ಗುರುಸ್ಮರಣೋತ್ಸವದ ನಿಮಿತ್ಯ ಪಾದಯಾತ್ರೆ : ಉದ್ಘಾಟನೆಗಳು

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೦೨-೦೪-೨೦೧೬  ರಂದು ಶನಿವಾರ  ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಜರುಗಲಿದೆ. ಈ ನಿಮಿತ್ಯವಾಗಿ ಪ್ರತಿ ವರ್ಷದ ಪದ್ಧತಿಯಂತೆ ಈ ಸಾರೆಯೂ ಬೆಳಿಗ್ಗೆ  ೬ ಗಂಟೆಗೆ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಳೆಮಲ್ಲೇಶ್ವರ ದೇವಸ್ಥಾದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ ಜರುಗುವದು. ಈ ಪಾದಯಾತ್ರೆಯಲ್ಲಿ ಕೆಲ ನಾಡಿನ ಹರಗುರುಚರ ಮೂರ್ತಿಗಳು ಹಾಗೂ ಅಸಂಖ್ಯಾತ ಭಕ್ತಾಧಿಗಳು ಭಾಗವಹಿಸುವರು.  ಉದ್ಘಾಟನೆಗಳು ಸಂಸ್ಥಾನ ಶ್ರೀಗವಿಮಠದಲ್ಲಿ ಜರುಗಲಿರುವ ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ದಿನಾಂಕ ೦೨-೦೪-೨೦೧೬ ರಂದು ಶನಿವಾರ ಬೆಳಿಗ್ಗೆ ೧೦ ಕ್ಕೆ ಶ್ರೀಗವಿಮಠದ ಆವರಣದಲ್ಲಿ ದಿ.ಶ್ರೀ ನೆಕ್ಕಂಟಿ ರಾಮರಾವ್ ಸಾ.ಗಂಗಾವತಿ ಇವರ ಸ್ಮರಣಾರ್ಥವಾಗಿ ನಿರ್ಮಿಸಿದ ನೂತನ ಮಹಾದಾಸೋಹ ಭವನ ಕಟ್ಟಡವು ಕಲಬುರ್ಗಿಯ ಶರಣಬಸವ ಸಂಸ್ಥಾನದ ಪೀಠಾಧಿಪತಿಗಳಾದ ಡಾ.ಶರಣಬಸಪ್ಪ ಅಪ್ಪ ಇವರ ಅಮೃತ ಹಸ್ತದಿಂದ ಉದ್ಘಾಟನೆಯಾಗಲಿದೆ. ಅಂದು ಸಂಜೆ ೫.೩೦ ಕ್ಕೆ ಶ್ರೀಗವಿಸಿದ್ದೇಶ್ವರ…

Read More