ಗ್ರಾಮಗಳಿಗೂ ಯೋಜನಾಬದ್ಧ ಬಡಾವಣೆಗಳ ನಿರ್ಮಾಣ ಅಗತ್ಯವಿದೆ- ಬಸವರಾಜ ರಾಯರಡ್ಡಿ

ನಗರಗಳಲ್ಲಿ ನಿರ್ಮಾಣವಾಗುತ್ತಿರುವ ರೀತಿಯಲ್ಲಿ ಗ್ರಾಮಗಳಲ್ಲೂ ಯೋಜನಾಬದ್ಧ ಬಡಾವಣೆಗಳ ನಿರ್ಮಾಣ ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಅಭಿಪ್ರಾಯಪಟ್ಟರು. ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ನಗರಗಳಿಗೆ ಮಾತ್ರ ಸೀಮಿತವಿರುವ ನಗರಾಭಿವೃದ್ಧಿ ಪ್ರಾಧಿಕಾರದ ರಚನೆಯ ಮಾದರಿ ಇದೀಗ, ಗ್ರಾಮಗಳ ಅಭಿವೃದ್ಧಿಯ ಉದ್ದೇಶಕ್ಕೆ ಗ್ರಾಮಗಳಿಗೂ ಅಗತ್ಯವಾಗಿದೆ. ರಸ್ತೆ, ಕುಡಿಯುವ ನೀರು, ಒಳಚರಂಡಿ, ಯೋಜನಾಬದ್ಧ ಕಾಲೋನಿಗಳ ನಿರ್ಮಾಣ ವ್ಯವಸ್ಥೆ ಗ್ರಾಮಗಳಿಗೂ ಅಗತ್ಯವಾಗಿದೆ. ಇದರಿಂದ ನೆಮ್ಮದಿಯ ಬದುಕು ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಯೋಜನಾ ಬದ್ಧ ಬಡಾವಣೆಗಳ ಅಗತ್ಯ ಗ್ರಾಮಗಳಿಗೂ ಬೇಕಾಗಿದೆ. ಪ್ರತಿ ವರ್ಷ ದೇಶದಲ್ಲಿ ನಗರೀಕರಣ ಹೆಚ್ಚಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿನ ಜನ ಉದ್ಯೋಗ, ಶಿಕ್ಷಣ, ವ್ಯವಹಾರಗಳಿಗಾಗಿ ನಗರಕ್ಕೆ ವಲಸೆ ಹೋಗುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.…

Read More