ಉಚಿತ ವಿಜ್ಞಾನ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭ

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಸಂಯುಕ್ತ ಪ್ರೌಡ ಶಾಲೆಯಲ್ಲಿ ಇಂದು ಸಮರ್ಪಣ್ ಟ್ರಸ್ಟ ಇನ್ಪೋಸಿಸ್ ಬೆಂಗಳೂರು ಇದರ ವತಿಯಿಂದ ಉಚಿತ ವಿಜ್ಞಾನ ಶೈಕ್ಷಣಿಕ ಪರಿಕರಗಳ ವಿತರಣಾ ಸಮಾರಂಭ ಜರುಗಿತು. ಆರಂಭದಲ್ಲಿ ಸಮರ್ಪಣ್ ಟ್ರಸ್ಟ ಇನ್ಪೋಸಿಸ್‌ನ ಮುಖ್ಯಸ್ಥರಾದ ರಿತೇಶಕುಮಾರ ಸಸಿಗೆ ನೀರೆರೆಯುವದರ ಮೂಲಕ ಸಮಾರಂಭ ಉದ್ಘಾಟಿಸಿದರು. ಬಳಿಕ ಮಾತನಾಡಿ ಇನ್ಪೋಸಿಸ್‌ನ ಎಲ್ಲ ಉದ್ಯೋಗಿಗಳು ಸೇರಿಕೊಂಡು ಕಟ್ಟಿರುವ ಈ ಸಮರ್ಪಣ್ ಟ್ರಸ್ಟ ಇದು ೨೦೧೪ ರಿಂದ ಮೊದಲು ನಾಡಿನ ಎಲ್ಲ ವಿದ್ಯಾರ್ಥಿಗಳಿಗೆ ಪಾಟಿ, ಪೆನ್ಸಿಲ್.ಕಂಪ್ಯೂಟರ ಹಾಗೂ ನೋಟ್ ಬುಕ್ಸಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು. ಈ ಸಲ ೮,೯ ಹಾಗೂ ೧೦ ನೇ ವರ್ಗದ ವಿದ್ಯಾರ್ಥಿಗಳ ವಿಜ್ಞಾನದ ಪಠ್ಯಪುಸ್ತಕವನ್ನು ಮುಂದಿಟ್ಟುಕೊಂಡು ಅಲ್ಲಿ ಬರುವ ವಿಜ್ಞಾನದ ಪರಿಕರಗಳನ್ನೇ ವಿತರಿಸಬೇಕೆಂದು ನಿರ್ಧರಿಸಿದೆವು. ಈಗಾಗಲೇ ೧೨ ಜಿಲ್ಲೆಗಳಿಗೆ ತೆರಳಿ ವಿಜ್ಞಾನದ ಶೈಕ್ಷಣಿಕ ಪರಿಕರಗಳನ್ನು ನೀಡಿದ್ದೇವೆ. ಈಗ ೧೩ ನೇ ಯದಾಗಿ ಕೊಪ್ಪಳಕ್ಕೆ ವಿತರಣೆ ಮಾಡುತ್ತಲಿದ್ಧೇವೆ. ಎಲ್ಲ ಮಕ್ಕಳು ಇಂಜೀನಿಯರ್…

Read More