ಸಮಾಜದ ಹಾದಿತಪ್ಪಿಸುವ ಸಂಘಟನೆಗಳಿಂದ ಯುವಕರು ದೂರವಿರಿ- ಶಿವರಾಜ ತಂಗಡಗಿ

: ಸಾರ್ವಜನಿಕ ಹಿತಾಸಕ್ತಿಯ ಉದ್ದೇಶವನ್ನಿಟ್ಟುಕೊಂಡು ಯುವ ಜನತೆ ಸೃಜನಾತ್ಮಕ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು.  ಆದರೆ ಸಮಾಜದ ಹಾದಿ ತಪ್ಪಿಸುವ ಸಂಘಟನೆಗಳಿಂದ ಯುವಕರು ದೂರವಿರುವುದು ಒಳಿತು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್. ತಂಗಡಗಿ ಅವರು ಕರೆ ನೀಡಿದರು.   ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಗಂಗಾವತಿ ತಾಲೂಕು ಕನಕಗಿರಿಯ ಎಪಿಎಂಸಿ ಸಮುದಾಯ ಭವನದಲ್ಲಿ ಮಂಗಳವಾರದಂದು ಆಯೋಜಿಸಲಾಗಿದ್ದ ಎರಡು ದಿನಗಳ ಕಲಬುರಗಿ ವಿಭಾಗ ಮಟ್ಟದ ಯುವಜನ ಮೇಳವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.   ಯುವಕರು ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದು, ಕಂಪ್ಯೂಟರ್, ವಿಡಿಯೋ ಗೇಮ್‌ನಂತಹ ಚಟುವಟಿಕೆಗಳಲ್ಲಿ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.  ಈ ಹಿಂದೆ ಕ್ರೀಡೆ, ಗ್ರಾಮೀಣ ಸ್ಪರ್ಧೆಗಳು ಎಂದರೆ ಯುವಕರು ತಂಡೋಪತಂಡವಾಗಿ ಒಂದೆಡೆ ಸೇರಿ, ತಮ್ಮ…

Read More