೊಂದಿಗೆ ಕೈಜೋಡಿಸ್ತೀವಿ. ಈ ದೇಶದಲ್ಲಿ ಫ್ರೀಲಾನ್ಸ್ ಗೋಡ್ಸೆಗಳಿಂದ ಬಚಾವಾಗಬೇಕು ಅಂದರೆ, ನಾವು ಅಂಬೇಡ್ಕರ್…

Read More