ಉದ್ಯೋಗಮೇಳ ಯಶಸ್ವಿ: ೧,೪೦೦ ಅಭ್ಯರ್ಥಿಗಳ ನೇಮಕಾತಿ 

೪,೫೦೦ ಆಕಾಂಕ್ಷಿಗಳ ನೋಂದಣಿ | ೨,೩೦೦ ಜನರಿಗೆ ಅಂತಿಮ ಹಂತಕ್ಕೆ ಆಹ್ವಾನ೪,೫೦೦ ಆಕಾಂಕ್ಷಿಗಳ ನೋಂದಣಿ | ೨,೩೦೦ ಜನರಿಗೆ ಅಂತಿಮ ಹಂತಕ್ಕೆ ಆಹ್ವಾನ ಕೊಪ್ಪಳ: ನಗರದ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯಮಟ್ಟದ ಬೃಹತ್ ಉದ್ಯೋಗಮೇಳ ಅಭೂತಪೂರ್ವ ಯಶಸ್ಸು ಕಂಡಿದ್ದು ಒಟ್ಟು ೧,೪೦೦ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗಿದೆ.ಸಂಸದ ಸಂಗಣ್ಣ ಕರಡಿ ಹಾಗೂ ಅವರ ಪುತ್ರರಾದ ಅಮರೇಶ ಕರಡಿ ಮತ್ತು ಗವಿಸಿದ್ದಪ್ಪ ಕರಡಿ ನಗರದ ಹೊರಲವಯದ ಮಿಲೇನಿಯಂ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಘಟಿಸಿದ್ದ ಈ ಬೃಹತ್ ಉದ್ಯೋಗಮೇಳದಲ್ಲಿ ಭಾನುವಾರ ಒಟ್ಟು ೪,೫೦೦ ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ ೧,೪೦೦ ಅಭ್ಯರ್ಥಿಗಳಿಗೆ ಸಂದರ್ಶನ ಮುಗಿದ ಕೂಡಲೇ ಆಹ್ವಾನ ಪತ್ರ (ಲೆಟರ್ ಆಫ್ ಇಂಟೆಂಟ್) ನೀಡಲಾಯಿತು. ಉಳಿದ ೨,೩೦೦ ಅಭ್ಯರ್ಥಿಗಳನ್ನು ಎರಡನೇ ಹಾಗೂ ಅಂತಿಮ ಹಂತಕ್ಕೆ ಆಹ್ವಾನಿಸಲಾಗಿದೆ. ಈ ಹಂತ ಎದುರಿಸುವ ಕುರಿತು ಕೌಶಲ್ಯ ತರಬೇತಿಯಲ್ಲಿ ಸಾಕಷ್ಟು ಸುದೀರ್ಘ ತರಬೇತಿ…

Read More