ಅಜ್ಜನ ಜಾತ್ರೆಗೆ ಬನ್ನಿ -ಭಕ್ತಾಧಿಗಳಿಗೆ ಉಚಿತವಸತಿ ವ್ಯವಸ್ಥ

ಕೊಪ್ಪಳ : ಶ್ರೀಗವಿಸಿದ್ಧೇಶ್ವರ ಮಹಾರಥೋತ್ಸವವು ಜನೆವರಿ ೦೩ ರಂದು ಜರುಗುವ ಪ್ರಯುಕ್ತ ಗವಿಮಠದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಲಿವೆ. ಗವಿಮಠದ ಜಾತ್ರೆ ಪ್ರತಿ ವರ್ಷದಿಂದ ವರ್ಷಕ್ಕೆ ವಿಭಿನ್ನತೆಯನ್ನು ಪಡೆದುಕೊಳ್ಳುತ್ತಾ ನಾಡಿನಾಧ್ಯಂತ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಸುಮಾರು ವರ್ಷಗಳಿಂದ ಶ್ರೀ ಗವಿಸಿದ್ದೇಶ್ವರ ಜಾತ್ರಾಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಉಚಿತವಾಗಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಕಳೆದ ವರ್ಷ ೨೦೧೭ ರ ಜಾತ್ರೆಯಲ್ಲಿ ದಾಖಲೆಯ ೮೦೦೦ ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಸಮರ್ಪಕ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಈ ವರ್ಷದ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಸುಮಾರು ಶ್ರೀ ಗವಿಮಠದ ಸಂಸ್ಥೆಗಳ ಮತ್ತು ಸ್ಥಳೀಯ ಸಂಸ್ಥೆಗಳ ಸುಮಾರು ೨೩ ಸ್ಥಳಗಳಲ್ಲಿ ವಸತಿಯನ್ನು ಕಲ್ಪಿಸಲಾಗಿದೆ. ಈ ಸಲದ ಜಾತ್ರೆಗೆ ಐದಾರು ಲಕ್ಷ ಜನ ಭಕ್ತರು ಬರುತ್ತಿರುವದರಿಂದ ಬಹುದೂರದಿಂದ ಬರುವ ವಿವಿಧ ನಗರಗಳ ಹಾಗೂ ಹಳ್ಳಿಗಳ ಭಕ್ತಾಧಿಗಳಿಗೆ ಉಳಿದುಕೊಳ್ಳುವ ಸಲುವಾಗಿ ಎಸ್.ಜಿ.ಟ್ರಸ್ಟ್ ಅಡಿಯಲ್ಲಿ ಬರುವ ೦೧)…

Read More